ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯಾವಾಟಿಕೆಗೆ ಸಿಲುಕಿದ್ದ ಮಹಿಳೆ ರಕ್ಷಣೆ

ಇಬ್ಬರ ಬಂಧನ; ಲಾಜ್‌ ಮಾಲೀಕ ನಾಪತ್ತೆ
Last Updated 22 ಏಪ್ರಿಲ್ 2017, 7:34 IST
ಅಕ್ಷರ ಗಾತ್ರ
ಹಗರಿಬೊಮ್ಮನಹಳ್ಳಿ:  ವೇಶ್ಯಾವಾಟಿಕೆಗೆ ಸಿಲುಕಿದ್ದ ಮಹಿಳೆಯನ್ನು ಪಟ್ಟಣದ ಪೊಲೀಸರು ರಕ್ಷಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
 
ಸ್ಥಳೀಯ ಲಾಜ್‌ನಲ್ಲಿ ದಾಳಿ ನಡೆಸಿದ ಪೊಲೀಸರು ತಾಲ್ಲೂಕಿನ ತಂಬ್ರಹಳ್ಳಿಯ ಬಳ್ಳಾರಿ ನೂರುಸಾಹೇಬ್(28), ಲಾಡ್ಜ್‌ನ ವ್ಯವಸ್ಥಾಪಕ ಯಲ್ಲಪ್ಪ(30) ಹಾಗೂ ನಾಪತ್ತೆಯಾಗಿರುವ ಮಾಲೀಕ ಭೀಮಪ್ಪ ವಿರುದ್ಧ ದೂರು ದಾಖಲಿಸಿದರು.  ಮಹಿಳೆಯನ್ನು ಬಳ್ಳಾರಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪಿಎಸ್‌ಐ ಸಿ.ಜೆ.ಚೈತನ್ಯ ತಿಳಿಸಿದ್ದಾರೆ. 
 
ಕಂಬಕ್ಕೆ ಟಾಟಾ ಏಸ್ ಡಿಕ್ಕಿ: 10 ಕಾರ್ಮಿಕರಿಗೆ ಗಾಯ
ಹೂವಿನಹಡಗಲಿ:  ಹೊಳಗುಂದಿ-ಹಡಗಲಿ ಮಾರ್ಗ ಬದಿಯ ವಿದ್ಯುತ್ ಕಂಬಕ್ಕೆ ಟಾಟಾ ಏಸ್‌್ ವಾಹನ ಡಿಕ್ಕಿ ಹೊಡೆದು 10 ಜನ ಕೂಲಿ ಕಾರ್ಮಿಕರು ಶುಕ್ರವಾರ ಬೆಳಿಗ್ಗೆ ಗಾಯಗೊಂಡಿದ್ದಾರೆ
 
ಹಗರಿಬೊಮ್ಮನಹಳ್ಳಿ ತಾಲ್ಲೂಕು ಬನ್ನಿಕಲ್ಲು ಗ್ರಾಮದ ಕಾರ್ಮಿಕರನ್ನು ಹನಕನಹಳ್ಳಿ ಗ್ರಾಮದ ಕೃಷಿ ಚಟುವಟಿಕೆಗೆ ಕರೆತರುವಾಗ ಘಟನೆ ಸಂಭವಿಸಿದೆ. 29 ಜನರು ಪ್ರಯಾಣ ಮಾಡುತ್ತಿದ್ದರು. ಗಾಯಾಳುಗಳಿಗೆ ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  
 
ಕಾಮಗಾರಿ ವಿವಾದ: ಯಥಾಸ್ಥಿತಿ ಕಾಪಾಡಲು ತೀರ್ಪು
ಕೊಟ್ಟೂರು:  ಪಟ್ಟಣ ಪಂಚಾಯ್ತಿ ನೂತನ ಕಟ್ಟಡದ ಕಾಮಗಾರಿ ವಿವಾದದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಏಕಪೀಠ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ತೀರ್ಪು ನೀಡಿದೆ.
 
ಪಟ್ಟಣ ಪಂಚಾಯ್ತಿ ಕಟ್ಟಡವನ್ನು ಹರಪನಹಳ್ಳಿ ರಸ್ತೆ ಸಮೀಪ ನಿರ್ಮಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಪಟ್ಟಣದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಪದಾಧಿಕಾರಿಗಳಾದ  ಕೆ.ಎಸ್.ಈಶ್ವರಗೌಡ ಮತ್ತು ಕೆ. ನಾಗರಾಜಗೌಡ, ಕೆ. ಅಜ್ಜನಗೌಡ, ಎಚ್.ಪ್ರಕಾಶ್ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ನ್ಯಾಯಮೂರ್ತಿ ಈಗ ಮುಂದಿನ ತೀರ್ಪಿನ ತನಕ ಕಾಮಗಾರಿ ನಡೆಸಬಾರದು ಎಂದು ತಿಳಿಸಿದ್ದಾರೆ.
 
ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಂತೆ ಉದ್ದೇಶಿತ ಜಾಗದಲ್ಲಿ ಕಟ್ಟಡದ ಕಾಮಗಾರಿ ಸಾಗಿತ್ತು. ಈಗ ಕೋರ್ಟ್‌ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಕೋರ್ಟ್‌ ತಿಳಿಸಿದೆ.
 
ಬೈಕ್‌ನಿಂದ ಬಿದ್ದು ಮಹಿಳೆ ಸಾವು
ಮರಿಯಮ್ಮನಹಳ್ಳಿ:  ರಾಷ್ಟ್ರೀಯ ಹೆದ್ದಾರಿ 13ರ ಹನುಮನಹಳ್ಳಿ ಬಳಿ ಶುಕ್ರವಾರ ರಸ್ತೆ ಉಬ್ಬು ದಾಟುವಾಗ ಬೈಕ್‌ನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
 
ಪಟ್ಟಣದ 10ನೇ ವಾರ್ಡ್‌ನ ನಿವಾಸಿ ರೇಣುಕಮ್ಮ (56) ಮೃತರು. ಪತಿ ಹನುಮಂತಪ್ಪ  ಜೊತೆ ಪಟ್ಟಣದಿಂದ ಹೊಸಪೇಟೆ ಕಡೆಗೆ ಹೊರಟಿದ್ದರು. ರಸ್ತೆ ಉಬ್ಬು ಅನ್ನು ದಾಟುತ್ತಿದ್ದಾಗ ಆಯತಪ್ಪಿ ತಲೆಗೆ ತೀವ್ರ ಪೆಟ್ಟಾಗಿದೆ.  ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT