ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಗಾಳಿಗೆ ನಾಲ್ಕು ವರ್ಷಗಳಲ್ಲಿ 4,620 ಬಲಿ

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕಳೆದ ಹತ್ತು ವರ್ಷಗಳಲ್ಲಿ ಬಿಸಿಗಾಳಿ ಪ್ರಮಾಣ ಮತ್ತು ಬಿಸಿಗಾಳಿ ಪ್ರದೇಶದ ವ್ಯಾಪ್ತಿ ಹಿಗ್ಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಸಿಗಾಳಿಗೆ ದೇಶದಾದ್ಯಂತ 4,620 ಮಂದಿ ಬಲಿಯಾಗಿದ್ದಾರೆ. ಈ  ಅವಧಿಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಸತ್ತವರ ಸಂಖ್ಯೆ  ಉಳಿದೆಲ್ಲೆಡೆಗಿಂತ ತೀರಾ ಹೆಚ್ಚಿದ್ದು, ಎರಡೂ ರಾಜ್ಯಗಳಲ್ಲಿ ಒಟ್ಟು 4,246 ಜನ ಬಲಿಯಾಗಿದ್ದಾರೆ.

ಯಾವ ವರ್ಷದಲ್ಲಿ ಎಷ್ಟು ಬಲಿ?

2013- 1,443

2014- 549

2015- 2,081

2016- 1,600

ಪರೋಕ್ಷ ಪರಿಣಾಮಗಳಿಗೇ ಹೆಚ್ಚು ಬಲಿ

‘ಬಿಸಿಗಾಳಿಗೆ ನೇರವಾಗಿ ಬಲಿಯಾದವರ ಮಾಹಿತಿಯಷ್ಟೇ ಲಭ್ಯವಿದ್ದು, ಪರೋಕ್ಷ ಪರಿಣಾಮಗಳಿಗೆ ಬಲಿಯಾದವರ ಮಾಹಿತಿ ಲಭ್ಯವಿಲ್ಲ. ಹೀಗೆ ಬಲಿಯಾದವರ ಸಂಖ್ಯೆ, ನೇರವಾಗಿ ಸತ್ತವರಿಗಿಂತ ಹೆಚ್ಚಿರಬಹದು’ ಎನ್ನುತ್ತಾರೆ ಗುಜರಾತ್‌ನ ಗಾಂಧಿನಗರದಲ್ಲಿರುವ ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ನಿರ್ದೇಶಕ ದಿಲೀಪ್ ಮಾವ್ಲಂಕರ್.

‘2010ರಲ್ಲಿ ಅಹಮದಾಬಾದ್‌ನಲ್ಲಿ ಬಿಸಿಗಾಳಿಗೆ 65 ಜನ ಬಲಿಯಾಗಿದ್ದರು. ಆದರೆ, ಇದೇ ಅವಧಿಯಲ್ಲಿ ಅಲ್ಲಿ ಇನ್ನೂ 800ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು’ ಎಂದು ಅವರು ಮಾಹಿತಿ ನೀಡಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶದಲ್ಲೇ ಹೆಚ್ಚು ಬಿಸಿಯೇಕೆ

1. ರಾಜಸ್ತಾನ ಮತ್ತು ಗುಜರಾತ್‌ಗಳಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಇದರಿಂದ ಭೂಮಿಯ ಮೇಲ್ಮೈನಲ್ಲಿ ನಿರ್ವಾತ ಉಂಟಾಗುತ್ತದೆ. ವಾತಾವರಣದಲ್ಲಿನ ತಣ್ಣನೆಯ ಗಾಳಿ, ಈ ನಿರ್ವಾತದ ಪ್ರದೇಶಕ್ಕೆ ಕುಸಿಯುತ್ತದೆ
2. ಭೂಮಿಯ ಮೇಲ್ಮೈನ ಉಷ್ಣಾಂಶದಿಂದ, ಈ ತಣ್ಣನೆಯ ಗಾಳಿಯೂ ಬಿಸಿಯಾಗುತ್ತದೆ
3. ನಂತರ ಈ ಬಿಸಿಗಾಳಿ ಮಧ್ಯಪ್ರದೇಶ, ಮಹಾರಾಷ್ಟ್ರಗಳ ಕೆಲವು ಪ್ರದೇಶಗಳ ಮೂಲಕ ತೆಲಂಗಾಣ ಮತ್ತು ಆಂಧ್ರಪ್ರದೇಶ ತಲುಪುತ್ತದೆ
4. ರಾಜಸ್ತಾನ, ಗುಜರಾತ್‌ನಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶ ತಲುಪುವ ಹಾದಿಯಲ್ಲಿ ಗಾಳಿಯ ಘರ್ಷಣೆಯಿಂದ, ಉಷ್ಣಾಂಶ ಮತ್ತಷ್ಟು ಹೆಚ್ಚಾಗುತ್ತದೆ

* 4,246 ಜನ
ನಾಲ್ಕು ವರ್ಷಗಳಲ್ಲಿ ಎರಡೂ ರಾಜ್ಯಗಳಲ್ಲಿ ಬಿಸಿಗಾಳಿಗೆ ಬಲಿಯಾದವರು

* 1,393 ಜನ
2013ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಬಿಸಿಗಾಳಿಗೆ ಬಲಿಯಾದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT