ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಜೋಡಿ ರಥೋತ್ಸವ

Last Updated 23 ಏಪ್ರಿಲ್ 2017, 10:44 IST
ಅಕ್ಷರ ಗಾತ್ರ

ಕೊಣನೂರು: ದೊಡ್ಡಮಗ್ಗೆ ಹೋಬಳಿಯ ಪ್ರಸಿದ್ಧ ಶ್ರೀ ಹಾನಗಲ್ಲಮ್ಮ ಮತ್ತು ಶನಿದೇವರ ಜೋಡಿ ರಥೋತ್ಸವ ಶನಿವಾರ ಧಾರ್ಮಿಕ ವಿಧಿಯಂತೆ ಸಡಗರ, ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.ರಥೋತ್ಸವದ ಅಂಗವಾಗಿ ಶನಿವಾರ ದೇವಿಗೆ ಪಂಚಾಮೃತ, ಜೇನುಸಹಿತ ಅಭಿಷೇಕ ನಡೆಯಿತು. ಅರ್ಚನೆ, ಮಹಾಮಂಗಳಾರತಿ, ದೇವತಾ ಪ್ರಾರ್ಥನೆ, ಸ್ವಸ್ತಶ್ರೀ. ಪುಣ್ಯಾಹವಾಚನ, ನಿತ್ಯಹೋಮ, ಬಲಿ ಪ್ರದಾನ ಪ್ರಸಾದ ವಿನಿಯೋಗ ನಡೆಯಿತು.

ಅಪಾರ ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಧನ್ಯತಾ ಭಾವ ಹೊಂದಿದರು. ನಂತರ ಗ್ರಾಮದ ಹಬ್ಬಮ್ಮದೇವಿಯನ್ನು ಕೆರೆಯ ಬಳಿಯಿಂದ ಮೆರವಣಿಗೆಯಲ್ಲಿ ತಂದು ಆಂಜನೇಯಸ್ವಾಮಿ, ಹಾನಗಲ್ಲಮ್ಮ ಸನ್ನಿಧಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು.ಹಾನಗಲ್ಲಮ್ಮ ದೇವಿಯ ಉತ್ಸವ ಮೂರ್ತಿಯನ್ನು ತಂದು ರಥಕ್ಕೆ ಪ್ರದಕ್ಷಿಣೆ ಹಾಕಿ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷಪೂಜೆ ಸಲ್ಲಿಸಲಾಯಿತು.

ತಾಲ್ಲೂಕು ದಂಡಾಧಿಕಾರಿ ಪ್ರಸನ್ನಮೂರ್ತಿ  ರಥಕ್ಕೆ ಪೂಜೆ ಸಲ್ಲಿಸಿ, ತೇರು ಎಳೆಯಲು ಚಾಲನೆ ನೀಡಿದರು. ಶನೇಶ್ವರ ರಥ ಹಾನಗಲ್ಲಮ್ಮನ ರಥವನ್ನು ಹಿಂಬಾಲಿಸಿತು.  ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.ತಹಶೀಲ್ದಾರ್ ಪ್ರಸನ್ನಮೂರ್ತಿ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಜಿ.ಪಂ ಮಾಜಿ ಅಧ್ಯಕ್ಷೆ ಭಾಗ್ಯಾ ಗೋವಿಂದೇಗೌಡ, ತಾ ಪಂ ಮಾಜಿ ಸದಸ್ಯ ಪಾಂಡುರಂಗ,  ಸುತ್ತಮತ್ತಲ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಬಿಸಿಲಿನಲ್ಲಿ ದಣಿದಿದ್ದ ಭಕ್ತರಿಗೆ ಮಜ್ಜಿಗೆ ವಿತರಿಸಿದರು.ರಥೋತ್ಸವದ ಅಂಗವಾಗಿ ಆಟಿಕೆಗಳು, ತಿಂಡಿ,ಪುರಿ, ಕಬ್ಬಿನಹಾಲಿನ ಅಂಗಡಿಗಳು ತೆರೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT