ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿಯಾಗಿ ಉಳುಮೆ ಮಾಡುವ ನಾಗೇಶ್ವರಿ

Last Updated 23 ಏಪ್ರಿಲ್ 2017, 9:16 IST
ಅಕ್ಷರ ಗಾತ್ರ

ಕೆಂಭಾವಿ: ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಯರು ಪುರುಷರಷ್ಟೇ ಸಾಧನೆ ಮಾಡಿ ದ್ದಾರೆ. ಕೃಷಿ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ ಎಂಬುದಕ್ಕೆ  ಕೆಂಭಾವಿಯ ರೈತ ಮಹಿಳೆ ನನ್ನಪ್ಪೆನಿ ನಾಗೇಶ್ವರಿ ಅವರೇ ಸಾಕ್ಷಿ. ಸುಮಾರು 40 ಎಕರೆ ಭೂಮಿಯನ್ನು ಒಬ್ಬರೇ ಉಳುಮೆ ಮಾಡಿ, ಹೆಚ್ಚಿನ ಆದಾಯ ಗಳಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಪಟ್ಟಣ ಸಮೀದ ಕನ್ನೆಳ್ಳಿ ಕ್ರಾಸ್ ಬಳಿ ಇರುವ ಜಮೀನಿನಲ್ಲಿ ನಾಗೇಶ್ವರಿ ಅವರು ಏಕಾಂಗಿಯಾಗಿ ದುಡಿದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ತೆಲಂಗಾಣ ರಾಜ್ಯದ ಗುಂಟೂರಿನವರಾದ ಅವರು 20 ವರ್ಷಗಳಿಂದ ಇಲ್ಲಿ ವಾಸವಿದ್ದಾರೆ.ಪತಿ ನನ್ನಪೆನಿ ಜೊತೆ ಎರಡು ದಶಕದ ಹಿಂದೆಯೇ ಪಟ್ಟಣದಲ್ಲಿ ಖಾಸಗಿ ಜಮೀನನ್ನು ಗುತ್ತಿಗೆ ಪಡೆದು ಭತ್ತ, ಮೆಣಸಿನಕಾಯಿ, ಹತ್ತಿ ಸೇರಿದಂತೆ ಮುಂತಾದ ಬೆಳೆ ಬೆಳೆಯತೊಡಗಿದರು. ಮೂರು ವರ್ಷದ ಹಿಂದೆ ಪತಿ ತೀರಿಕೊಂಡಾಗ, ನಾಗೇಶ್ವರಿ ಕೊಂಚ ಅಧೀರರಾದರು. ಆದರೆ ಧೈರ್ಯ ಕಳೆದುಕೊಳ್ಳಲಿಲ್ಲ. ಏಕಾಂಗಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದರು.

ಭತ್ತ ಬೆಳೆಯುವುದರಲ್ಲಿ ಕಾರ್ಯನಿರತರಾದ ಅವರು ಎಕರೆಗೆ ಸರಾಸರಿ 40 ಚೀಲ ಭತ್ತ ಬೆಳೆದು ಆದರ್ಶ ರೈತ ಮಹಿಳೆಯೆಂದು ಎನಿಸಿ ಕೊಂಡರು. ಅವರ ಸಾಧನೆ ಕಂಡು ಗ್ರಾಮಸ್ಥರು ಖುಷಿಪಟ್ಟರು. ಬದುಕಿನು ದ್ದಕ್ಕೂ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಮಾಡಿದ ಸಾಧನೆಗೆ ಗ್ರಾಮ ಸ್ಥರು ಹೆಮ್ಮೆಪಟ್ಟರು.‘ಕೃಷಿ ಚಟುವಟಿಕೆಯಲ್ಲಿ ತೊಡಗಿ ಯಶಸ್ಸು ಗಳಿಸುವುದು ಸುಲಭದ ಸಂಗತಿಯೇನಲ್ಲ. ಆದರೆ ಪ್ರಾಮಾಣಿ ಕವಾಗಿ ಪರಿಶ್ರಮಪಟ್ಟಲ್ಲಿ ಯಾವುದೇ ಕೆಲಸ ಕಷ್ಟಕರ ಅನ್ನಿಸು ವುದಿಲ್ಲ. ಕೃಷಿಯಲ್ಲಿ ಸಾಧನೆ ಮಾಡಿರು ವುದಕ್ಕೆ ನನಗೆ ಸಂತೃಪ್ತಿಯಿದೆ. ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಬೇಕು ಎಂಬ ಗುರಿಯಿದೆ’ ಎಂದು ನಾಗೇಶ್ವರಿ ತಿಳಿಸಿದರು.

‘ಕೃಷಿ ಚಟುವಟಿಕೆಯನ್ನಷ್ಟೇ ನಂಬಿ ರುವ ಬಹುತೇಕ ರೈತರು ಆರ್ಥಿಕ ಸಂಕ ಷ್ಟದಲ್ಲಿದ್ದಾರೆ. ಸಾಲ ಬಾಧೆ ತಾಳಲಾ ರದೇ ರೈತರು ಆತ್ಮಹತ್ಯೆ ಮಾಡಿಕೊ ಳ್ಳುತ್ತಾರೆ. ಆದರೆ ನಾಗೇಶ್ವರಿ ಅವರು ಏಕಾಂಗಿಯಾಗಿ ದುಡಿದು ಕೃಷಿ ಚಟುವಟಿಕೆಯಲ್ಲಿ ಸಾಧನೆ ಮಾಡಿದ್ದಾರೆ.  ಅವರ ಈ ಕಾರ್ಯ ಶ್ಲಾಘನೀಯ’ ಎಂದು ಸಗರನಾಡು ಸೇವಾ ಪ್ರತಿಷ್ಠಾನ ದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ತಿಳಿಸಿದರು.

‘ನಮ್ಮ ಪ್ರತಿಷ್ಠಾನದ ವತಿಯಿಂದ ಅವರನ್ನು ವಿಶೇಷವಾಗಿ ಸತ್ಕರಿಸ ಲಾಗುವುದು. ಅವರ ಈ ಕೃಷಿ ಸಾಧನೆಯನ್ನು ಗುರುತಿಸಿ ಜಿಲ್ಲಾಡಳಿತಕ್ಕೆ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಲಾಗುವುದು’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT