ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವನ ಆಯುಷ್ಯ ನಿರ್ಧರಿಸುವ ಪರಿಸರ’

Last Updated 23 ಏಪ್ರಿಲ್ 2017, 9:14 IST
ಅಕ್ಷರ ಗಾತ್ರ

ಯಾದಗಿರಿ: ‘ಪರಿಸರ ಮನುಷ್ಯನ ಆಯುಷ್ಯವನ್ನು ನಿರ್ಧರಿಸುತ್ತದೆ. ಉತ್ತಮ ಪರಿಸರದಿಂದಾಗಿ ಆರೋಗ್ಯ ಉತ್ತಮ ಗೊಳ್ಳುವುದರ ಜತೆಗೆ ಮಾನವನ ಜೀವಿತಾವಧಿ ಕೂಡ ಹೆಚ್ಚುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾ ಧೀಶ ಸದಾನಂದ ಎನ್. ನಾಯಕ್ ಅಭಿಪ್ರಾಯಪಟ್ಟರು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಭೂ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಮರಗಿಡ, ಬಳ್ಳಿ, ಹೂ, ಹಕ್ಕಿ ಒಂದ ಕ್ಕೊಂದು ಸರಪಣಿ ರೂಪದಲ್ಲಿ ರೂಪು ಗೊಂಡಿವೆ. ಮರಗಿಡ ಕಡಿಮೆಯಾ ದಂತೆಲ್ಲಾ ಈ ವೈವಿಧ್ಯತೆ ಕುಸಿಯುತ್ತದೆ. ಪರಿಸರ ನಾಶ ಇಂದಿಗೆ ಮಿತಿಮೀರಿರು ವುದರಿಂದ ಪರಿಸರ ಸರಪಣಿ ಸಮತೋ ಲನ ಕಳೆದುಕೊಂಡಿದೆ. ಅದನ್ನು  ಕಾಪಾ ಡಲು ಇಂದಿಗೂ ಸಾಧ್ಯವಾಗುತ್ತಿಲ್ಲ’ಎಂದರು.ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಂ.ಕೆ. ಶೋಭಾವತಿ ಮಾತ ನಾಡಿ, ‘ಪರಿಸರ ಮನುಷ್ಯನ ಜೀವಾಳ. ಹಾಳಾಗಿ ರುವ ಪರಿಸರಿಂದ ಮನುಷ್ಯನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಆದ ಕಾರಣ ಪ್ರತಿಯೊಬ್ಬರೂ ಮರಗಿಡಿ ಗಳನ್ನು ಕರ್ತವ್ಯದ ರೀತಿಯಲ್ಲಿ ಬೆಳೆಸಿ ಪೋಷಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಿಪಾಲರಡ್ಡಿ ಇಟಗಿ ಅಧ್ಯಕ್ಷತೆ ವಹಿಸಿದ್ದರು.ವಿಶ್ವ ಭೂಮಿ ದಿನ ಕುರಿತು ವಕೀಲ ಜಿ.ಭೀಮರಾಯ ಶೇಷ ಉಪನ್ಯಾಸ ನೀಡಿದರು. ಸರ್ಕಾರಿ ವಕೀಲ ಕೆ.ಗೋಪಾ ಲರಾವ್, ವಿಶ್ವನಾಥ ಹೂಬಾಳೆ ವೇದಿ ಕೆಯಲ್ಲಿದ್ದರು.ವಕೀಲರಾದ ಬಿ. ಜಯಚಾರ್ಯ, ನರಸಿಂಗರಾವ್ ಕುಲಕರ್ಣಿ, ಶ್ರೀನಿವಾಸ್ ರಾವ್ ಯಡ್ಡಳ್ಳಿ, ಎಸ್ಪಿ. ನಾಡೆಕರ್, ಎಂ.ವಿಜಯಕುಮಾರ್, ಪುಷ್ಪಲತಾ ಪಾಟೀಲ್,ವೆಂಕಟೇಶ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT