ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ರಾಕೆಟ್‌ ಉಡಾವಣೆ

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ವಾರ್ಷಿಕ ರಾಕೆಟ್ ಉಡಾವಣಾ ಯೋಜನೆಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲು ಸಿದ್ಧತೆ ನಡೆಸಿದೆ.

‘ಆರಂಭದಲ್ಲಿ ಸಂಸ್ಥೆ ವರ್ಷವೊಂದರಲ್ಲಿ ಎರಡು ಅಥವಾ ಮೂರು ರಾಕೆಟ್‌ಗಳನ್ನು ಕಳುಹಿಸುತ್ತಿತ್ತು. ನಂತರ ಈ ಸಂಖ್ಯೆ 4–5ಕ್ಕೆ ಏರಿತು. ಕಳೆದ ಕೆಲವು ವರ್ಷಗಳಿಂದ, ಪ್ರತಿ ವರ್ಷ ಏಳು ಉಡಾವಣೆಗಳನ್ನು ನಡೆಸಿದ್ದೇವೆ. ಈಗ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದ್ದೇವೆ’ ಎಂದು ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ.

‘ಈಗ ಪ್ರತಿ ವರ್ಷ 8–9 ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು, ಎರಡು ಜಿಎಸ್‌ಎಲ್‌ವಿ–ಎಂಕೆ 2 ರಾಕೆಟ್‌ಗಳನ್ನು ಮತ್ತು ಜಿಎಸ್‌ಎಲ್‌ವಿ–ಎಂಕೆ 3 ರಾಕೆಟ್ ಅನ್ನು ಉಡಾವಣೆ ಮಾಡಲು ಯೋಜನೆ ರೂಪಿಸುತ್ತಿ ದ್ದೇವೆ’ ಎಂದುಅವರು ವಿವರಿಸಿದ್ದಾರೆ.

‘ಹೆಚ್ಚು ಉಪಗ್ರಹಗಳನ್ನು ತಯಾರಿಸಲಾಗುತ್ತದೆ. ಇದರಿಂದ ಹೆಚ್ಚು ಉಡಾವಣೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ರಾಕೆಟ್‌ ನಿರ್ಮಾಣದ ಮತ್ತೊಂದು ಘಟಕದ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜತೆಗೆ ಮರುಬಳಕೆ ರಾಕೆಟ್‌ಗಳ ಬಳಕೆಯನ್ನು ಹೆಚ್ಚಿಸಲಾಗುತ್ತದೆ. ಇದರಿಂದ ಯೋಜನೆಗಳ ವೆಚ್ಚ ಕಡಿಮೆಯಾಗಲಿದೆ. ಅಲ್ಲದೆ ಸಂಸ್ಥೆಯ ಸಾಮರ್ಥ್ಯವೂ ಹೆಚ್ಚಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT