ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಿ ಚಿತ್ರ ನೋಡುವುದರಿಂದ ಸಂಸಾರದಲ್ಲಿ ಬಿರುಕು!

Last Updated 23 ಏಪ್ರಿಲ್ 2017, 10:53 IST
ಅಕ್ಷರ ಗಾತ್ರ

ಲಂಡನ್‌: ಅತಿ ಹೆಚ್ಚು ನೀಲಿ ಚಿತ್ರಗಳನ್ನು ನೋಡುವುದರಿಂದ ಸಂಬಂಧ ಹಾಗೂ ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆಗಳಿವೆ ಎಂದು ಬ್ರಿಟನ್‌ ಮೂಲದ ಡೈಲಿ ಆನ್‌ಲೈನ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಡೈಲಿ ಆನ್‌ಲೈನ್‌ ಸುದ್ದಿ ಸಂಸ್ಥೆಯು ನೀಲಿ ಚಿತ್ರ ನೋಡುವ ಗೀಳನ್ನು ಹೊಂದಿರುವ ವಿವಾಹಿತ ಯುವಕ ಮತ್ತು ಯುವತಿಯರನ್ನು ಅಧ್ಯಯನಕ್ಕೆ ಒಳಪಡಿಸಿ ಈ ಸಂಶೋಧನಾ ವರದಿಯನ್ನು ತಯಾಸಿದೆ. 

ನೀಲಿ ಚಿತ್ರ ನೋಡುವ ವಿವಾಹಿತರಲ್ಲಿ ಲೈಂಗಿಕ ಕಾರಣಗಳಿಂದಾಗಿ ಶೇ.40 ರಷ್ಟು ಸಂಸಾರಗಳಲ್ಲಿ ಬಿರುಕು ಉಂಟಾಗಿದ್ದು  ಸಂಗಾತಿ ಜತೆ ವಾಸ ಮಾಡದೇ ಪ್ರತ್ಯೇಕವಾಗಿ ವಾಸಿಸುತ್ತಿರುವುದು ಈ ಅಧ್ಯಯನದಿಂದ ತಿಳಿದುಬಂದಿದೆ. ಇದಕ್ಕಾಗಿ 4000 ವಿವಾಹಿತ ಯುವಕ ಮತ್ತು ಯುವತಿಯರನ್ನು ಸಂದರ್ಶನ ಮಾಡಿ ಅವರ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ.

ನೀಲಿ ಚಿತ್ರಗಳ ಪರಿಣಾಮ..
ನೀಲಿ ಚಿತ್ರಗಳಲ್ಲಿ ಲೈಂಗಿಕತೆಯನ್ನು ವೈಭವಿಕರಿಸಿ ಚಿತ್ರಿಸಲಾಗಿರುತ್ತದೆ. ಇಂತಹ ಚಿತ್ರಗಳನ್ನು ನೋಡುವ ಗೀಳು ಬೆಳೆಸಿಕೊಂಡವರು ಸಂಗಾತಿ ಜತೆ ಅದೇ ತೆರನಾಗಿ ಸೆಕ್ಸ್‌ ಮಾಡಲು ಬಯಸುತ್ತಾರೆ. ವಾಸ್ತವಾಗಿ ನೀಲಿ ಚಿತ್ರಗಳಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು  ಸಾಧ್ಯವಾಗದಿದ್ದಾಗ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಇದರಿಂದ ಲೈಂಗಿಕತೆಯಲ್ಲಿ ಅಸಮರ್ಥರಾಗುತ್ತಾರೆ ಎಂದು ಮನೋವಿಜ್ಞಾನಿಗಳು ಮತ್ತು ಲೈಂಗಿಕ ತಜ್ಞರು ಅಭಿಪ್ರಾಯಪಡುತ್ತಾರೆ.

ನೀಲಿ ಚಿತ್ರಗಳನ್ನು ನೋಡುವವರು ಸಹಜವಾಗಿಯೇ ಕಲ್ಪನಾ ಲೋಕದಲ್ಲಿ ತೇಲುತ್ತಿರುತ್ತಾರೆ.  ಸಂಗಾತಿ ಜತೆಯಲ್ಲಿ ವಾಸಿಸುವುದನ್ನು ಬಿಟ್ಟು ಪ್ರತ್ಯೇಕವಾಗಿ ವಾಸಿಸುತ್ತಾರೆ. ಇದರಿಂದ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿ ಬದುಕನ್ನು ನರಕ ಮಾಡಿಕೊಳ್ಳುತ್ತಾರೆ.  ಆದರಿಂದ್ದ ಇಂದಿನ ಯುವ ಜನಾಂಗ ನೀಲಿ ಚಿತ್ರಗಳತ್ತ ಹೆಚ್ಚು ಆಕರ್ಷಿತರಾಗಬಾರದು ಎಂದು ಈ ಅಧ್ಯಯನದ ನೇತೃತ್ವವಹಿಸಿದ್ದ ಹಾಗೂ ಲೈಂಗಿಕ ತಜ್ಞರಾದ ನಾಥನ್ ಲ್ಯಾಂಡ್ರೋಟ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT