ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ನೆಲ, ಕಡಲು, ಮುಗಿಲು

Last Updated 22 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

1. ಸುಂದರ ಕಡಲ ತೀರವೊಂದರ ದೃಶ್ಯ ಚಿತ್ರ–1 ರಲ್ಲಿದೆ. ನಮ್ಮ ದೇಶದ ಕೆಲವು ಅತಿ ಸುಂದರ, ಬಹು ಪ್ರಸಿದ್ಧ ‘ಬೀಚು’ಗಳನ್ನೂ ಅವಿರುವ ನಗರಗಳ ಹೆಸರುಗಳನ್ನೂ ಪಟ್ಟಿ ಮಾಡಿದೆ. ಇವುಗಳನ್ನು ಸರಿಹೊಂದಿಸಬಲ್ಲಿರಾ?
1. ಮೆರೀನಾ ಬೀಚ್‌  ಅ. ಕಾರವಾರ
2. ಕೋವಲಮ್‌ ಬೀಚ್  ಬ. ವಿಶಾಖಪಟ್ಟಣಂ
3. ಆರ್‌.ಕೆ. ಬೀಚ್‌  ಕ. ಚೆನ್ನೈ
4. ಪ್ರಾಮಿನೇಡ್‌ ಬೀಚ್‌  ಡ. ಗೋಕರ್ಣ
5. ಮಜಲಿ ಬೀಚ್‌  ಇ. ತಿರುವನಂತಪುರಂ
6. ಓಂ ಬೀಚ್‌  ಈ. ಪಾಂಡಿಚೆರಿ

2. ಚಿತ್ರದಲ್ಲಿರುವ ನೈಸರ್ಗಿಕ ಕಣಿವೆಯನ್ನು ಗಮನಿಸಿ. ಅಗಲವಾದ ತಳದ, ಕಡಿದಾದ ಗೋಡೆಗಳ ಇಂತಹ ಕಣಿವೆಗಳನ್ನು ಬಗೆದು ರೂಪಿಸುವ ಛಿದ್ರಕಾರೀ ಶಕ್ತಿಯ ಮೂಲ ಇವುಗಳಲ್ಲಿ ಯಾವುದು?
ಅ. ಮಳೆ ನೀರು  ಬ. ಹರಿವ ನದಿ
ಕ. ಹಿಮನದಿ  ಡ. ಭೂ ಕಂಪನ
ಇ. ಅಂತರ್ಜಲ ಪ್ರವಾಹ

3. ಅಗ್ನಿ ಪರ್ವತವೊಂದರಿಂದ ಉಕ್ಕಿ ಉಕ್ಕಿ ಹರಿಯುತ್ತಿರುವ ‘ಶಿಲಾಪಾಕ’ ಪ್ರವಾಹದ ದೃಶ್ಯ ಚಿತ್ರ–3 ರಲ್ಲಿದೆ. ಹೀಗೆ ಹೊರಹರಿವ ಶಿಲಾಪಾಕ ತಣಿದಾಗ ರೂಪುಗೊಳ್ಳುವ ‘ಜ್ವಾಲಾಮುಖಿ ಜನ್ಯ ಅಗ್ನಿಶಿಲೆಗಳು’ ಇವುಗಳಲ್ಲಿ ಯಾವುವು?
ಅ. ಬಸಾಲ್ಟ್‌  ಬ. ಪೆಗ್ಮಟೈಟ್‌
ಕ. ಗ್ರಾನೈಟ್‌  ಡ. ಆಬ್ಸೀಡಿಯಾನ್‌
ಇ. ಡೈಯೋರೈಟ್‌  ಈ. ದ್ಹಿಯೋಲೈಟ್‌

4. ಧ್ರುವಪ್ರಭೆಯ ಅತ್ಯದ್ಭುತ ದೃಶ್ಯವೊಂದು ಚಿತ್ರ–4 ರಲ್ಲಿದೆ. ಇಲ್ಲಿ ಪಟ್ಟಿ ಮಾಡಿರುವ ಯಾವ ಯಾವ ದೇಶ–ಪ್ರದೇಶಗಳಲ್ಲಿ ಧ್ರುವ ಪ್ರಭೆಗಳ ನೇರ ದರ್ಶನ ಲಭ್ಯವಿಲ್ಲ? ಏಕೆ?
ಅ. ಸ್ವಾಲ್‌ ಬಾರ್ಡ್‌  ಬ. ಮಾಂಟ್ರಿಯಾಲ್‌
ಕ. ನಾರ್ವೆ  ಡ. ಫಿನ್‌ಲ್ಯಾಂಡ್‌
ಇ. ಐಸ್‌ಲ್ಯಾಂಡ್‌  ಈ. ಇಂಗ್ಲೆಂಡ್‌
ಉ. ಫ್ರಾಂಕ್‌ ಫರ್ಟ್‌

5. ಸುಣ್ಣ ಶಿಲಾಸ್ತರಗಳ ನೆಲದಾಳದಲ್ಲಿ ಅಂತರ್ಜಲಧಾರೆ ಕೊರೆದಿರುವ ಅದ್ಭುತ ಗುಹಾದೃಶ್ಯವೊಂದು ಚಿತ್ರ–5 ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಇಂತಹ ಸುಪ್ರಸಿದ್ಧ ಗುಹೆ– ಗುಹಾವ್ಯೂಹಗಳು ಯಾವ ಯಾವ ರಾಷ್ಟ್ರಗಳಲ್ಲಿವೆ? ಹೊಂದಿಸಿ ಕೊಡಿ:
1. ಕಾರ್ಲ್ಸ್‌ಬಾಡ್‌ ಗುಹಾವ್ಯೂಹ  ಅ. ಮೆಕ್ಸಿಕೋ
2. ಬುರ್ರಾ ಗುಹೆ  ಬ. ನ್ಯೂಜಿಲ್ಯಾಂಡ್‌
3. ಲಾಸ್‌ಕಾಕ್ಸ್  ಗುಹೆಗಳು    ಕ. ಯು.ಎಸ್‌.ಎ.
4. ವಾಯಿಟೋಮೋ ಗುಹೆ     ಡ. ಭಾರತ
5. ಕೇವ್‌ ಆಫ್‌ ಕ್ರಿಸ್ಟಲ್ಸ್‌      ಇ. ಫ್ರಾನ್ಸ್‌

6. ಧರೆಯ ‘ಉತ್ತರ ಧ್ರುವ’ವನ್ನು ಪರಿವರಿಸಿದ ‘ಆರ್ಕ್‌ಟಿಕ್‌ ಪ್ರದೇಶ’ವನ್ನು ಕೇಂದ್ರವಾಗಿಸಿ ರಚಿಸಿರುವ ಭೂಪಟ ಚಿತ್ರ–6 ರಲ್ಲಿದೆ. ಇಲ್ಲಿ ಹೆಸರಿಸಿರುವ ವಿಖ್ಯಾತ ಪ್ರಾಣಿಗಳಲ್ಲಿ ಯಾವುವು ಆರ್ಕ್‌ಟಿಕ್‌ ಪ್ರದೇಶಕ್ಕಷ್ಟೇ ಸೀಮಿತವಾಗಿವೆ?
ಅ. ಪೆಂಗ್ವಿನ್‌  ಬ. ವಾಲ್ರಸ್‌
ಕ. ಧ್ರುವ ಕರಡಿ  ಡ. ಕ್ಯಾರಿಬೂ
ಇ. ಪಾಂಡಾ  ಇ. ಮೂಸ್‌

7. ಪೃಥ್ವಿಯ ಅತ್ಯಂತ ವಿಸ್ತಾರ ಸಾಗರವಾದ ‘ಶಾಂತ ಸಾಗರ’ವನ್ನು ತೋರಿಸುತ್ತಿರುವ ಭೂಪಟ ಚಿತ್ರ–7 ರಲ್ಲಿದೆ. ಶಾಂತ ಸಾಗರದ ಆವಾರಕ್ಕೆ ಸೇರಿರುವ ‘ಸಮುದ್ರ’ಗಳು ಈ ಪಟ್ಟಿಯಲ್ಲಿ ಯಾವುವು?
ಅ. ಹವಳ ಸಮುದ್ರ
ಬ. ಮೆಡಿಟರೇನಿಯನ್‌ ಸಮುದ್ರ
ಕ. ಅರಬ್ಬೀ ಸಮುದ್ರ
ಡ. ದಕ್ಷಿಣ ಚೀನಾ ಸಮುದ್ರ
ಇ. ಟಾಸ್ಮನ್‌ ಸಮುದ್ರ
ಈ. ಕ್ಯಾರಿಬಿಯನ್‌ ಸಮುದ್ರ
ಉ. ಫಿಲಿಪೈನ್‌ ಸಮುದ್ರ

8. ಉನ್ನತ ಪರ್ವತ ಶಿಖರವೊಂದರ ದೃಶ್ಯ ಚಿತ್ರ–8 ರಲ್ಲಿದೆ. ಯೂರೋಪ್‌ ಖಂಡದ ವಿಶ್ವಖ್ಯಾತ ‘ಆಲ್ಪ್‌್್ಸ’ ಪರ್ವತ ಪಂಕ್ತಿಯಲ್ಲಿರುವ ಶಿಖರಗಳನ್ನು ಈ ಪಟ್ಟಿಯಲ್ಲಿ ಗುರುತಿಸಿ.
ಅ. ಕೆ–2
ಬ. ಮ್ಯಾಟ್ಟರ್‌ ಹಾರ್ನ್‌  ಕ. ಅಕೊಂಕಾಗುವಾ
ಡ. ಮಾಂಟೆ ಬ್ಲಾಂಕ್‌  ಇ. ಮೌಂಟ್‌ ಎಲ್ಬರ್ಟ್‌
ಈ. ಮೌಂಟ್‌ ರೇನಿಯರ್‌

9. ಅತ್ಯಂತ ವಿಸ್ತಾರ ಶೀತಲ ಹಿಮಲೋಕ ‘ಅಂಟಾರ್ಕ್ಟಿಕಾ’ದ ಒಂದು ದೃಶ್ಯ ಚಿತ್ರ–9 ರಲ್ಲಿದೆ. ಹಿಮಲೋಕವಾಗಿದ್ದರೂ ಅಂಟಾರ್ಕ್ಟಿಕಾ ‘ಮರುಭೂಮಿ’ಗಳ ಗುಂಪಿಗೇ ಸೇರಿದೆ. ಅದಕ್ಕೆ ವೈಜ್ಞಾನಿಕ ಕಾರಣ ಏನು?
ಅ. ಅಂಟಾರ್ಕ್ಟಿಕಾದಲ್ಲಿ ದ್ರವ ನೀರಿನ ಸೆಲೆಗಳು ಇಲ್ಲ
ಬ. ಅಲ್ಲಿನ ಮಳೆ ಪ್ರಮಾಣ ವಾರ್ಷಿಕ 25 ಸೆಂ.ಮೀ.ಗಿಂತ ಕಡಿಮೆ
ಕ. ಅಲ್ಲಿನದು ವರ್ಷಪೂರ್ತಿ ಅತಿ ಶೀತಲ ಪರಿಸರ
ಡ. ಅಲ್ಲಿನ ನೆಲದಲ್ಲಿ ಗಿಡ–ಮರಗಳು ಬೆಳೆಯುವುದಿಲ್ಲ.
ಇ. ಅಂಟಾರ್ಕ್ಟಿಕಾ ಮನುಷ್ಯರಿಗೆ ವಾಸಯೋಗ್ಯವಾಗಿಲ್ಲ.

10. ಸಾಗರದಲ್ಲಿ ತೇಲುತ್ತಿರುವ ಬೃಹದಾಕಾರದ ನೀರ್ಗಲ್ಲು (ಐಸ್‌ ಬರ್ಗ್‌) ಚಿತ್ರ–10 ರಲ್ಲಿದೆ. ಇಂತಹ ಐಸ್‌ಬರ್ಗ್‌ಗಳು ಯಾವ ಯಾವ ನೆಲೆಗಳಿಂದ ಕಳಚಿ ಕಡಲಿಗಿಳಿಯುತ್ತವೆ?
ಅ. ಅಲಾಸ್ಕಾ  ಬ. ಅಂಟಾರ್ಕ್ಟಿಕಾ
ಕ. ಐಸ್‌ಲ್ಯಾಂಡ್‌  ಡ. ನ್ಯೂಜಿಲ್ಯಾಂಡ್‌
ಇ. ಗ್ರೀನ್‌ಲ್ಯಾಂಡ್‌  ಈ. ಸೈಬೀರಿಯಾ

11. ‘ಕಣ್ಣೀರ ಹನಿ’ಯ ಆಕಾರದಲ್ಲಿ ಧರೆಯನ್ನು ಆವರಿಸಿರುವ ‘ರಕ್ಷಾ ಕವಚ’ ಚಿತ್ರ–11 ರಲ್ಲಿದೆ. ಅಗೋಚರವಾದ ಆದರೆ ಬಹು ಶಕ್ತಿಶಾಲಿಯಾದ ಈ ವಿಶಿಷ್ಟ ಕವಚ ಯಾವುದು?
ಅ. ನಭೋಮಂಡಲ
ಬ. ವಾಯುಮಂಡಲ
ಕ. ಕಾಂತಮಂಡಲ
ಡ. ತೇಜೋಮಂಡಲ

12. ಪೃಥ್ವಿಯ ವಾಯುಗೋಳದಲ್ಲಿ ಒಡಮೂಡಿರುವ ಬಣ್ಣ–ಬೆಳಕಿನ ವಿದ್ಯಮಾನ ‘ಮಳೆಬಿಲ್ಲು’ ಚಿತ್ರ–12 ರಲ್ಲಿದೆ. ಇದೇ ರೀತಿಯ ವಿದ್ಯಮಾನಗಳು ಈ ಪಟ್ಟಿಯಲ್ಲಿ ಯಾವುವು?
ಅ. ಮಿಂಚು  ಬ. ಇರಿಡಿಸೆನ್ಸ್‌
ಕ. ಹೇಲೋ  ಡ. ಗ್ಲೋರೀ
ಇ. ಟಾರ್ನೆಡೋ  ಈ. ಸೌರಕಂಬ

13. ಧರೆಯಲ್ಲಿ ದೊರಕುವ ಖನಿಜಗಳು ಸಾವಿರಾರು (ಚಿತ್ರ–13) ಲೋಹಗಳನ್ನೋ, ಅಲೋಹಗಳನ್ನೋ ಲಾಭದಾಯಕ ಪ್ರಮಾಣದಲ್ಲಿ ನೀಡಬಲ್ಲ ಖನಿಜಗಳೇ ಅದಿರುಗಳು– ಹೌದಲ್ಲ? ಇಲ್ಲಿನ ಪಟ್ಟಿಯಲ್ಲಿ ಅದಿರುಗಳನ್ನು ಗುರುತಿಸಿ:
ಅ. ಪಿಚ್‌ಬ್ಲೆಂಡ್‌  ಈ. ಫೇಲ್ಡ್‌ಸ್ಟಾರ್‌
ಬ. ಗೆಲೀನಾ  ಉ. ಕೋರಂಡಂ
ಕ. ಆಂಥ್ರಾಸೈಟ್‌  ಟ. ಟೋಪಾಜ್‌
ಡ. ಕ್ಯಾಸಿಟರೈಟ್‌  ಣ. ಹಾರ್ನ್‌ಬ್ಲೆಂಡ್‌
ಇ. ಮ್ಯಾಗ್ನಸೈಟ್‌

ಉತ್ತರಗಳು:
1. 1–ಕ; 2–ಇ; 3–ಬ; 4–ಈ; 5–ಅ; 6–ಡ
2. ಕ. ಹಿಮನದಿ
3. ಅ, ಡ. ಮತ್ತು ಈ.
4. ಬ, ಈ. ಮತ್ತು ಉ. (ಇವು ಧ್ರುವ ಪ್ರದೇಶದಿಂದ ದೂರ ಇವೆ)
5. 1–ಕ; 2–ಡ; 3–ಇ; 4–ಬ; 5–ಅ
6. ಅ. ಮತ್ತು ಇ. ಬಿಟ್ಟು ಇನ್ನೆಲ್ಲ
7. ಅ, ಡ, ಇ. ಮತ್ತು ಉ.
8. ಬ. ಮತ್ತು ಡ.
9. ಬ.  25 ಸೆಂಮೀಗಿಂತ ಕಡಿಮೆ ವಾರ್ಷಿಕ ಮಳೆ
10. ಬ. ಮತ್ತು ಇ.
11. ಕ. ಕಾಂತ ಮಂಡಲ
12. ಬ,ಕ,ಡ ಮತ್ತು ಈ
13. ಅ,ಬ,ಡ,ಇ ಮತ್ತು ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT