ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಗೂ ಬಂತು ವಾಟರ್‌ ಪಾರ್ಕ್‌

Last Updated 23 ಏಪ್ರಿಲ್ 2017, 6:10 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಹೊರವಲಯ ಪೀರಣವಾಡಿ ಬಳಿಯ ಕುಟ್ಟಲವಾಡಿ ಗ್ರಾಮದಲ್ಲಿ ‘ಯಶನೀಶ್‌ ಫನ್‌ ವರ್ಲ್ಡ್‌’ ವಾಟರ್‌ ಪಾರ್ಕ್‌ ನಿರ್ಮಾಣವಾಗಿದ್ದು, ಏಪ್ರಿಲ್‌ 27ರಂದು ಸಚಿವ ಆರ್‌.ವಿ. ದೇಶಪಾಂಡೆ ಉದ್ಘಾಟಿಸುವರು. 29ರಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಮಾಲೀಕರಾದ ಮಹೇಶ ಅರಕಸಾಲಿ ಹಾಗೂ ಸುನೀಲ ಶೇಜವಾಡಕರ್‌ ಹೇಳಿದರು.

‘ನಗರದಿಂದ 12 ಕಿ.ಮೀ ದೂರದಲ್ಲಿ ನಿರ್ಮಿಸಲಾಗಿರುವ ವಾಟರ್‌ ಪಾರ್ಕ್‌  ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ  ತೆರೆದಿರುತ್ತದೆ. ಪ್ರವೇಶ ಶುಲ್ಕ ₹ 660 ಇದೆ.  2.5 ಅಡಿಯಿಂದ 4 ಅಡಿ ಎತ್ತರದ ಮಕ್ಕಳಿಗೆ ₹ 450 ಇದ್ದು, 2.5 ಅಡಿಗಿಂತ ಚಿಕ್ಕಮಕ್ಕಳಿಗೆ ಪ್ರವೇಶ ಶುಲ್ಕ ಇಲ್ಲ.ಬೆಳಗಿನ  ಉಪಾಹಾರ, ಮಧ್ಯಾಹ್ನದ ಸಸ್ಯಾಹಾರಿ ಊಟ, ಸಂಜೆ ಚಹಾ/ಕಾಫಿ ಉಚಿತವಾಗಿ ನೀಡಲಾಗುವುದು. ಉದ್ಘಾಟನೆಯ ಕೊಡುಗೆಯಾಗಿ ಶೇ 25ರಷ್ಟು ರಿಯಾಯಿತಿ ನೀಡಲಾಗಿದೆ. ಮೇ 15ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ’ ಎಂದರು. 

‘ಎರಡು ವರ್ಷಗಳ ಹಿಂದೆ ವಾಟರ್‌ ಪಾರ್ಕ್‌ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆವರಣದೊಳಗೆ ಮೂರು ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ನೀರನ್ನು ಮರು ಬಳಕೆ ಮಾಡಲಾಗುತ್ತದೆ. 2,500 ಸಸಿಗಳನ್ನು ನೆಡಲಾಗಿದೆ’ ಎಂದು ಹೇಳಿದರು.‘ಈ ಪಾರ್ಕ್‌ನಲ್ಲಿ 4 ಸ್ಲೈಡ್‌, ರೇನ್‌ ಡಾನ್ಸ್‌, ಬಂಪರ್‌ ಬೋಟ್‌, ಬನಾನಾ ರೈಡ್‌, ವಾಲ್‌ ಕ್ಲೈಂಬಿಂಗ್‌ ಹೀಗೆ 15 ಆಟಗಳು ಇವೆ. ಗ್ರಾಹಕರ ಸುರಕ್ಷತೆಗಾಗಿ 25 ಜೀವರಕ್ಷಕರು ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶೌಚಾಲಯ, ಸ್ನಾನದ ಗೃಹ ವ್ಯವಸ್ಥೆ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT