ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ ಕೈದಾ ಮುಖ್ಯಸ್ಥ ಜವಾಹಿರಿಗೆ ಕರಾಚಿಯಲ್ಲಿ ಐಎಸ್‌ಐ ನೆಲೆ?

Last Updated 22 ಏಪ್ರಿಲ್ 2017, 9:16 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಡ್ರೋಣ್‌ ದಾಳಿಯಿಂದ ಪಾರಾಗಿರುವ ಅಲ್ ಕೈದಾ ಮುಖ್ಯಸ್ಥ ಅಯ್ಮನ್ ಅಲ್–ಜವಾಹಿರಿಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಕರಾಚಿಯಲ್ಲಿ ನೆಲೆ ನೀಡಿದೆ ಎಂದು ಅಮೆರಿಕದ ‘ನ್ಯೂಸ್‌ ವೀಕ್‌’ ವರದಿ ಮಾಡಿದೆ.

ಅಂತರರಾಷ್ಟ್ರೀಯ ಭದ್ರತಾ ಪಡೆಗಳ ಕಣ್ತಪ್ಪಿಸುವಂಥ ಕರಾಚಿಯ ಸುರಕ್ಷಿತ ಪ್ರದೇಶದಲ್ಲಿ ಜವಾಹಿರಿಯನ್ನು ಬಚ್ಚಿಡಲಾಗಿದೆ. ಐಎಸ್‌ಐ ಜವಾಹಿರಿಯ ರಕ್ಷಣೆಗೆ ನಿಂತಿದೆ ಎಂದು ವರದಿ ಹೇಳಿದೆ.

ಆದರೆ, ‘ಜವಾಹಿರಿ ಕರಾಚಿಯಲ್ಲಿ ಅಡಗಿರುವ ಬಗ್ಗೆ ಸೂಕ್ತ ಆಧಾರಗಳಿಲ್ಲ. ಆತನ ಕೆಲ ವಸ್ತುಗಳು ಪಾಕಿಸ್ತಾನದ ಗಡಿಭಾಗ ಅಬೋಟಾಬಾದ್‌ ಬಳಿ ಸಿಕ್ಕಿದ್ದವು. ಹೀಗಾಗಿ ಆತ ಅಲ್ಲೇ ಅಡಗಿರುವ ಸಾಧ್ಯತೆ ಹೆಚ್ಚಾಗಿದೆ’ ಎಂದು ಅಮೆರಿಕದ ರಕ್ಷಣಾ ತಜ್ಞ ಬ್ರೂಸ್‌ ರೀಡೆಲ್‌ ಹೇಳಿದ್ದಾರೆ.


ಜವಾಹಿರಿ ಉಗ್ರ ಲಾಡೆನ್‌ ಜತೆಗಿರುವ ಸಂಗ್ರಹ ಚಿತ್ರ

ಆಫ್ಘಾನಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿದ್ದ ಅಲ್ ಕೈದಾ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಕಳೆದ ವರ್ಷ ಡ್ರೋಣ್‌ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಜವಾಹಿರಿಯ ಐದು ಮಂದಿ ಅಂಗರಕ್ಷಕರು ಮೃತಪಟ್ಟಿದ್ದರು. ಆದರೆ, ಈ ದಾಳಿ ವೇಳೆ ಜವಾಹಿರಿ ಕೂದಲೆಳೆಯಲ್ಲಿ ಪಾರಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT