ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹರಿಸಲು ನೆರವಾಗಿ

Last Updated 23 ಏಪ್ರಿಲ್ 2017, 11:02 IST
ಅಕ್ಷರ ಗಾತ್ರ

ಮೈಸೂರು: ಕಾರ್ಯಕರ್ತರು ನಾಯಕರ ಜತೆ ಸುತ್ತಾಡದೆ ಕ್ಷೇತ್ರಗಳ ಸಮಸ್ಯೆಯನ್ನು ಅರ್ಥಮಾಡಿಕೊಂಡು ಶಾಸಕರು, ಸಚಿವರ ಗಮನಕ್ಕೆ ತಂದು ಪರಿಹರಿಸ ಬೇಕು ಎಂದು ಸಚಿವ ತನ್ವೀರ್‌ ಸೇಠ್‌ ಸಲಹೆ ನೀಡಿದರು.ನಗರದಲ್ಲಿ ಶನಿವಾರ ನಡೆದ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಆರ್‌.ಮೂರ್ತಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಜನರಿಗೆ ತಲುಪಿಸ ಬೇಕು. ಮೈಸೂರನ್ನು ಕಾಂಗ್ರೆಸ್‌ ಭದ್ರ ಕೋಟೆಯನ್ನಾಗಿ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಬ್ಲಾಕ್‌ ಅಧ್ಯಕ್ಷರು ಹೆಚ್ಚು ಜವಾಬ್ದಾರಿ ವಹಿಸಬೇಕು. ವಾರ್ಡ್‌, ಬಡಾವಣೆಗಳಲ್ಲಿ ಇರುವ ಹಿರಿಯ ಕಾಂಗ್ರೆಸಿಗರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಅವರು ಸಲಹೆ ನೀಡಿದರು.
ಅಧಿಕಾರ ಅನುಭವಿಸಿ ಪಕ್ಷದಲ್ಲೇ ಗೌರವದಿಂದ ಇರಬಹುದಾಗಿತ್ತು. ಆದರೆ, ಕೆಲವರು ಕಾಂಗ್ರೆಸ್‌ ವಿರುದ್ಧವೇ ಮಾತನಾಡುತ್ತಿದ್ದಾರೆ. ಇದು ಸಲ್ಲದು. ಪಕ್ಷದ ಏಳಿಗೆಗೆ ಎಲ್ಲರೂ ವಂತಿಗೆ ನೀಡಬೇಕು. ತಂಡವಾಗಿ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆ ಮಾಡಬೇಕು ಎಂದು ತಿಳಿಸಿದರು.

ರೈಲ್ವೆ ನಿಲ್ದಾಣದ ಸಮೀಪ ಇರುವ ನಿವೇಶನದಲ್ಲಿ ಕಾಂಗ್ರೆಸ್‌ ಭವನದ ಸಭಾಂಗಣವನ್ನು ಶೀಘ್ರದಲ್ಲೇ ನಿರ್ಮಿಸಲಾಗುತ್ತಿದೆ ಎಂದರು. ಕೃಷ್ಣರಾಜ ಕ್ಷೇತ್ರದ ಮುಖಂಡ ಕೃಷ್ಣ ಅವರು ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ₹ 50,000 ಮೊತ್ತದ ಚೆಕ್‌ ನೀಡಿದರು.ನಿಕಟಪೂರ್ವ ಅಧ್ಯಕ್ಷ ಟಿ.ಎಸ್‌. ರವಿಶಂಕರ್‌, ಜವಾಬ್ದಾರಿಯಿಂದ ಮಾಡುವ ಕೆಲಸಗಳ ಶ್ರಮವನ್ನು ಪರಿಗಣಿಸದೆ ಇದ್ದರೂ ಅಂಥ ಕೆಲಸಗಳಲ್ಲಿ ಸಣ್ಣ ತಪ್ಪು ಆದರೂ ಅವುಗಳನ್ನೇ ದೊಡ್ಡದಾಗಿ ಬಿಂಬಸ ಲಾಗುತ್ತದೆ. ಇದು ಸಾಮಾನ್ಯ. ಅವು ಗಳನ್ನು ಮೀರಿ ಉತ್ತಮ ಕೆಲಸ ಮಾಡಬೇಕು ಎಂದರು.

ಮೈಸೂರು ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷನಾಗಿ ಅಧಿಕಾರ ನಡೆಸಿದ ಅವಧಿ ತೃಪ್ತಿಕರವಾಗಿತ್ತು ಎಂದು ಹೇಳಿದರು.ಹಿರಿಯ ಮುಖಂಡ ಶಿವಮಲ್ಲು ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಡಿ.ನಾಗಭೂಷಣ್‌ ಅವರ ವಾರ್ಡ್‌ನ ಪೌರಕಾರ್ಮಿಕರಿಗೆ ಸೀರೆ ವಿತರಿಸ ಲಾಯಿತು.

ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್‌, ಮುಖಂಡರಾದ ಧರ್ಮಸೇನ, ಶಿವಣ್ಣ, ಮಂಜುಳಾ ಮಾನಸ, ಮುಕ್ತರುನ್ನೀಸಾ ಬೇಗಂ, ಡಾ.ವಿಜಯಕುಮಾರ್‌, ಎ.ಸತ್ಯ ನಾರಾಯಣ, ಎ.ಸಿದ್ದರಾಜು, ಎಚ್‌.ಎ. ವೆಂಕಟೇಶ್‌, ಸಿದ್ದರಾಜು, ಶೌಕತ್‌ ಅಲಿ, ಡಿ.ನಾಗಭೂಷಣ್‌, ನಂದಿನಿ ಚಂದ್ರಶೇಖರ್‌, ನಾಗೇಶ್‌, ಸತ್ಯಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT