ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶಿಬಿರ ಸಹಕಾರಿ

Last Updated 23 ಏಪ್ರಿಲ್ 2017, 8:38 IST
ಅಕ್ಷರ ಗಾತ್ರ

ರಾಯಚೂರು: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಧ್ಯೇಯ ವಾಗಿಸಿಕೊಂಡಿರುವ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಸಮುದಾಯ ಸಂಘಟನೆಯಿಂದ ಪ್ರತಿ ಬೇಸಿಗೆ ರಜಾ ಅವಧಿಯಲ್ಲಿ ಉಚಿತವಾಗಿ ಬೇಸಿಗೆ ಶಿಬಿರಗಳು ಆಯೋಜಿಸಲಾಗುತ್ತಿದೆ. ಈ ಮೂಲಕ ಮಕ್ಕಳಲ್ಲಿ ಕೌಶಲಗಳನ್ನು ಬೆಳೆಸಲು ಒಂದೂವರೆ ದಶಕದಿಂದ ಸಂಘಟನೆಗಳು ಶ್ರಮಿಸುತ್ತಿವೆ.

ನಗರದ ಮಕ್ಕಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಗ್ರಾಮೀಣ ಪ್ರದೇಶದ ಪರಿಚಯ ಮಾಡಿ ಕೊಡಲಾಗಿದೆ. ಧಾನ್ಯಗಳ ಪರಿಚಯ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಧಾನ್ಯಗಳ ಸಂಗ್ರಹದ ಮಾಹಿತಿ ಒದಗಿಸಲಾಗಿದೆ. ಆಕಾಶಕಾಯ ವೀಕ್ಷಣೆ, ಚಿತ್ರಕಲೆ, ನಾಟಕ, ಪರಿಸರ ಸಂಬಂಧಿತ ವಿಷಯಗಳ ಜಾಗೃತಿ, ಪೇಪರ್‌ ಕಟಿಂಗ್‌ ಸೇರಿದಂತೆ ಸುತ್ತಲಿನ ಪರಿಸರದಲ್ಲಿ ಲಭ್ಯವಾಗುವ ವಸ್ತುಗಳ ಬಳಕೆ ಮಾಡಿಕೊಳ್ಳುವ ಬಗ್ಗೆ  ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ. ಇದು 15 ವರ್ಷಗಳಿಂದ ಪ್ರತಿವರ್ಷ ನಡೆಯುತ್ತಿದೆ.

ಜಿಲ್ಲಾಮಟ್ಟದ ಅಧಿಕಾರಿ ಗಳೊಂದಿಗೆ ಸಂವಾದ ಏರ್ಪಡಿಸಿ ಮಕ್ಕಳಿಗೆ ವಿವಿಧ ಇಲಾಖೆಗಳ ಪರಿಚಯ ಕಲ್ಪಿಸಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿಬಿರ ಮುಗಿದ ನಂತರ ಶಿಬಿರಾರ್ಥಿಗಳಿಗೆ ಸಸಿ ನೀಡುವ ಮೂಲಕ ಪರಿಸರ ಸಂರಕ್ಷಣೆ ಮಾಡುತ್ತಿದೆ. ಮಕ್ಕಳಲ್ಲಿನ ಕಲೆಯನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಒಬ್ಬಿಬ್ಬರು ಪರಿಣಿತರು ಕರೆಸಲು ವೆಚ್ಚ ಕೂಡ ಮಾಡಲಾಗುತ್ತಿದೆ.

‘ಗ್ರಾಮೀಣ ಪ್ರದೇಶದ ಮಕ್ಕಳು ಹಣ ನೀಡಿ ಶಿಬಿರಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಅಂತಹವರನ್ನು ದೃಷ್ಟಿಯಲ್ಲಿಟ್ಟಕೊಂಡು ಉಚಿತವಾಗಿ ಶಿಬಿರ ನಡೆಸಿಕೊಂಡು ಬರಲಾಗಿದೆ’ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಸೈಯದ್‌ ಹಫೀಜುಲ್ಲಾ ತಿಳಿಸಿದರು.

‘ಅನೇಕ ವಿದ್ಯಾರ್ಥಿಗಳು ಶಿಬಿರದಲ್ಲಿ ತರಬೇತಿ ಪಡೆದು ಪ್ರಯೋಜನೆ ಪಡೆದುಕೊಂಡಿದ್ದಾರೆ. ಜೀವನಕ್ಕೆ ಸ್ಫೂರ್ತಿ ದೊರೆತ ಬಗ್ಗೆ ಕೆಲ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ’ ಎಂದರು.ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಸಮುದಾಯ ಸಂಘಟನೆ ಸ್ಥಳೀಯ ಇತರೆ ಸಂಘಟನೆಗಳ ಸಹಕಾರ ಪಡೆದುಕೊಳ್ಳುವ ಮೂಲಕ ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಹೊರ ತರಲು ಪ್ರಯತ್ನಿಸುತ್ತಾ ಬಂದಿವೆ.

‘ಈ ವರ್ಷದ ಶಿಬಿರದಲ್ಲಿ ವಿಶೇಷವಾಗಿ ಮಲ್ಲಗಂಬ, ಕರಾಟೆ ಕಲಿಸಲಾಗಿದೆ. ಬಾಲಕರಿಗೆ ಮಲ್ಲಗಂಬದಲ್ಲಿ ಆಸನಗಳು ಹಾಗೂ ಬಾಲಕಿಯರಿಗೆ ಮಲ್ಲಗಂಬದ ಹಗ್ಗದಲ್ಲಿ ಆಸನಗಳನ್ನು ಹುಬ್ಬಳ್ಳಿಯ ಯಲ್ಲಾಪು ರದ ತರಬೇತಿದಾರರಾದ ದಾದಾಪೀರ ಬಂಡಿವಾಡ ಹಾಗೂ ಸಂತೋಷ ವಾಲೇಕರ ಕಲಿಸಿಕೊಟ್ಟಿದ್ದಾರೆ. ರಾಯಚೂರಿನ ಅರಣ್ಯ ಇಲಾಖೆಯ ನಿಸರ್ಗಧಾಮದಲ್ಲಿ ಆಯೋಜಿಸಿರುವ 14 ದಿನಗಳ ಶಿಬಿರವು ಏಪ್ರಿಲ್‌ 24 ರಂದು ಕೊನೆಗೊಳ್ಳಲಿದೆ. ಗ್ರಾಮೀಣ ಪ್ರದೇಶದ 35 ಮಕ್ಕಳು ಸೇರಿದಂತೆ ಒಟ್ಟು 65 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT