ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀತನಿ ವಿಶ್ವ ದಾಖಲೆ

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಕೆನ್ಯಾದ ದೂರ ಅಂತರದ ಓಟಗಾರ್ತಿ ಮೇರಿ ಜೆಪ್‌ಕೊಸ್‌ಗೀ ಕೀತನಿ ಅವರು ಭಾನುವಾರ ವಿಶ್ವ ದಾಖಲೆ ಬರೆದಿದ್ದಾರೆ.

ಇಲ್ಲಿ ನಡೆದ ಲಂಡನ್‌ ಮ್ಯಾರಥಾನ್‌ನಲ್ಲಿ ಅವರು 2 ಗಂಟೆ 17 ನಿಮಿಷ 01 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ 12 ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದರು.

ಈ ಮೊದಲು ಬ್ರಿಟನ್‌ನ ಪಾಲ್‌ ರ‍್ಯಾಡ್‌ಕ್ಲಿಫ್‌ ಹೆಸರಿನಲ್ಲಿ ವಿಶ್ವ ದಾಖಲೆ ಇತ್ತು. ಅವರು 2005ರಲ್ಲಿ 2 ಗಂಟೆ 17 ನಿಮಿಷ 42  ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

ಮಹಿಳೆಯರ ಎಲೈಟ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಕೀತನಿ ಮೊದಲ 5 ಕಿ. ಮೀ. ದೂರ ಕ್ರಮಿಸಲು 15 ನಿಮಿಷ 31 ಸೆಕೆಂಡು ತೆಗೆದುಕೊಂಡರು. 2009ರಲ್ಲಿ ಹಾಫ್‌ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಅವರು ಆ ನಂತರವೂ ಚುರುಕಾಗಿ ಓಡಿ ಮೊದಲಿಗರಾದರು.

ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಗೆದ್ದಿರುವ ಇಥಿಯೋಪಿಯಾದ ತಿರುನೆಶಾ ದಿಬಾಬ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಅವರು 2 ಗಂಟೆ 17 ನಿಮಿಷ 56 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು. ಇಥಿಯೋಪಿಯಾದವರೇ ಆದ ಅಸೆಲೆಫೆಕ್‌ ಮರ್ಜಿಯಾ (2:23:08) ಮೂರನೇಯವರಾಗಿ ಗುರಿ ಮುಟ್ಟಿದರು.

ಪುರುಷರ ವಿಭಾಗದಲ್ಲಿ ಕೆನ್ಯಾದ ಡೇನಿಯಲ್‌ ವಂಜಿರು ಪ್ರಶಸ್ತಿ ಎತ್ತಿ ಹಿಡಿದರು. ಅವರು 2ಗಂಟೆ 05 ನಿಮಿಷ 48 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇಥಿಯೋಪಿಯಾದ ಕೆನೆನಿಸಾ ಬೆಕೆಲೆ (2:05:57) ಮತ್ತು ಕೆನ್ಯಾದ ಬೆಡಾನ್‌ ಕರೋಕಿ (2:07:41) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT