ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಕೃಷ್ಣೆಯ ಒಡಲಿನಲ್ಲಿ ಸುಂದರ ಗುಡಿ!

Last Updated 23 ಏಪ್ರಿಲ್ 2017, 6:29 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಬನಹಟ್ಟಿ ಸಮೀಪದಲ್ಲಿ ಹರಿಯು ತ್ತಿರುವ ಕೃಷ್ಣಾ ನದಿಯು ಬತ್ತಿದಾಗ ಮಧ್ಯದಲ್ಲಿ ಕಾಣುವ ದೇವಾಲಯದ ಬಗ್ಗೆ ಬಹಳ ಜನರಲ್ಲಿ ಒಂದು ಕುತೂಹಲ. ಇದು ಯಾರ ದೇವಸ್ಥಾನ. ಯಾರು ಕಟ್ಟಿದರು ಎಂಬ ಹಲವಾರು ಪ್ರಶ್ನೆಗಳು ಬರುತ್ತವೆ. ಕೃಷ್ಣಾ ನದಿ ಖಾಲಿಯಾಗಿದ್ದರಿಂದ ಮಹಿಷವಾಡಗಿ ಬ್ಯಾರೇಜಿನ ಹಿಂಭಾಗ ದಲ್ಲಿ ಕಟ್ಟಿರುವ ದೇವಾಲಯ ಪೂರ್ತಿ ಯಾಗಿ ಕಾಣತೊಡಗುತ್ತವೆ. ಈ ದೇವ ಸ್ಥಾನ ಮೊದಲು ಅಪರೂಪಕ್ಕೆ ಮಾತ್ರ ಕಂಡು ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನೀರಿನ ಕೊರತೆ ಇರುವುದ ರಿಂದ ದೇವಾಲಯ ಪ್ರತಿವರ್ಷ ಕಂಡು ಬರುತ್ತಿದೆ. 

ಈ ದೇವಾಲಯವನ್ನು ಪೂರ್ವಕ್ಕೆ ಮುಖ ಮಾಡಿ ಕಟ್ಟಲಾಗಿದೆ, ಗರ್ಭಗುಡಿ ಯಲ್ಲಿ ಲಿಂಗವಿದೆ. ವಿಶಾಲವಾದ ಪಡ ಸಾಲೆ, ಮೂರು ಕಮಾನುಗಳ ಪ್ರವೇಶ ದ್ವಾರವಿದೆ. ನದಿಯತ್ತ ಮುಖ ಮಾಡಿ ಒಂದು ಬಾಗಿಲು, ಅದಕ್ಕೆ ಎದುರುಗಡೆ ಮತ್ತೊಂದು ಬಾಗಿಲು ಇದೆ. ಆದರೆ ಅದನ್ನು ಕಲ್ಲುಗಳಿಂದ ಮುಚ್ಚಲಾಗಿದೆ. ಬೃಹತ್ ಆಕಾರದ ಕರಿ ಕಲ್ಲಿನಿಂದ ನಿರ್ಮಿ ಸಲಾಗಿರುವ ಕಟ್ಟಡದಲ್ಲಿ ಯಾವುದೇ ವಾಸ್ತು ಶಿಲ್ಪವಾಗಲಿ, ಕೆತ್ತನೆಯ ಕಾರ್ಯಗಳಾಗಲಿ ಇಲ್ಲ. ಅದರೂ ಅದು ನೋಡುಗರನ್ನು ಆಕರ್ಷಿಸುತ್ತದೆ.

ಈ ದೇವಾಲಯವನ್ನು ಕಟ್ಟಿಸಿದವರು ರಬಕವಿಯ ಮರೆಗುದ್ದಿ ಮನೆತ ನದ ಬಾಳಪ್ಪನವರು. ಈಗಲೂ ಈ ದೇವಸ್ಥಾನಕ್ಕೆ ಬಾಳಪ್ಪನ ದೇವಾಲಯ ಎಂದೇ ಕರೆಯುತ್ತಾರೆ. ಆದರೆ ಅದು ಈಶ್ವರ ದೇವಸ್ಥಾನ.ಮರೆಗುದ್ದಿ ಮನೆತನದವರು ಹೇಳುವ ಪ್ರಕಾರ ನಮ್ಮ ಅಜ್ಜನಿಗ ಗಂಡು ಸಂತಾನ ಇರಲಿಲ್ಲ. ಇಬ್ಬರು ಹೆಣ್ಣು ಮಕ್ಕಳು ಅವರದು ಮದುವೆ ಆಗಿತ್ತು. ಬಾಳಪ್ಪ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದರು. ಹಂಗ್ ಚಿಲ್ಲರೆ ನಾಣ್ಯಗಳಿಂದ ಸಾಕಷ್ಟು ಹಣ ಕೂಡಿಸಿದ್ದ. ಆ ಹಣ ಏನು ಮಾಡುವುದು ಎಂಬ ವಿಚಾರ ಹಿರಿಯರಲ್ಲಿ ವ್ಯಕ್ತಪಡಿಸಿದಾಗ, ಅವರು ಕೃಷ್ಣಾ ನದಿಯ ದಡದಲ್ಲಿ ಒಂದು ಗುಡಿ ಇಲ್ಲ. ಅಲ್ಲಿ ಗುಡಿ ಕಟ್ಟಿಸಿದರ ಹೋಗಿ ಬರುವ ಜನಕ್ಕೆ ಪೂಜೆ ಮಾಡಲಿಕ್ಕೆ ಒಂದು ಸ್ಥಳವಾಗು ತ್ತದೆ. ಇದರಿಂದ ಬಹಳ ಜನರಿಗೆ ಅನುಕೂಲ ಆಗುತ್ತದೆ. ಆದ್ದರಿಂದ ಗುಡಿ ಕಟ್ಟಿಸು ಎಂದು ಸಲಹೆ ನೀಡಿದರು.

ಆಗ ರಬಕವಿಯು ಅಂದಿನ ಸಾಂಗ್ಲಿ ಸಂಸ್ಥಾನದ ಆಡಳಿತಕ್ಕೆ ಸೇರಿರುವುದ ರಿಂದ ಸಾಂಗ್ಲಿ ಸಂಸ್ಥಾನದಿಂದ ಪರ ವಾನಿಗೆ ಪಡೆದುಕೊಂಡು 1912ರ ಸುಮಾರಿಗೆ ಈ ದೇವಾಲಯವನ್ನು ನಿರ್ಮಿಸಲಾಯಿತು. ಧಾರ್ಮಿಕ ಕಾರ್ಯ ವಾಗಿದ್ದರಿಂದ ನಮ್ಮ ಅಜ್ಜನವರು ಯಾವುದಕ್ಕೂ ನನ್ನ ಹೆಸರು ಬೇಡ ಅಂದರು. ಈ ದೇವಾಲಯ ನಿರ್ಮಾಣ ಮಾಡಿದ್ದರ ಬಗ್ಗೆ ಸಾಂಗ್ಲಿಯಲ್ಲಿ ದಾಖಲೆ ಗಳು ಮೋಡಿ ಭಾಷೆಯಲ್ಲಿ ನೋಡಲು ಸಿಗುತ್ತವೆ ಎನ್ನುತ್ತಾರೆ ಮರೆಗುದ್ದಿ ಮನೆತನದವರು.

ಮೊದಲು ನದಿಯ ವ್ಯಾಪ್ತಿ ಬಹಳ ಕಡಿಮೆ ಇದ್ದುದರಿಂದ ದೇವಾಲಯ ನದಿಯ ದಡದಲ್ಲಿ ಇತ್ತು. ಆದರೆ 1971ರಲ್ಲಿ ವಿರೇಂದ್ರ ಪಾಟೀಲ ಸರ್ಕಾರ ರಬಕವಿ- ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ ನಿರ್ಮಿ ಸಲು ಅನುಮತಿ ನೀಡಿತು. 1973ರಲ್ಲಿ ದೇವರಾಜ ಅರಸು ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಥಮ ಬಾರಿಗೆ ನೀರನ್ನು ತಡೆ ಹಿಡಿಯಲಾಯಿತು.

ಆಗ ಬಾಳಪ್ಪಜ್ಜ ಕಟ್ಟಿಸಿದ ದೇವಾಲಯ ನೀರಿನಲ್ಲಿ ಮುಳುಗಿತು.  ನಿಜಕ್ಕೂ ಒಂದು ಅಪರೂ ಪದ ದೇವಸ್ಥಾನವಾಗಿರುವ ಇದು ಶತಮಾನಗಳು ಕಳೆದರೂ ನೀರಿಗೆ ಗರ್ಭ ಗುಡಿಯಲ್ಲಿರುವ ಯಾವುದೇ ಮೂರ್ತಿಗಳು ಜಗ್ಗದೇ ಆಲುಗಾಡದೇ ಹಾಗೇ ನಿಂತಿರುವುದು ವಿಶೇಷ.ಇಂಥ ಸುಂದರವಾದ ದೇವಾಲಯ ಈ ಭಾಗದ ಜನರಿಗೆ ಮತ್ತೊಮ್ಮೆ ನೋಡಲು ಸಿಗುತ್ತಿರುವುದು ಅಪ ರೂಪದ ಸಂಗತಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT