ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು ಫಲಿತಾಂಶ ವಿಳಂಬಕ್ಕೆ ಖಂಡನೆ

Last Updated 23 ಏಪ್ರಿಲ್ 2017, 8:18 IST
ಅಕ್ಷರ ಗಾತ್ರ

ದಾವಣಗೆರೆ: ವಿಶ್ವೇಶರಯ್ಯತಾಂತ್ರಿಕ ವಿಶ್ವವಿದ್ಯಾಲಯದ ಬಿ.ಇ. ಪರೀಕ್ಷೆ ಡಿಸೆಂಬರ್‌ನಲ್ಲೇ ನಡೆದಿದೆ. ನಾಲ್ಕು ತಿಂಗಳಾದರೂ ಫಲಿತಾಂಶ ಬರದ ಕಾರಣ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ತೊಂದರೆ ಯಾಗುತ್ತಿದೆ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ದೂರಿದೆ.

ತಾಂತ್ರಿಕ ದೋಷಗಳಿಂದ ಅಂಕಪಟ್ಟಿ ಅಳಿಸಿಹೋಗಿದ್ದು, ಫಲಿತಾಂಶ ಪ್ರಕಟಣೆ ವಿಳಂಬಕ್ಕೆ ಕಾರಣ ಎಂಬ ಆಡಳಿತ ಮಂಡಳಿ ಹೇಳಿಕೆ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಸಂಘಟನೆ ನಗರ ಅಧ್ಯಕ್ಷೆ ಸೌಮ್ಯಾ ಹೇಳಿದ್ದಾರೆ.

ಫಲಿತಾಂಶವನ್ನು ಕೂಡಲೇ ಪ್ರಕಟಿಸಬೇಕು, ಯುಬಿಡಿಟಿಕಾಲೇಜಿನಲ್ಲಿ ಕಾಯಂ ಸಿಬ್ಬಂದಿ ಕೊರತೆಯಿದ್ದು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು, ಮರುಮೌಲ್ಯಮಾಪನ ಪರೀಕ್ಷಾ ಶುಲ್ಕ ಅವೈಜ್ಞಾನಿಕವಾಗಿದ್ದು, ಇದರ ಮರುಪರಿಶೀಲನೆ ನಡೆಸಬೇಕು, ವಿದ್ಯಾರ್ಥಿವೇತನ ಸಕಾಲಕ್ಕೆ ನೀಡಬೇಕು ಎಂದು ಸೌಮ್ಯಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT