ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಟಿಪಿ ಆವರಣದಲ್ಲಿ ‘ತಾಲ್ಲೂಕು ಕಚೇರಿ’

ನೂತನ ರಟ್ಟೀಹಳ್ಳಿ ತಾಲ್ಲೂಕು ರಚನೆ ಬಳಿಕ ಗರಿಗೆದರಿದ ಚಟುವಟಿಕೆ: ಸಭೆ ನಡೆಸಿದ ಶಾಸಕರು
Last Updated 22 ಏಪ್ರಿಲ್ 2017, 6:53 IST
ಅಕ್ಷರ ಗಾತ್ರ
ರಟ್ಟೀಹಳ್ಳಿ: ‘ನೂತನ ರಟ್ಟೀಹಳ್ಳಿ ತಾಲ್ಲೂಕಿನ ಆಡಳಿತ ಕಚೇರಿಗಳನ್ನು ಪಟ್ಟಣದ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಚೇರಿ ಆವರಣದಲ್ಲಿ ಸ್ಥಾಪಿಸಲು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು. 
 
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ‘ರಟ್ಟೀಹಳ್ಳಿ ತಾಲ್ಲೂಕು ಆಡಳಿತ ಕಚೇರಿ ಪ್ರಾರಂಭ’ ಕುರಿತು ಸಭೆ ನಡೆಸಿದ ಅವರು, ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಮಾತನಾಡಿದರು.
 
‘ಯುಟಿಪಿ ಕಚೇರಿ ಆವರಣದಲ್ಲಿ 7 ಎಕರೆ 18 ಗುಂಟೆ ಜಾಗ ಇದೆ. ಎರಡು ಸುಸಜ್ಜಿತ ಕಚೇರಿಗಳನ್ನು ಹೊಂದಿದೆ. ಇಲ್ಲಿ 32 ವಸತಿ ಗೃಹಗಳು ಹಾಗೂ ಎರಡು ದಾಸ್ತಾನು ಕೊಠಡಿಗಳು ಇವೆ. ಯುಟಿಪಿ ಕಚೇರಿಗೆ ಒಂದು ಕಟ್ಟಡ ಸಾಕು’ ಎಂದು ಅವರು ವಿವರಿಸಿದರು. 
 
‘ಈಗ ಇರುವ ಕಟ್ಟಡಗಳನ್ನು ಬಹುಕಾಲ ಬಳಸದೇ ಇರುವುದರಿಂದ ದುರಸ್ತಿಯ ಅಗತ್ಯವಿದೆ. ಬಳಿಕ, ಸುಣ್ಣ –ಬಣ್ಣ ಹಚ್ಚಿ ಕಚೇರಿ ಪ್ರಾರಂಭಿಸಲು ಸಮಸ್ಯೆಯಿಲ್ಲ’ ಎಂದರು. 
 
ಸ್ಥಳದಲ್ಲೇ ತಹಶೀಲ್ದಾರ್ ಎ.ವಿ.ಶಿ ಗ್ಗಾವಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ದುರಸ್ತಿ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿ ಯರ್‌ಗಳಿಂದ ಮಾಹಿತಿ ಪಡೆದು, ಒಂದು ವಾರದಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು. 
 
ತುಂಗಾ ಮೇಲ್ದಂಡೆ ಯೋಜನೆ: ಇದೇ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ‘ತುಂಗಾ ಮೇಲ್ದಂಡೆ ಯೋಜನೆ ಪ್ರಾರಂಭವಾದ ದಿನದಿಂದ ಈ ತನಕ ಸ್ಥಳೀಯವಾಗಿ 33 ಪ್ರಕರಣಗಳು ಬಾಕಿ ಇವೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಉದ್ದೇಶಿತ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಷ್ಟು ಜಮೀನು ನೀರಾವರಿಗೆ ಒಳಡಿಸಿದ್ದೀರಿ? ಈ ಬಗ್ಗೆ ಸಮಗ್ರ ವರದಿ ನೀಡಿ’ ಎಂದು ಯುಟಿಪಿ ಅಧಿಕಾರಿಗಳಿಗೆ ಸೂಚಿಸಿದರು.
 
‘ಯೋಜನೆಯ ಮುಖ್ಯ ಕಾಲುವೆ, ಉಪ ಕಾಲುವೆ, ಹೊಲಗಾಲುವೆ, ಭೂ ಸ್ವಾಧೀನ, ಪರಿಹಾರ ಬಾಕಿ ಪ್ರಕರಣಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲು ಮೇ 5 ರಂದು ಯುಟಿಪಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ಸಮಗ್ರ ವರದಿಯ ಜೊತೆ ಬರಬೇಕು’ ಎಂದು ಸೂಚಿಸಿದರು. 
 
‘ಪ್ರಸ್ತುತ ಸಭೆಯಲ್ಲಿ 27 ಪ್ರಕರಣಗಳನ್ನು ಚರ್ಚಿಸಿದ್ದು, ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಇಲ್ಲಿನ ಕೆಲವು ಕಚೇರಿಗಳು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಆ ಕಚೇರಿಗಳ ಅವಶ್ಯಕತೆ ಕಂಡು ಬಂದರೆ ಮತ್ತೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕರು ರೈತರಿಗೆ ಭರವಸೆ ನೀಡಿದರು. 
 
ಹಿರೇಕೆರೂರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ, ಉಪಾಧ್ಯಕ್ಷ ಪ್ರಕಾಶ ಸುಣಗಾರ, ಸದಸ್ಯ ಹೇಮಣ್ಣ ಮುದರಡ್ಡೇರ, ರಟ್ಟೀಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಸ ಹದಡೇರ, ಸದಸ್ಯರಾದ ದೇವರಾಜ ನಾಗಣ್ಣನವರ, ರಾಜು ಪವಾರ, ರವಿ ಮುದಿಯ ಪ್ಪನವರ, ಎಸ್.ಬಿ.ಪಾಟೀಲ, ಬಸವ ರಾಜ್‌ ಬಾಗೂರ, ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣವರ, ರುದ್ರಪ್ಪ ಬೆನ್ನೂರ, ಚಂದ್ರಶೇಖರ ಪುರದ, ಪ್ರಭು ನಾಡಗೇರ, ಚಂದ್ರ ಶೇಖರಪ್ಪ ತುಮ್ಮಿನಕಟ್ಟಿ, ಲಿಂಗರಾಜ ಕರಡೇರ, ತುಂಗಾ ಮೇಲ್ದಂಡೆ ಯೋಜನೆ ಎಂಜಿನಿಯರ್‌ಗಳಾದ ಕುಮಾರಸ್ವಾಮಿ, ಮನೋಹರ ಮತ್ತು ಕಡೂರ, ಶಿರಗಂಬಿ, ಮಕರಿ, ದೊಡ್ಡಗುಬ್ಬಿ, ಮಕರಿ, ಕುಡಪಲಿ, ಬುಳ್ಳಾಪುರ,ಯಡಗೋಡ ಮತ್ತಿತರರು ಇದ್ದರು. 
****
ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಅನೇಕ ಕಾಮಗಾರಿಗಳು ಬಾಕಿ ಇವೆ. ರಾಮತೀರ್ಥದ ಸಮೀಪ ನೀರಿನ ಸೋರಿಕೆ ತಡೆಗಟ್ಟಬೇಕು
ಮಹೇಶ ಗುಬ್ಬಿ, ಅಧ್ಯಕ್ಷ, ಹಿರೇಕೆರೂರ ತಾಲ್ಲೂಕು ಪಂಚಾಯ್ತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT