ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳಾ ಕ್ರೀಡಾ ಪ್ರತಿಭೆಗಳಿಗೆ ತರಬೇತಿ ಅಗತ್ಯ’

Last Updated 22 ಏಪ್ರಿಲ್ 2017, 7:03 IST
ಅಕ್ಷರ ಗಾತ್ರ
ನಿಪ್ಪಾಣಿ: ‘ನಮ್ಮ ದೇಶದ ಮಹಿಳೆಯರಲ್ಲಿ ಕ್ರೀಡಾ ಪ್ರತಿಭೆ ಇದ್ದರೂ, ತರಬೇತುದಾರರ ಕೊರತೆಯಿಂದ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆ ಇದೆ’ ಎಂದು ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಅರಿಫ್‌ ಅಲಿ ಖಾನ್‌ ಅಭಿಪ್ರಾಯಪಟ್ಟರು. 
 
ವಿ.ಎಸ್.ಎಂ. ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ (ಬೆಂಗಳೂರು ವಿಭಾಗ ಹೊರತುಪಡಿಸಿ) ಮಹಿಳೆಯರ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 
 
’ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಸೌಲಭ್ಯ ಒದಗಿಸಿ, ತರಬೇತುದಾರರನ್ನು ನೇಮಿಸಿ, ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ಅವಶ್ಯಕತೆ ಇದೆ’ ಎಂದರು.
 
‘ಸಾಂಪ್ರದಾಯಿಕ ನಂಬಿಕೆಗಳು, ಅನಕ್ಷರತೆ, ಕೀಳರಿಮೆ, ಸಂಕೋಚ ಸ್ವಭಾವ ಮೊದಲಾದ ಸಾಮಾಜಿಕ ಕಟ್ಟಳೆಗಳನ್ನು ದಾಟಿ ಮಹಿಳೆಯರು ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಭಾಗವಹಿಸಬೇಕು. ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆ ಒದಗಿಸಿದಲ್ಲಿ ಜಾಗತಿಕ ಮಟ್ಟದಲ್ಲಿ ಉನ್ನತ ಸಾಧನೆಗೈಯುವುದರಲ್ಲಿ ಸಂಶಯವಿಲ್ಲ’ ಎಂದರು.
 
‘ವಿ.ಎಸ್.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಬಡ್ಡಿಯಂತಹ ಕ್ರೀಡೆಗಳನ್ನು ಆಯೋಜಿಸುವುದರ ಮೂಲಕ, ಪ್ರತಿಭೆಗಳನ್ನು ಗುರುತಿಸುವಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿದೆ.

ಈ ನಿಟ್ಟಿನಲ್ಲಿ ಸಂಸ್ಥೆಗೆ ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದಿಂದ ಸಕಲ ಸೌಕರ್ಯಗಳನ್ನು ಮಾಡಿಕೊಡಲಾಗುವುದು’ ಎಂದರು. 
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಆರ್‌. ರವಿಕಾಂತೇಗೌಡ ಟೂರ್ನಿಯಲ್ಲಿ ಧ್ಜಜಾರೋಹಣ ನೆರವೇರಿಸಿದರು. 
 
ಪ್ರಾಚಾರ್ಯ ಡಾ. ಶರದ ಮಹಾಜನ ಮಾತನಾಡಿ ‘ಮಹಿಳೆಯರ ಸಾಮರ್ಥ್ಯ ಪ್ರದರ್ಶನಕ್ಕೆ ಕಬಡ್ಡಿಯಂತಹ ಸ್ಪರ್ಧೆಗಳು ಉತ್ತಮ ವೇದಿಕೆಯಾಗಿದೆ. ಆಟಗಳಲ್ಲಿ ಸೋಲು–ಗೆಲುವು ಸಾಮಾನ್ಯ, ಆದರೆ ಕ್ರೀಡಾಭಾವದಿಂದ ಆಟವಾಡಿ, ಸೋಲಿನಲ್ಲೂ ಗೆಲುವು ಕಾಣಿರಿ’ ಎಂದರು. 
 
ಸಂಸ್ಥೆಯ ಕಾರ್ಯಾಧ್ಯಕ್ಷ ಚಂದ್ರಕಾಂತಅಣ್ಣಾ ಕೋಠಿವಾಲೆ ಅಧ್ಯಕ್ಷತೆ ವಹಿಸಿದ್ದರು. ಉಪಕಾರ್ಯಾಧ್ಯಕ್ಷ ಪಪ್ಪುಅಣ್ಣಾ ಪಾಟೀಲ, ಸ್ಥಳೀಯ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಕಿಶೋರ ಭರಣಿ, ಡಿಪ್ಲೊಮಾ ಪ್ರಾಚಾರ್ಯ ಎಸ್‌.ಎನ್‌. ಗಂಗಣ್ಣವರ, ದೈಹಿಕ ನಿರ್ದೇಶಕ ಶಶಿರಾಜ ತೇಲಿ, ಡಿ.ವೈ.ಎಸ್‌.ಪಿ. ಬಿ.ಎಸ್‌. ಅಂಗಡಿ, ಸಂಸ್ಥೆಯ ನಿರ್ದೇಶಕ ಶಿವಕುಮಾರ ಕಲ್ಯಾಣಶೆಟ್ಟಿ, ಸಂಜಯ ಮೊಳವಾಡೆ, ವಿನಾಯಕ ಢೋಲೆ  ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನಘಾ ದಳವಿ ಪ್ರತಿಜ್ಞಾ ವಿಧಿ ಬೋಧಿಸಿದರು. ಚಿನ್ನಮ್ಮ ಹಪ್ಪಲಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸಾಹೇಬಗೌಡ ಸಂಗನಗೌಡರ ಅತಿಥಿಗಳನ್ನು ಪರಿಚಯಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT