ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ತಲುಪದ ಸಂಶೋಧನೆ: ಕಳವಳ

Last Updated 23 ಏಪ್ರಿಲ್ 2017, 9:22 IST
ಅಕ್ಷರ ಗಾತ್ರ

ಮೂಡಿಗೆರೆ: ‘ಸಂಶೋಧನೆಗಳು ಲ್ಯಾಬ್‌ ನಿಂದ ಲ್ಯಾಂಡ್‌ವರೆಗೆ ತಲುಪದಿರು ವುದು ದುರದೃಷ್ಟಕರ ಸಂಗತಿ’ ಎಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಹ್ಯಾಂಡ್‌ಪೋಸ್ಟಿನಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಬ್ಲಾಕ್‌ ಗೋಲ್ಡ್‌ಲೀಗ್‌ 5ನೇ ವರ್ಷದ ಮೊದಲ ತಂಡದ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಪ್ರಯೋಗಶಾಲೆಗಳಲ್ಲಿ ನಾನಾ ರೀತಿಯ ಪ್ರಯೋಗಗಳು ನಡೆದರೂ ಅದು ರೈತರಿಗೆ ತಲುಪದಿರುವುದು ದುರ ದೃಷ್ಟಕರ. ಬ್ಲಾಕ್‌ಗೋಲ್ಡ್‌ಲೀಗ್‌ ಹೆಸರಿ ನಲ್ಲಿ ರೈತರೇ ಸಂಘಟನೆಗೊಂಡು, ರೈತ ರಿಗೆ ಮಾಹಿತಿ ವಿನಿಮಯ ಮಾಡಿ ಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘ ನೀಯವಾಗಿದೆ. ಚಿಕ್ಕಮಗಳೂರಿನಲ್ಲಿ ಐದು ನದಿಗಳು ಉಗಮ ಕಂಡರೂ ಹತ್ತು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ತಂತ್ರಜ್ಞಾನ ದಲ್ಲಿ ಕೊರತೆ ಇರುವುದೇ ಕಾರಣ. ಯಾವುದೇ ಕ್ಷೇತ್ರದಲ್ಲಿ ವೈಜ್ಞಾನಿಕತೆ, ತಂತ್ರಜ್ಞಾನ ಬಳಕೆ ಮಾಡಿದರೆ ಯಶಸ್ವಿ ಸಾಧಿಸಲು ಸಾಧ್ಯ. ರೈತರು ಕೃಷಿ ಮಾಡುವ ಮುನ್ನ ಯಾವ ಕೃಷಿಯನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ತಿರ್ಮಾನ ಕೈಗೊಳ್ಳಬೇಕು. ಎಲ್ಲರೂ ಮಾಡುವ ಕೃಷಿಯನ್ನೇ ಅನುಸರಿಸಿದರೆ ಬೆಲೆ ಇಲ್ಲದೇ ನಷ್ಟ ಅನುಭವಿಸಬೇ ಕಾಗುತ್ತದೆ’ ಎಂದರು.

ಬಿಜಿಎಲ್‌ ಪ್ರಸ್ತಾಪವನ್ನು ಉಲ್ಲೇಖಿಸಿ ಜಿಲ್ಲೆಯಲ್ಲಿ ಕಾಳುಮೆಣಸಿನ ಉದ್ದಿಮೆಗೆ ಅನುಕೂಲವಾಗುವಂತೆ ಅಂತರ ರಾಷ್ಟ್ರೀಯ ಕಾಳುಮೆಣಸಿನ ಪಾರ್ಕ್‌ ನಿರ್ಮಿಸುವ ಪ್ರಯತ್ನ ನಡೆಸಲಾಗುವುದು ಎಂದರು.ಬಿಜಿಎಲ್‌ ಅಧ್ಯಕ್ಷ ಕೆ.ಆರ್‌. ಕೇಶವ್‌ ಮಾತನಾಡಿ, ಭಾರತವು ವರ್ಷದಿಂದ ವರ್ಷಕ್ಕೆ ಕಾಳು ಮೆಣಸಿನ ಕೃಷಿಯಲ್ಲಿ ಹಿನ್ನೆಡೆ ಸಾಧಿಸುತ್ತಿದೆ. ದೇಶದ ಆರ್ಥಿಕತೆಗೆ ಕಾಳುಮೆಣಸಿನ ಕೃಷಿ ಹೆಚ್ಚು ಲಾಭನೀಡುವ ಕ್ಷೇತ್ರವಾಗಿದ್ದು, ವೈಜ್ಞಾನಿಕ ಮಾದರಿಯಲ್ಲಿ ಕೃಷಿ ನಡೆಸಬೇಕಿದೆ’ ಎಂದರು.

‘ಕಾಳು ಮೆಣಸಿನ ಕೃಷಿಗೆ ಆರೈಕೆ ಮುಖ್ಯವಾಗಿದ್ದು, ನರ್ಸರಿಯಿಂದ ಕಟಾವಿ ನವರೆಗೂ ಸೂಕ್ತವಾಗಿ ಮೇಲ್ವಿಚಾರಣೆ ನಡೆಸಬೇಕು. ಮಣ್ಣಿನ ಪರೀಕ್ಷೆ, ಕಾಳು ಮೆಣಸಿನ ಎಲೆಗಳ ಪರೀಕ್ಷೆ ಮುಂತಾ ದವವುಗಳನ್ನು ಪ್ರತಿ ವರ್ಷ ಕೈಗೊಂಡು, ಅಗತ್ಯ ಪೋಷ ಕಾಂಶಗಳನ್ನು ಗಿಡಕ್ಕೆ ನೀಡಬೇಕು’ ಎಂದರು.ಕೃಷಿಕ ಪತ್ರಿಕೆಯ ದಿನೇಶ್್‌ದೇವ ರುಂದ ಮಾತನಾಡಿ, 5 ವರ್ಷಗಳಿಂದ ಬಿಜಿಎಲ್‌ ಸಂಸ್ಥೆಯು ಕಾಳು ಮೆಣಸಿನ ತೋಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೂ ಕಾಳುಮೆಣಸಿನ ಬಗ್ಗೆ ಹಲವು ಮಾಹಿತಿಗಳನ್ನು ರೈತರೊಂದಿಗೆ ವಿನಿಮಯ ಮಾಡಿಕೊಂಡು ಹಲವು ರೈತರಿಗೆ ಮಾರ್ಗದರ್ಶನವಾಗಿ ದುಡಿ ಯುತ್ತಿದೆ. ಹತ್ತು ತಿಂಗಳ ತರಬೇತಿಯಲ್ಲಿ ರಾಜ್ಯದ ನಾನಾ ಭಾಗಗಳಲ್ಲಿರುವ ಕಾಳುಮೆಣಸಿನ ತೋಟಗಳಿಗೆ ತೆರಳಿ ಮಾರ್ಗದರ್ಶನ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬಿಜಿಎಲ್‌ ಸಂಸ್ಥೆಯ ಭೂತನಕಾಡುಅರವಿಂದ್, ಮೋಹನ್‌ಆಳ್ವಾರ್‌, ಸುನೀಲ್‌, ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಮಾದಯ್ಯ ನಿರ್ದೇಶಕರು, ಉಪ ವಿಭಾಗಾಧಿಕಾರಿ ಸಂಗಪ್ಪ, ಹಿರಿಯ ವಿದ್ಯಾರ್ಥಿಗಳು ಹಾಗೂ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT