ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಾದ್ಯಂತ 2500 ಸ್ಕ್ರೀನ್‌ಗಳಲ್ಲಿ ‘ಹಾಫ್ ಗರ್ಲ್‌ಫ್ರೆಂಡ್‌’ ಬಿಡುಗಡೆಗೆ ಸಿದ್ಧತೆ

Last Updated 22 ಏಪ್ರಿಲ್ 2017, 11:05 IST
ಅಕ್ಷರ ಗಾತ್ರ

ಮುಂಬೈ: ಮೋಹಿತ್ ಸೂರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಹಾಫ್‌ ಗರ್ಲ್ ಫ್ರೆಂಡ್‌’ ಚಿತ್ರದಲ್ಲಿ ಅರ್ಜುನ್ ಕಪೂರ್‌ಗೆ ಶ್ರದ್ಧಾ ಕಪೂರ್‌ ‘ಹಾಫ್‌ ಗರ್ಲ್ ಫ್ರೆಂಡ್‌’ ಆಗಿ ಕಾಣಿಸಿಕೊಂಡಿದ್ದಾರೆ.

‘ಹಾಫ್ ಗರ್ಲ್‌ ಫ್ರೆಂಡ್‌’ ಚಿತ್ರ ಮೇ 19ರಂದು ದೇಶಾದ್ಯಂತ 2,500 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

‘ಸ್ಲಂ ಹುಡುಗ ಮತ್ತು ಶ್ರೀಮಂತ ಹುಡುಗಿಯೊಬ್ಬಳ ನಾಟಕೀಯ ಪ್ರೇಮದ ಕಥೆಯನ್ನೊಳಗೊಂಡಿರುವ ಈ ಚಿತ್ರ ಚೇತನ್ ಭಗತ್ ಅವರ ‘ಹಾಫ್ ಗರ್ಲ್‌ಫ್ರೆಂಡ್’ ಕೃತಿಯನ್ನಾಧರಿಸಿದೆ.

ಬಾಲಾಜಿ ಮೋಷನ್‌ ಪಿಕ್ಚರ್ಸ್‌– ನ್ಯೂಜಿಲೆಂಡ್‌ ಸ್ಟುಡಿಯೋಸ್ ಸಹಯೋಗದೊಂದಿಗೆ ಚಿತ್ರದ ನಿರ್ಮಾಣ ಮತ್ತು ವಿತರಣೆ ಕಾರ್ಯಗಳನ್ನು ನಿರ್ವಹಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT