ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಓ ಮುಂದೆ ಪ್ರಶ್ನೆಗಳ ಸುರಿಮಳೆ

Last Updated 23 ಏಪ್ರಿಲ್ 2017, 5:31 IST
ಅಕ್ಷರ ಗಾತ್ರ

ದೇವರ ಹಿಪ್ಪರಗಿ : ಜಿಲ್ಲಾಧಿಕಾರಿಗಳು ಮಂಜೂರು  ಮಾಡಿರುವ ಹೆಚ್ಚುವರಿ ನೀರಿನ ಟ್ಯಾಂಕರ್‌ಗಳನ್ನು ಶೀಘ್ರವಾಗಿ ಬಳಸಿ ನೀರು ಪೂರೈಸಬೇಕು ಎಂದು  ಗ್ರಾಮಸ್ಥರು  ಪಿಡಿಓ ಲಕ್ಷ್ಮಣ ನಾವಿ ಅವರನ್ನು ಆಗ್ರಹಿಸಿದರು.ಸಮೀಪದ ಜಾಲವಾದ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಪಿಡಿಓ ಕುಡಿ­ಯುವ ನೀರು ಹಾಗೂ ಬಸವ ಆಶ್ರಯ ಯೋಜನೆಯಡಿಯ ಫಲಾನು­ಭವಿಗಳ ಆಯ್ಕೆ ಕುರಿತಂತೆ ವಿಷಯ ಪ್ರಸ್ತಾ­ಪಿಸಿ­ದಾಗ ವಿಷಯ ಪ್ರಸ್ತಾಪಿಸಿದರು. ಗ್ರಾಮ­ಸ್ಥರಿಗೆ ಮೊದಲು  ಕುಡಿಯುವ ನೀರು ಕೊಡಿ.

ಜಿಲ್ಲಾಧಿಕಾರಿಗಳು ಹೆಚ್ಚುವರಿ  ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆಗೆ ಅನುಮತಿ ನೀಡಿ­ದ್ದರೂ ಈವರೆಗೂ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ. ಇಡೀ ಗ್ರಾಮಕ್ಕೆ ದಿನಪೂರ್ತಿ ಎಷ್ಟು ಟ್ಯಾಂಕರ್ ನೀರು ಪೂರೈಸುತ್ತಿರಿ? ಯಾವ ಯಾವ ಓಣಿಗೆ ಎಷ್ಟು ಟ್ಯಾಂಕರ್‌ಗಳಿವೆ ಎಂದು ಗ್ರಾಮ­ಸ್ಥರು  ಪ್ರಶ್ನಿಸಿದರು. ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ನೋಡಲ್ ಅಧಿಕಾರಿ ಎಚ್.ವೈ. ಸಿಂಗೇ­ಗೋಳ ‘ನಾಳೆಯಿಂದಲೇ ಜಿಲ್ಲಾಧಿ­ಕಾರಿ­ಗಳು ಆದೇಶ ಮಾಡಿರುವ ಹೆಚ್ಚುವರಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು. ಬಸವ ಆಶ್ರಯ ಯೋಜನೆಯಡಿ 30 ಮನೆಗಳು ಮಂಜೂ­ರಾಗಿದ್ದು ಮನೆ ಇಲ್ಲದವರಿಗೆ ಗ್ರಾಮಸಭೆಯ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗು­ವುದು’ ಎಂದು ಭರವಸೆ ನೀಡಿದರು.

ಗ್ರಾಮಸ್ಥರ ಪರವಾಗಿ ಬಾಳು ದೇವೂರ ಮಾತನಾಡಿ, ‘ಹೆಸರಿಗಷ್ಟೇ ಗ್ರಾಮಸಭೆ ಮಾಡಿದರೆ ಯಾವುದೇ ಪ್ರಯೋಜನ ಇರುವುದಿಲ್ಲ. ಆಶ್ರಯ ಮನೆಗಳ ಮಂಜೂರಾತಿ ಕಾರ್ಯವನ್ನು ಶೀಘ್ರ ಮಾಡಬೇಕು. ಕುಡಿಯುವ ನೀರಿನ ಕೊರತೆ ಉಂಟಾಗಿ ನೀರಿಗಾಗಿ ಮನೆ­ಮಂದಿ ಅಲೆದಾಡುವ ಪರಿಸ್ಥಿತಿ ನಿರ್ಮಾ­ಣವಾಗಿದೆ. ಹೀಗಾಗಿ ಶೀಘ್ರ ಕುಡಿ­ಯುವ ನೀರು ಪೂರೈಕೆ ಮಾಡ­ಬೇಕು.  ಪಿಡಿಓ ಅವರಿಗೆ ನಮ್ಮ ಸಮಸ್ಯೆ­ಗಳು ಅರ್ಥವಾಗುವುದಿಲ್ಲ. ಏಕೆಂದರೆ  ಅವರು ಬರುವುದೇ ಅಪರೂಪ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ವಿಫಲರಾದರೆ  ಉಗ್ರ ಪ್ರತಿಭಟನೆ ನಡೆಸ­ಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT