ಏನು ವಿಶೇಷತೆ?: ಈ ಮೇಕೆಗಳ ಮೂಲ ಸ್ಥಾನ ಉತ್ತರ ಪ್ರದೇಶದ ಇಟಾವಾ ಜಿಲ್ಲೆ. ಹಾಲು ಮತ್ತು ಮಾಂಸಕ್ಕೆ ಉತ್ತಮ ತಳಿ ಎಂಬ ಖ್ಯಾತಿ ಇದಕ್ಕಿದೆ. ಉದ್ದದ ಕಾಲು, ಜೋತು ಬಿದ್ದ ಕಿವಿಗಳು, ಸದೃಢ ಮೈಕಟ್ಟಿನ ಈ ಮೇಕೆಗಳು ಸ್ಥಳೀಯ ಮೇಕೆಗಳಿಗಿಂತ ಭಿನ್ನ.‘ಹೋತವಾದರೆ ಗರಿಷ್ಠ 90 ಕೆ.ಜಿ. ತನಕ ತೂಗುತ್ತದೆ. ಮೇಕೆಯಾದರೆ ಗರಿಷ್ಠ 60 ಕೆ.ಜಿ. ತೂಗುತ್ತವೆ. ಒಂದು ಬಾರಿ ಮರಿ ಹಾಕಿದರೆ, 600 ಕೆ.ಜಿ.ವರೆಗೆ ಹಾಲು ಕೊಡುತ್ತದೆ’ ಎನ್ನುತ್ತಾರೆ ತಜ್ಞರು.