ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆನೆರಿಕ್‌ ಔಷಧಿ ಕಡ್ಡಾಯಕ್ಕೆ ಕಾಯ್ದೆ

Last Updated 23 ಏಪ್ರಿಲ್ 2017, 9:58 IST
ಅಕ್ಷರ ಗಾತ್ರ

ಮಂಗಳೂರು: ದೇಶದ ಎಲ್ಲ ವೈದ್ಯರು ಬ್ರಾಂಡೆಡ್‌ ಔಷಧಿಗಳ ಬದಲಿಗೆ ಜೆನೆರಿಕ್‌ ಔಷಧಿಗಳ ಬಳಕೆಯನ್ನು ಕಡ್ಡಾಯಗೊಳಿಸಲು ವೈದ್ಯಕೀಯ ಕಾನೂ ನುಗಳಿಗೆ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಹೇಳಿದರು.

ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ, ಗುರುಪುರ– ಕೈಕಂಬ ಮತ್ತು ಬಿಪಿಪಿಐ ದೆಹಲಿ ಸಹಯೋಗದಲ್ಲಿ ನಗರದ ಟಿ.ವಿ.ರಮಣ ಪೈ ಸಭಾಂಗ ಣದಲ್ಲಿ ಶನಿವಾರ ನಡೆದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜ ನೆಯ ಮಾಹಿತಿ ಕಾರ್ಯಾಗಾರ ಹಾಗೂ ಜನೌಷಧ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಬ್ರಾಂಡೆಡ್‌ ಔಷಧಿಗಳ ಬದಲಿಗೆ ಜೆನೆರಿಕ್‌ ಔಷಧಿಗಳ ಬಳಕೆಗೆ ಒತ್ತು ನೀಡುವಂತೆ ಭಾರತೀಯ ವೈದ್ಯಕೀಯ ಮಂಡಳಿ ಮೂಲಕ ವೈದ್ಯರಿಗೆ ಮನವಿ ಮಾಡಲಾಗಿತ್ತು. ಆದರೆ, ಅದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಇದ ಕ್ಕಾಗಿ ವೈದ್ಯಕೀಯ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿ ದ್ದೇನೆ. ಜೆನೆರಿಕ್‌ ಔಷಧಿ ಲಭ್ಯವಿಲ್ಲದ ಸಂದರ್ಭದಲ್ಲಿ ಮಾತ್ರ ಬ್ರಾಂಡೆಡ್‌ ಔಷಧ ಬಳಕೆಗೆ ಸಲಹೆ ನೀಡಲು ಅವಕಾಶ ಕಲ್ಪಿಸುವಂತೆ ಕಾನೂನು ತಿದ್ದುಪಡಿ ತರಲಾಗುವುದು’ ಎಂದರು.

ಭಾರತದಲ್ಲಿ ಪ್ರತಿ ವರ್ಷ ₹ 2 ಲಕ್ಷ ಕೋಟಿ ಮೌಲ್ಯದ ಔಷಧಿಗಳನ್ನು ಉತ್ಪಾ ದಿಸಲಾಗುತ್ತಿದೆ. ಅದರಲ್ಲಿ ₹ 1 ಲಕ್ಷ ಕೋಟಿ ಮೌಲ್ಯದ ಔಷಧಿ ದೇಶದೊಳಗೆ ಬಳಕೆಯಾಗುತ್ತಿದೆ. ಜಗತ್ತಿನ ಜನರು ಬಳಸುವ ಪ್ರತಿ ಐದು ಔಷಧಿಗಳಲ್ಲಿ ಎರಡು ಭಾರತದಲ್ಲಿ ಉತ್ಪಾದನೆಯಾಗು ತ್ತಿವೆ. ಆದರೆ, ದರ ದುಬಾರಿ ಯಾದ ಕಾರಣದಿಂದ ದೇಶದ ಬಡವರಿಗೆ ಔಷಧಿ ಕೈಗೆಟುಕುತ್ತಿಲ್ಲ. ಇದಕ್ಕೆ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿ ಯೋಜನೆ ಮೂಲಕ 650 ಬಗೆಯ ಔಷಧಿಗಳನ್ನು ಶೇಕಡ 70ರಷ್ಟು ರಿಯಾಯ್ತಿ ದರದಲ್ಲಿ ಒದಗಿಸಲಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಆರು ಕೋಟಿ ಜನರು ಹೃದ್ರೋಗದಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ ಐದು ಲಕ್ಷ ಜನರು ಸ್ಟೆಂಟ್‌ ಅಳವಡಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಸಾಮಾನ್ಯ ಸ್ಟೆಂಟ್ ಬೆಲೆ ₹ 50,000 ಮತ್ತು ವಿಶೇಷ ಸ್ಟೆಂಟ್ ಬೆಲೆ ₹ 1.5 ಲಕ್ಷದವರೆಗೆ ಇತ್ತು. ಅದನ್ನು ₹ 7,500 ಮತ್ತು ₹ 30,000ಕ್ಕೆ ಮಿತಿಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ದೇಶದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

‘ರಾಜ್ಯದಲ್ಲಿ 200 ಜನೌಷಧಿ ಕೇಂದ್ರಗಳನ್ನು ಆರಂಭಿಸುವುದಾಗಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ತಿಳಿಸಿದ್ದರು. ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಸ್ವಯಂ ಆಸಕ್ತಿಯಿಂದ 100 ಕೇಂದ್ರಗಳನ್ನು ಜಿಲ್ಲೆಯಲ್ಲಿ ತೆರೆಯಲು ಮುಂದಾಗಿದ್ದಾರೆ. ಇದು ಶ್ಲಾಘನೆಗೆ ಅರ್ಹವಾದ ಕೆಲಸ’ ಎಂದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ, ‘ಬ್ರಾಂಡೆಡ್‌ ಔಷಧಿಗಳ ಬಳಕೆಗೆ ಸಲಹೆ ನೀಡುವುದರಿಂದ ವೈದ್ಯರಿಗೆ ಕಮಿಷನ್ ದೊರೆಯುತ್ತದೆ. ಜೆನೆರಿಕ್‌ ಔಷಧಿ ಬಳಕೆಗೆ ಸಲಹೆ ನೀಡಿದರೆ ಅಂತಹ ಲಾಭ ಇರುವುದಿಲ್ಲ. ಕಮಿಷನ್‌ ಆಸೆಗೆ ಬ್ರಾಂಡೆಡ್‌ ಔಷಧಿಗಳ ಪರ ವೈದ್ಯರು ಒಲವು ತೋರುವುದನ್ನು ತಪ್ಪಿಸಲು ಕಠಿಣ ಕಾನೂನು ತರುವುದೊಂದೇ ಪರಿಹಾರ’ ಎಂದು ಹೇಳಿದರು.

‘ನಾನು 40 ವರ್ಷಗಳಿಂದ ರಾಜಕಾ ರಣದಲ್ಲಿ ಇದ್ದೇನೆ. ನಳಿನ್‌ಕುಮಾರ್‌ ರೀತಿ ಕೆಲಸ ಮಾಡಲು ಆಗಿಲ್ಲ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ₹ 50 ಲಕ್ಷ ಮಾತ್ರ ವೆಚ್ಚ ಮಾಡಲು ನನಗೆ ಸಾಧ್ಯವಾಗಿದೆ. ನಳಿನ್‌ಕುಮಾರ್ ಇದೇ ಯೋಜನೆಯಲ್ಲಿ ₹ 30 ಕೋಟಿ ವೆಚ್ಚ ಮಾಡಿ ಮಾದರಿ ಸಂಸದ ಎನಿಸಿಕೊಂಡಿ ದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು.

ನಳಿನ್‌ಕುಮಾರ್ ಕಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಪಿಪಿಐ ಮಹಾನಿರ್ದೇಶಕ ರೋಹಿತ್ ಮೆಹ್ರಾ, ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಭಾಸ್ಕರ್ ದೇವಸ್ಯ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಯು.ರಾಜೀವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT