ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ ದೇವಾಲಯದಲ್ಲಿ ರಥೋತ್ಸವ

Last Updated 23 ಏಪ್ರಿಲ್ 2017, 9:28 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಅಭಯಾರಣ್ಯಗಳಲ್ಲಿ ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯ ಹೆಬ್ಬೆ ಅಭಯಾರಣ್ಯವೂ ಒಂದು. ಇಲ್ಲಿರುವ ಐತಿಹಾಸಿಕ ಭವಾನಿ ಶಂಕರೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರ ರಥೋತ್ಸವ ನಡೆಯಲಿದೆ.ಅರಣ್ಯ ಹಾಗೂ ವನ್ಯ ಜೀವಿಗಳ ಸಂತತಿ ಅಳಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಈ ಅಭಯಾರಣ್ಯದಲ್ಲಿ ಆನೆ, ಹುಲಿ, ಜಿಂಕೆ, ಕಾಡು ಕೋಣ, ಕಾಡು ಹಂದಿ ಮತ್ತಿತರ ಅಪರೂಪದ ಪ್ರಾಣಿ ಸಂಕುಲ ಮತ್ತು ಹರಿದ್ವರ್ಣ ಕಾಡು ಇದೆ.

ಇಂತಹ ಪ್ರಕೃತಿದತ್ತವಾದ ಪ್ರದೇಶದ ಮಧ್ಯದಲ್ಲಿರುವ ದೇವಸ್ಥಾನವೊಂದು ಐತಿಹಾಸಿಕ ಪ್ರಾಮುಖ್ಯತೆ ಪಡೆದಿದ್ದು ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಈ ಅಭಯಾರಣ್ಯ ದಲ್ಲಿರುವುದು ಭವಾನಿ ಶಂಕರೇಶ್ವರ ದೇವಸ್ಥಾನ.ಇಲ್ಲಿರುವ ಭವಾನಿ ಶಂಕರೇಶ್ವರ ಭೂಮಿಯಿಂದ ಉದ್ಭವವಾದ ಲಿಂಗವಾಗಿದ್ದು ಭದ್ರಾ ನದಿಯ ದಡದಲ್ಲಿರುವ  ಕಳಸ, ಖಾಂಡ್ಯ, ಕೂಡ್ಲಿ, ಹೆಬ್ಬೆ, ಸೊಂಪುರ ಎಂಬ ಪಂಚ ಲಿಂಗಗಳಲ್ಲಿ ಇದೂ ಸಹ ಒಂದಾಗಿದೆ. ಇದನ್ನು ‘ಪಂಚ’ ಕ್ಷೇತ್ರವೆಂದೂ ಸಹ ಕರೆಯುತ್ತಾರೆ.  ಈ ದೇವಸ್ಥಾನವು ಹೊಯ್ಸಳರ ಕಾಲದಾಗಿದ್ದು 800 ರಿಂದ 1000 ವರ್ಷಗಳ  ಪ್ರಾಚೀನ ದೇವಾಲಯದಲ್ಲಿ ಒಂದಾಗಿದೆ.

ದೇವಾಲಯದ ಐತಿಹ್ಯಗಳು: ಹಿಂದೆ ಈ ಕ್ಷೇತ್ರದಲ್ಲಿ ಹೇರಂಭ ಮಹರ್ಷಿಗಳು ತಪಸ್ಸು ಮಾಡಿ ದ್ದರಿಂದ ಇದಕ್ಕೆ ‘ಹೇರಂಭ’ ಎಂದು ಹೆಸರು ಬಂತು. ನಂತರ ಹೆಬ್ಬೆಯಾಯಿತು. ಅಲ್ಲದೇ ಅಗಸ್ತ್ಯಮುನಿಗಳು ಇದನ್ನು ಸ್ಥಾಪಿಸಿದ ರೆಂದು ತಿಳಿದು ಬರುತ್ತದೆ. ಹಿಂದಿನ ಕಾಲದಲ್ಲಿ ಮಹಾ ಶಿವರಾತ್ರಿಯ ದಿನ ವಿಜೃಂಭಣೆಯಿಂದ ಜಾತ್ರೋತ್ಸವ ನಡೆಯುತ್ತಿತ್ತು. ಆ ದಿವಸ ಶಿವಪ್ಪನಾಯಕ ಈ ಪಂಚ ಲಿಂಗಗಳ  ದರ್ಶನ ಪಡೆಯು ತ್ತಿದ್ದರು ಎಂಬುದಾಗಿ ಐತಿಹಾಸಿಕ ದಾಖಲೆ ಮತ್ತು ಶಾಸನ ಗಳಿಂದ ತಿಳಿದು ಬರುತ್ತದೆ.  ಈ ಪ್ರದೇಶದಲ್ಲಿ ಕಳೆದ ಹಲವು ವರ್ಷ ಗಳ ಹಿಂದೆ ಅನಾದಿ ಕಾಲದಿಂದಲೂ ವಾಸವಾಗಿ ದ್ದ ಗ್ರಾಮಸ್ಥರನ್ನು ಅಭಯಾರಣ್ಯದ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಕಾರಣಕ್ಕಾಗಿ ಸ್ಥಳಾಂತರಿಸಿ ಬೇರೆಡೆ ಪುನರ್ವಸತಿ ಕಲ್ಪಿಸಲಾಗಿದೆ.

ಸ್ಥಳಕ್ಕೆ ಹೋಗುವ ಮಾರ್ಗ: ಈ ಐತಿಹಾಸಿಕ ಸ್ಥಳಕ್ಕೆ ಹೋಗ ಬೇಕಾದರೆ ನರಸಿಂಹರಾಜಪುರ ದಿಂದ ಹಂತುವಾನಿ ಗ್ರಾಮದವರೆಗೆ ಬಸ್ ಸೌಲಭ್ಯವಿದೆ. ಅಲ್ಲಿಂದ ಮೋರಿಮಠ ಗ್ರಾಮಕ್ಕೆ ನಡೆದು ಕೊಂಡು ಹೋಗ ಬೇಕು (ಖಾಸಗಿ ವಾಹನವಿದ್ದರೆ ಈ ಗ್ರಾಮದವರೆಗೆ ನಡೆದುಕೊಂಡು ಹೋಗ ಬಹುದು). ನಂತರ ಮಾರ್ಗ ಮಧ್ಯದಲ್ಲಿ ಹರಿಯುವ ಭದ್ರಾ ನದಿಯನ್ನು ದೋಣಿ ಅಥವಾ ಉಕ್ಕುಡದ ಮೂಲಕ ದಾಟ ಬೇಕಾಗುತ್ತದೆ. ಪ್ರತಿ ದಿನವೂ ಈ ಕ್ಷೇತ್ರಕ್ಕೆ ಹೋಗಲು ಅವಕಾಶವಿರುವುದಿಲ್ಲ. ಏಕೆಂದರೆ ಅಭಯಾರಣ್ಯ ಪ್ರದೇಶ. ಹಾಗಾಗಿ ಜಾತ್ರೋತ್ಸವ ನಡೆಯುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅನುಮತಿಯಿರುವುದರಿಂದ ಈ ಸ್ಥಳಕ್ಕೆ ಹೋಗಲು ಅವಕಾಶವಿದೆ. ರಥೋತ್ಸವದ ಸಂದರ್ಭದಲ್ಲಿ ವಿಶೇಷ ಬಸ್ ಸೌಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT