ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2500 ತೆರೆಗಳಲ್ಲಿ ‘ಹಾಫ್ ಗರ್ಲ್‌ ಫ್ರೆಂಡ್‌’

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಶ್ರದ್ಧಾ ಕಪೂರ್‌ ಹಾಗೂ ಅರ್ಜುನ್‌ ಕಪೂರ್‌ ಅಭಿನಯದ ‘ಹಾಫ್‌ ಗರ್ಲ್‌ ಫ್ರೆಂಡ್‌’ ಚಿತ್ರ ಭಾರತದಾದ್ಯಂತ 2500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. 
 
ಮೇ 19ರಂದು ಚಿತ್ರ ಬಿಡುಗಡೆಗೊಳ್ಳಲಿದೆ. ಚೇತನ್‌ ಭಗತ್‌ ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ಮೋಹಿತ್‌ ಸೂರಿ ನಿರ್ದೇಶಿಸಿದ್ದಾರೆ. ಈ ಮೊದಲು 1600 ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ ಎನ್ನಲಾಗುತ್ತಿತ್ತು. ಆದರೆ ಈ ಸಂಖ್ಯೆ ಸದ್ಯ 2500ಕ್ಕೆ ಏರಿದ್ದು, ಚಿತ್ರತಂಡ ಖುಷಿಯ ಪುಳಕದಲ್ಲಿದೆ.
 
‘ಬಾಲಾಜಿ ಮೋನ್‌ ಪಿಕ್ಚರ್ಸ್‌ನ ಸಹಯೋಗದೊಂದಿಗೆ ಹಾಫ್ ಗರ್ಲ್‌ಫ್ರೆಂಡ್‌ ಚಿತ್ರ ಮಾಡುತ್ತಿರುವುದಕ್ಕೆ ತುಂಬಾ ಖುಷಿ ಎನಿಸುತ್ತಿದೆ. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಲು 2500ಕ್ಕೂ ಹೆಚ್ಚು ಪರದೆಗಳಲ್ಲಿ ಕಾಣಿಸಿಕೊಳ್ಳಲಿದ್ದೇವೆ’ ಎಂದು ಹೇಳಿಕೊಂಡಿದೆ ಚಿತ್ರ ತಂಡ. 
 
ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯಾಗಿ ಕಾಣಿಸಿಕೊಂಡಿರುವ ಶ್ರದ್ಧಾಕಪೂರ್‌ ಹೇರ್‌ಸ್ಟೈಲ್ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿತ್ತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT