ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಕವಿಗೋಷ್ಠಿಗೆ ಚಾಲನೆ

Last Updated 23 ಏಪ್ರಿಲ್ 2017, 6:51 IST
ಅಕ್ಷರ ಗಾತ್ರ

ಶಿರಸಿ: ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಾಗತಿಕ ಸ್ಪರ್ಶ ನೀಡುವ ಜತೆಗೆ ಕನ್ನಡ ಭಾಷೆಯ ಹರವನ್ನು ವಿಸ್ತರಿಸುವ ಆಶಯದೊಂದಿಗೆ ಫೇಸ್‌ಬುಕ್ ಕವಿಗೋಷ್ಠಿಗೆ ಶನಿವಾರ ಇಲ್ಲಿ ಚಾಲನೆ ನೀಡಲಾಯಿತು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ನೆಮ್ಮದಿ ಕುಟೀರ ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಭಾಗೀರತಿ ಹೆಗಡೆ ಅವರು ಲ್ಯಾಪ್‌ಟಾಪ್‌ನಲ್ಲಿ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಫೇಸ್‌ಬುಕ್ ಕವಿ ಗೋಷ್ಠಿಯ ಪುಟ ಅನಾವರಣ ಗೊಳಿಸುವ ಮೂಲಕ ಕವಿತೆಗಳಿಗೆ ಆಹ್ವಾನ ನೀಡಿದರು.

‘ಫೇಸ್‌ಬುಕ್ ಕವಿಗೋಷ್ಠಿಯು ಜಾಗ ತಿಕ ಮಟ್ಟದಲ್ಲಿ ಕನ್ನಡ ಉಳಿಸುವ ನಿಟ್ಟಿ ನಲ್ಲಿ ಮಹತ್ವದ್ದಾಗಿದೆ. ವಿಶ್ವವ್ಯಾಪಿ ಕನ್ನಡ ಪ್ರೀತಿಯ ಜೊತೆಗೆ ಸೂಕ್ಷ್ಮ ಸಂವೇದನೆ ಉಳಿಸಿಕೊಂಡು ಯುವ ಬರಹಗಾರರು ಬರೆಯಬೇಕು. ಸಾಮಾಜಿಕ ಜಾಲತಾಣ ಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಕವಿತೆಯ ರೂಪದಲ್ಲಿ ಬರೆಯುವವರ ಸಂಖ್ಯೆ ಅಧಿಕವಾಗಿದೆ. ಹಾಗೆ ಬರೆದ ಬರಹಗಳೆಲ್ಲವೂ ಕವಿತೆಗಳಾಗಲು ಸಾಧ್ಯವಿಲ್ಲ. ಛಾಯಾಭಾವದಲ್ಲಿ ಕವಿತೆ ಪ್ರಕಟಿಸುವ ಫೇಸ್‌ಬುಕ್ ಕವಿಗೋಷ್ಠಿ ವಿಶಿಷ್ಟವಾಗಿದೆ’ ಎಂದರು.

ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತ ನಾಡಿ, ‘ಜಗತ್ತಿನಾದ್ಯಂತ ಇರುವ ಎಲ್ಲ ಕನ್ನಡ ಕವಿಗಳ ಪರಸ್ಪರ ಒಗ್ಗೂಡಲೆಂಬ ಉದ್ದೇಶದಿಂದ ಫೇಸ್‌ಬುಕ್ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಫೇಸ್‌ಬುಕ್ ಪುಟದಲ್ಲಿ ಉತ್ತರ ಕನ್ನಡ ಸಾಹಿತ್ಯ ಸಮ್ಮೇಳನ ಎಂದು ಕನ್ನಡ ಅಕ್ಷರದಲ್ಲಿ ಬರೆದು ಹುಡುಕಿದರೆ ಪುಟ ಸುಲಭದಲ್ಲಿ ಸಿಗುತ್ತದೆ.  ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮವನ್ನು ಯುಟ್ಯೂಬ್‌ನಲ್ಲಿ ವೀಕ್ಷಿಸಬಹುದು’ ಎಂದು ಅವರು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಭಾಗವತ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT