ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರೂ ಸೇರಿ 10 ಮಂದಿ ವಶ

Last Updated 23 ಏಪ್ರಿಲ್ 2017, 10:06 IST
ಅಕ್ಷರ ಗಾತ್ರ

ಕುಂದಾಪುರ: ಕುಂಭಾಸಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಗುರುವಾರ ದೇವರ ದರ್ಶನಕ್ಕೆಂದು ಬಂದಿದ್ದ ಬೆಂಗ ಳೂರು ಮೂಲದ ಜ್ಯೋತಿಲಕ್ಷ್ಮಿ ಎಂಬ ವರ ವ್ಯಾನಿಟಿ ಬ್ಯಾಗಿನಲ್ಲಿದ್ದ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿಲಕ್ಷ್ಮಿ ಅವರು ಕುಟುಂಬ ಸಮೇತರಾಗಿ ದೇವರ ದರ್ಶನಕ್ಕೆಂದು ಬಂದವರು ಮಂಗಳರಾತಿಗಾಗಿ ಗರ್ಭ ಗುಡಿಯ ಮುಂದೆ ನಿಂತಿದ್ದರು. ಈ ವೇಳೆಯಲ್ಲಿ ಜನಜಂಗುಳಿ ಇದ್ದು ದರಿಂದಾಗಿ ಅವರ ಬ್ಯಾಗಿನಲ್ಲಿ ಇಡಲಾ ಗಿದ್ದ ಚಿನ್ನಾಭರಣಗಳು ಕಳ್ಳರ ಪಾಲಾಗಿ ರುವುದು ಗಮನಕ್ಕೆ ಬಂದಿರಲಿಲ್ಲ.

ದೇವರ ದರ್ಶನ ಬಳಿಕ ತಮ್ಮ ವ್ಯಾನಿಟಿ ಬ್ಯಾಗ್ ಪರಿಶೀಲಿಸುವಾಗ ಚಿನ್ನಾ ಭರಣ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಮಹಿಳೆ ನೀಡಿದ ದೂರಿನಡಿ ಯಲ್ಲಿ ಪ್ರಕರಣ ದಾಖಲಿಸಿಕೊಂಡ ಕುಂದಾಪುರ ಪೊಲೀಸರು ತನಿಖೆಗೆ ಮುಂದಾಗಿದ್ದರು. ದೇಗುಲದ ಸಿ.ಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಗುಂಪಾಗಿದ್ದ ಮಹಿಳೆಯರ ತಂಡ ವೊಂದು ಅನುಮಾನಾಸ್ಪದವಾಗಿ ತಿರು ಗಾಡುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯರಲ್ಲಿ ಈ ಮಹಿಳೆಯರ ಗುಂಪಿನ ಬಗ್ಗೆ ವಿಚಾರಣೆ ನಡೆಸಿದಾಗ ತೂಫಾನ್ ವಾಹನದಲ್ಲಿ ಮಹಿಳೆಯರ ಗುಂಪು ಹೋಗಿರುವ ಬಗ್ಗೆ ಮಾಹಿತಿ ದೊರೆಕಿದೆ.

ದೇವಸ್ಥಾನಗಳನ್ನೇ ಕೇಂದ್ರವಾಗಿರಿಸಿ ಕೊಂಡು ಈ ತಂಡ ಕಾರ್ಯಾಚರಿಸುತ್ತಿದೆ ಎನ್ನುವ ಶಂಕೆಯಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದ ಪೊಲೀಸರು, ಶೃಂಗೇರಿ ಹಾಗೂ ಹೊರನಾಡು ಕ್ಷೇತ್ರಗಳಲ್ಲಿ ಈ ತಂಡ ತಮ್ಮ ಕೈ ಚಳಕ ತೋರಬಹುದು ಎನ್ನುವ ಸಾಧ್ಯತೆಯಲ್ಲಿ ಅಲ್ಲಿಯ ಪೊಲೀ ಸರ ಸಹಕಾರದಿಂದ ತಂಡದ ಬೆನ್ನು ಹತ್ತುವ ಕಾರ್ಯಕ್ಕೆ ಮುಂದಾಗಿದ್ದರು.

ಕುಂದಾಪುರ ಹಾಗೂ ಚಿಕ್ಕಮಗ ಳೂರು ಪೊಲೀಸರ ಜಂಟಿ ಕಾರ್ಯಾಚ ರಣೆಯ ತಂಡ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪ ಆರೋಪಿಗಳು ಪ್ರಯಾಣಿಸುತ್ತಿದ್ದ ವಾಹನ ಪತ್ತೆ ಹಚ್ಚಿ 10 ಮಂದಿ ಶಂಕಿತರನ್ನು ಶುಕ್ರವಾರ ರಾತ್ರಿ ವಶಕ್ಕೆ ಪಡೆದು ಕೊಂಡಿದ್ದಾರೆ.

ಹಾವೇರಿ ಸವಣೂರಿನ ರಾಘ ವೇಂದ್ರ (24), ಗೌಸ್ ಮೊಯದ್ದೀನ್ (35), ಗದಗ ಮೂಲದ ರವಿ (32), ಶಾರದ (30), ಲಕ್ಕಮ್ಮ (50), ನೇತ್ರಾ (27), ಶ್ರುತಿ (26), ರಾಜು ಚಿಂತಾಮಣಿ (35), ದಾವಣಗೆರೆಯ ಹರಪನಹಳ್ಳಿಯ ದಾಕ್ಷಾಯಿಣಿ (24) ಹಾಗೂ ಗಂಗವ್ವ (40) ಬಂಧಿತ ಆರೋಪಿಗಳು. 

ಕೊಲ್ಲೂರು ಜಾತ್ರೆಯ ವೇಳೆಯಲ್ಲಿ ಇದೇ ರೀತಿ ಕೃತ್ಯವನ್ನು ಗುರಿಯಾಗಿರಿಸಿ ಕೊಂಡಿದ್ದ ತಂಡವೊಂದನ್ನು ಪತ್ತೆ ಹಚ್ಚಿದ್ದ ಡಿವೈಎಸ್ಪಿ ಪ್ರವೀಣ್‌ ಎಚ್‌. ನಾಯಕ್‌ ಅವರು ಶಂಕಿತ ತಂಡದ ಸದಸ್ಯರನ್ನು ವಶಕ್ಕೆ ಪಡೆದು ಪೊಲೀಸ್‌ ಠಾಣೆಯಲ್ಲಿ ಇರಿಸಿದ್ದ ಕಾರಣದಿಂದ ಕೊಲ್ಲೂರಿನಲ್ಲಿ ಈ ಬಾರಿ ಕಳ್ಳರ ಕೈ ಚಳಕ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT