ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮು ನಿರ್ಮಾಣ: ರೈತರಲ್ಲಿ ಹೆಚ್ಚಿದ ಸಂತಸ

Last Updated 22 ಏಪ್ರಿಲ್ 2017, 7:16 IST
ಅಕ್ಷರ ಗಾತ್ರ
ಅಂಕೋಲಾ: ತಾಲ್ಲೂಕಿನಲ್ಲಿ ವಿಶಾಲವಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.)ಯ 10.5 ಎಕರೆ ಪ್ರದೇಶವು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಶೇಡಗೇರಿಯಲ್ಲಿದೆ. ಆದರೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇನ್ನುವರೆಗೂ ಸದ್ಬಳಕೆಯಾಗಿರಲಿಲ್ಲ.
 
ಅಂಕೋಲಾದಲ್ಲಿ ಕೃಷಿ ಮತ್ತು ಕೃಷಿ ಕೂಲಿಕಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಂಗಾರಿನಲ್ಲಿ ಭತ್ತ, ಕಲ್ಲಂಗಡಿ ಬೆಳೆದರೆ ಹಿಂಗಾರಿನಲ್ಲಿ ಶೇಂಗಾ, ಉದ್ದು, ಕಲ್ಲಂಗಡಿ, ರೇಷ್ಮೆ ಬೆಳೆಯುತ್ತಾರೆ. ಇನ್ನು ಮಾವು, ಗೇರು, ಅಡಕೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇನ್ನು ಸರ್ವಋತು ಬೆಳೆಯಾಗಿ ತೆಂಗನ್ನು ಬೆಳೆಯಲಾಗುತ್ತಿದೆ.
 
ಎ.ಪಿ.ಎಂ.ಸಿ. ಮಾರುಕಟ್ಟೆ ಇಲ್ಲದಿರುವುದರಿಂದ ಬಹುತೇಕ ಎಲ್ಲಾ ಬೆಳೆ ಗಾರರು ದಲ್ಲಾಳಿಗಳನ್ನೇ ಅವಲಂಬಿಸಿ ಅವರು ಕೇಳುವ ಹಣಕ್ಕೆ ತಮ್ಮ ಬೆಳೆಗಳನ್ನು ಮಾರಾಟ ಮಾಡಬೇಕಾಗಿತ್ತು.
 
ದಲ್ಲಾಳಿಗಳೇ ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಬೆಳೆಗಳನ್ನು ಖರೀದಿಸುವ ಪ್ರಕ್ರಿಯೆ ಬಹು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಅದಕ್ಕೆ ಮುಖ್ಯ ಕಾರಣವೆಂದರೆ ಅಂಕೋಲಾದಲ್ಲಿ ಮಾರುಕಟ್ಟೆ ಇಲ್ಲದಿರುವುದು. ಹೀಗಾಗಿ ರೈತರ ಬೆಳೆಗೆ ಸರಿಯಾದ ಬೆಲೆ ಸಿಗದೇ ದಲ್ಲಾಳಿಗಳ ಪಾಲಾಗುತ್ತಿತ್ತು.
 
ಕಳೆದ ಹಲವು ವರ್ಷಗಳಿಂದ ಹೆಸರಿಗೆ ಮಾತ್ರ ಒಂದು ಸಣ್ಣ ಕಚೇರಿಯನ್ನು ಎ.ಪಿ.ಎಂ.ಸಿ. ಮೈದಾನದಲ್ಲಿ ನಿರ್ಮಿಸಲಾಗಿತ್ತು. ಎ.ಪಿ.ಎಂ.ಸಿ.ಗೆ ಶಿರಸಿಯೇ ಪ್ರಧಾನ ಕಚೇರಿಯಾಗಿರುವುದರಿಂದ ಅಲ್ಲಿಂದಲೇ ಅಧಿಕಾರಿಗಳು, ಎಂಜಿನಿಯರ್‌ಗಳು ಮುತುವರ್ಜಿ ವಹಿಸಬೇಕಾಗಿದೆ. ಕೇಂದ್ರದ ನಬಾರ್ಡ್‌ ಯೋಜನೆಯಡಿ ಬೃಹತ್ ಗೋದಾಮು ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಮಂಜೂರಿಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
 
640 ಚದರ ಮೀಟರ್ ಸುತ್ತಳತೆಯ ಗೋದಾಮು ನಿರ್ಮಾಣವಾಗುತ್ತಿದ್ದು, ಎರಡು ತಿಂಗಳಲ್ಲಿ ಕಾಮಗಾರಿ ಮುಗಿ ಯಲಿದೆ ಎಂದು ಗುತ್ತಿಗೆದಾರ ಸಂತೋಷ ಆರ್. ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಂಕೋಲಾದಲ್ಲಿ ಎ.ಪಿ.ಎಂ.ಸಿ. ಮೂಲಕವೇ ವಹಿವಾಟು ನಡೆಸುವಂತೆ ಮುತುವರ್ಜಿ ವಹಿಸಬೇಕಿದೆ.
 
‘ಎ.ಪಿ.ಎಂ.ಸಿ. ಮೂಲಕ ರೈತರ ಬೆಳೆಗಳನ್ನು ಖರೀದಿಸುವ ಪ್ರಕ್ರಿಯೆಗೆ ನಮ್ಮಿಂದಾದ ಪ್ರಯತ್ನವನ್ನು ಜಾರಿ ಗೊಳಿಸಲು ಯತ್ನಿಸುತ್ತೇವೆ. ಇದು ಜಾರಿ ಯಾದರೆ ತಾಲ್ಲೂಕಿನ ರೈತರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ದಲ್ಲಾಳಿಗಳಿಂದ ಹೊರಬಂದು ತಾವೇ ನೇರವಾಗಿ ವ್ಯವಹಾರ ಮಾಡಿದರೆ ನೇರ ಹಣ ಪಾವತಿಯಾಗುತ್ತದೆ’ ಎಂದು ಎ.ಪಿ.ಎಂ.ಸಿ. ನಿರ್ದೇಶಕ ಗಣಪತಿ ನಾಯಕ ಶೀಳ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT