ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುಳು ಭಾಷೆ ಉಳಿವಿಗೆ ಹೋರಾಟ’

ತುಳುನಾಡ ರಕ್ಷಣಾ ವೇದಿಕೆ ನೂತನ ಜಿಲ್ಲಾ ಕಚೇರಿ ಉದ್ಘಾಟನೆ
Last Updated 22 ಏಪ್ರಿಲ್ 2017, 6:16 IST
ಅಕ್ಷರ ಗಾತ್ರ
ಉಡುಪಿ: ತುಳುನಾಡ ರಕ್ಷಣಾ ವೇದಿಕೆ ತುಳು ಭಾಷೆ ಉಳಿವಿಗಾಗಿ ಹೋರಾಟ ಮಾಡುತ್ತಿದೆ. ಆ ಮೂಲಕ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜೆಪ್ಪು ಹೇಳಿದರು. 
 
ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪದ ಕೃಷ್ಣ ಕೃಪಾ ಕಾಂಪ್ಲೆ ಕ್ಸ್‌ನಲ್ಲಿ ಆರಂಭಿಸಲಾದ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ನೂತನ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
 
ತುಳು ಚಲನಚಿತ್ರಗಳಿಗೆ ಗೌರವ, ಮನ್ನಣೆ ಸಿಗುತ್ತಿಲ್ಲ. ಹಾಗಾಗಿ ತುಳು ಚಿತ್ರಗಳಿಗೆ ಪ್ರತ್ಯೇಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಗತ್ಯವಿದೆ. ಅಲ್ಲದೆ ತುಳುಚಿತ್ರಕ್ಕೆ ಚಿತ್ರಮಂದಿರದ ಸಮಸ್ಯೆ ಯಿಂದಾಗಿ ಸಾಕಷ್ಟು ಯುವ ಪ್ರತಿಭೆಗಳು ಕಮರಿ ಹೋಗುತ್ತಿದ್ದು, ಇದನ್ನು ಹೋಗಲಾಡಿಸುವ ಸಲುವಾಗಿ ತುಳುವರು ತಮ್ಮ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕಾಗಿ ನಾವು ಕಲಾವಿದರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. 
 
ಚಿತ್ರನಟ ಆಸ್ಥಿಕ್‌ ಅವಿನಾಶ್‌ ಶೆಟ್ಟಿ ಮಾತನಾಡಿ, ತುಳು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ತುಳು ಚಲನಚಿತ್ರ ಮಂಡಳಿ ಇನ್ನಷ್ಟು ಅಭಿವೃದ್ಧಿಯಾಗಬೇಕು. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ಅವರು ಹೇಳಿದರು. 
 
ನಟಿ ರಂಜಿತಾ, ನಟ ಮಿಥುನ್‌ ಶೆಟ್ಟಿ,ವೇದಿಕೆ ಜಿಲ್ಲಾಧ್ಯಕ್ಷ ರಮೇಶ್‌ ಪೂಜಾರಿ ಶೀರೂರು, ಕಾರ್ಯದರ್ಶಿ ಅಜರುದ್ದೀನ್‌, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂಶ್‌ ಭಟ್‌ ಕಡಬ, ಸಂಘಟನಾ ಕಾರ್ಯದರ್ಶಿ ಆನಂದ ಅಮೀನ್‌ ಅಡ್ಯಾರ್‌, ಕೋಶಾಕಾರಿ ಅಬ್ದುಲ್‌ ಹಮೀದ್‌, ಯುವ ಘಟಕ ಜಿಲ್ಲಾಧ್ಯಕ್ಷ ಹರೀಶ್‌ ಶೆಟ್ಟಿ, ರಕ್ಷಿತಾ ಕೆ. ಬಂಗೇರ, ಸುಭಾಸ್‌ ಸುದಾನ್‌, ರೆಹ ಮಾನ್‌, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಜ್ಯೋತಿಕಾ ಜೈನ್‌ ಇದ್ದರು.
 
ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಂ. ಸಿರಾಜ್‌ ಅಡ್ಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜರುದ್ದೀನ್‌ ಸ್ವಾಗತಿಸಿದರು. ಸುಭಾಸ್‌ ಸುದನ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT