ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಷ್ಠ ತಂಡಗಳ ಕುತೂಹಲದ ಪೈಪೋಟಿ

Last Updated 23 ಏಪ್ರಿಲ್ 2017, 20:36 IST
ಅಕ್ಷರ ಗಾತ್ರ

ಮುಂಬೈ: ಸತತ ಆರು ಪಂದ್ಯಗಳಲ್ಲಿ ಗೆಲುವು ಪಡೆದು ವಿಶ್ವಾಸದಲ್ಲಿರುವ ಮುಂಬೈ ಇಂಡಿಯನ್ಸ್‌ ತಂಡ ಒಂದೆಡೆ. ಹಿಂದಿನ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಗೆಲುವು ಪಡೆದಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್‌ ಇನ್ನೊಂದೆಡೆ.

ಇವೆರೆಡೂ ಬಲಿಷ್ಠ ತಂಡಗಳಲ್ಲಿ ಅನುಭವಿ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್‌ ಹತ್ತನೇ ಆವೃತ್ತಿಯ ಪಂದ್ಯದಲ್ಲಿ ಇವುಗಳಲ್ಲಿ ಗೆಲುವು ಪಡೆಯುವ ತಂಡ ಯಾವುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಏಕೆಂದರೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ ಆಡಿದ ಏಳು ಪಂದ್ಯಗಳ ಪೈಕಿ ಸೋತಿದ್ದು ಒಂದ ರಲ್ಲಿ ಮಾತ್ರ.  ಟೂರ್ನಿಯ ಆರಂಭದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೋತಿತ್ತು. ನಂತರದ ಪಂದ್ಯಗಳಲ್ಲಿ ಕ್ರಮವಾಗಿ ಕೋಲ್ಕತ್ತ ನೈಟ್ ರೈಡರ್ಸ್‌, ಸನ್‌ರೈಸರ್ಸ್‌, ಆರ್‌ಸಿಬಿ, ಗುಜರಾತ್‌ ಲಯನ್ಸ್‌, ಕಿಂಗ್ಸ್ ಇಲೆವನ್ ಪಂಜಾಬ್‌ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳನ್ನು ಮಣಿಸಿತ್ತು.

ಇದೇ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ 142 ರನ್‌ಗಳ ಸಾಧಾರಣ ಮೊತ್ತ ಗಳಿಸಿಯೂ ಗೆಲುವು ಪಡೆದಿತ್ತು.
ಕೆಲ ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಇನ್ನು ಕೆಲ ಪಂದ್ಯಗಳಲ್ಲಿ ಬೌಲಿಂಗ್ ಮೂಲಕ ಮಿಂಚುತ್ತಿರುವ ಮುಂಬೈ ತಂಡದಲ್ಲಿ ಪಾರ್ಥಿವ್ ಪಟೇಲ್‌, ಜಾಸ್‌ ಬಟ್ಲರ್‌, ನಿತೇಶ್ ರಾಣಾ, ರೋಹಿತ್‌, ಕೀರನ್‌ ಪೊಲಾರ್ಡ್‌ ಅವರಂಥ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳು ಇದ್ದಾರೆ.

ವಿಶ್ವಾಸದಲ್ಲಿ ರೈಸಿಂಗ್: ಹಿಂದಿನ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಬೌಂಡರಿ ಹೊಡೆದು ಗೆಲುವು ಪಡೆದಿರುವ ರೈಸಿಂಗ್ ಸೂಪರ್‌ಜೈಂಟ್ ತಂಡ ಕೂಡ ವಿಶ್ವಾಸದಲ್ಲಿದೆ.

ಮೂರು ಬಾರಿ ಮುಖಾಮುಖಿ
ಎರಡು ವರ್ಷಗಳ ಅವಧಿಯಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಹೋದ ವರ್ಷ ಮುಂಬೈ ಮತ್ತು ಪುಣೆ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆಲುವು ಪಡೆದಿದ್ದವು. ಹತ್ತನೇ ಆವೃತ್ತಿಯಲ್ಲಿ ಪುಣೆಯಲ್ಲಿ ನಡೆದಿದ್ದ ಮೊದಲ ಹಣಾಹಣಿಯಲ್ಲಿ ರೈಸಿಂಗ್ ಪುಣೆ ಏಳು ವಿಕೆಟ್‌ಗಳ ಗೆಲುವು ಪಡೆದಿತ್ತು. ಹಿಂದಿನ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಬಳಗ ಈಗ ಕಾಯುತ್ತಿದೆ.

ಪಂದ್ಯ ಆರಂಭ: ರಾತ್ರಿ 8ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT