ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಉಚಿತ, ತಂಪು ಖಚಿತ

Last Updated 23 ಏಪ್ರಿಲ್ 2017, 6:55 IST
ಅಕ್ಷರ ಗಾತ್ರ

ಮನೆಯ ಚಾವಣಿಯಲ್ಲಿರುವ ಸೋಲಾರ್ ವಿದ್ಯುತ್ ಘಟಕ ಒಂದೂ ವರೆ ವರ್ಷದಲ್ಲಿ ₹ 90 ಸಾವಿರ ಆದಾ ಯ ತಂದುಕೊಟ್ಟಿದೆ. ಮೂವತ್ತು ಲಕ್ಷ ರೂಪಾಯಿ ಖರ್ಚು ಮಾಡಿ ಮನೆಯ ಮೇಲೆ ಮನೆ ಕಟ್ಟಿ ಬಾಡಿಗೆ ಕೊಟ್ಟು ತಿಂಗಳಿಗೆ ನಾಲ್ಕೈದು ಸಾವಿರ ರೂಪಾ ಯಿ ಆದಾಯ ಪಡೆಯುವು ದಕ್ಕಿಂತ ₹ 5 ಲಕ್ಷ ವೆಚ್ಚ ಮಾಡಿ ಇಷ್ಟೇ ಹಣ ಗಳಿಸ ಬಹುದು – ಹೀಗೆ ಮಧುರಾ ಇಂಡ ಸ್ಟ್ರೀಸ್‌ ಮಾಲೀಕ ಶ್ರೀಕಾಂತ ಹೆಗಡೆ ಸುಲಭದ ಲೆಕ್ಕಾಚಾರ ಹೇಳಿದರು.

ಶಿರಸಿಯ ಗುರುನಗರದಲ್ಲಿರುವ ತಮ್ಮ ಸ್ವಂತ ಮನೆಯ ಚಾವಣಿಯಲ್ಲಿ ಅವರು ಸೋಲಾರ್ ವಿದ್ಯುತ್ ಉತ್ಪಾ ದನೆ ಮಾಡಿ ಮನೆಯ ಬಳಕೆಗೆ ಆಗಿ ಮಿಕ್ಕ ವಿದ್ಯುತ್ ಅನ್ನು ಹೆಸ್ಕಾಂಗೆ ಮಾರಾಟ ಮಾಡುತ್ತಾರೆ.‘ವಿದ್ಯುತ್ ಸ್ವಾವಲಂಬನೆ ಸಾಧಿಸುವ ಜೊತೆಗೆ ಪರಿಸರ ಸ್ನೇಹಿ ವ್ಯವಸ್ಥೆ ಅಳವಡಿಸುವ ಕನಸಿನೊಂದಿಗೆ 5 ಕಿಲೊ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಸ್ಥಾಪಿಸಿದೆ. ಇದಕ್ಕೆ ತಗುಲಿದ ವೆಚ್ಚ ₹ 4.5 ಲಕ್ಷ. ಸೋಲಾರ್ ಹಾಕಿದ ಮೊದಲ ತಿಂಗಳಿನಿಂದಲೇ ಹೆಸ್ಕಾಂಗೆ ವಿದ್ಯುತ್ ಮಾರಾಟ ಮಾಡುತ್ತಿದ್ದೇನೆ. ನಮ್ಮ ಮನೆ ಬಳಕೆಗೆ ತಿಂಗಳಿಗೆ 150 ಯುನಿಟ್ ಬಳಕೆಯಾಗುತ್ತದೆ. ಇನ್ನುಳಿದ 600 ಯುನಿಟ್ ವಿದ್ಯುತ್ ಅನ್ನು ಹೆಸ್ಕಾಂ ಖರೀದಿಸುತ್ತದೆ. ತಿಂಗಳಿಗೆ ಸರಾಸರಿ ₹ 5,000 ಆದಾಯ ನಿಶ್ಚಿತ. ಕೆಲವು ತಿಂಗಳುಗಳಲ್ಲಿ ₹ 6,000 ವರಮಾನ ದೊರೆತಿದ್ದೂ ಇದೆ’ ಎಂದು  ಹೆಮ್ಮೆಯಿಂದ ಹೇಳಿಕೊಂಡರು.

‘ಚಾವಣಿಯೆ ಮೇಲೆ 600 ಚದರ ಅಡಿಯಲ್ಲಿ ಸೋಲಾರ್ ಪ್ಯಾನಲ್ ಇದೆ. ಇದು ಮನೆಯನ್ನು ತಂಪಾಗಿಡುತ್ತದೆ. ಉಚಿತ ವಿದ್ಯುತ್ ಮಾತ್ರವಲ್ಲ, ಬಿರು ಬೇಸಿಗೆಯಲ್ಲೂ ಮನೆ ತಂಪಾಗಿಡುವ ಸೋಲಾರ್ ನಿರಂತರ ಆದಾಯ ನೀಡುವ ಸುಲಭ ಉಪಾಯ. ಎಲ್ಲರ ಮನೆಗೆ ಬರುವಂತೆ ಹೆಸ್ಕಾಂ ಮೀಟರ್ ರೀಡರ್ ನಮ್ಮ ಮನೆಗೂ ಬರುತ್ತಾರೆ. ಎಲ್ಲರ ಮನೆಯಲ್ಲಿ ವಿದ್ಯುತ್ ಖರ್ಚು ಮಾಡಿದ ಲೆಕ್ಕ ಬರೆದುಕೊಂಡು ಹೋದರೆ ನಾವು ವಿದ್ಯುತ್ ಉಳಿಸಿ ಹೆಸ್ಕಾಂಗೆ ಮಾರಾಟ ಮಾಡಿದ ಅಂಕಿ– ಅಂಶ ಬರೆದುಕೊಳ್ಳುತ್ತಾರೆ. ಅದನ್ನು ತಾಳೆ ಹಾಕಿ ಬ್ಯಾಂಕ್‌ ಖಾತೆಗೆ ಆನ್‌ ಲೈನ್‌ನಲ್ಲಿ ಹಣ ಪಾವತಿಸುತ್ತಾರೆ’ ಎಂದ ರು.  ಸಂಪರ್ಕಕ್ಕೆ: 9449193816
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT