ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಲಯಕ್ಕೆ ಕಿಂಗ್ಸ್‌

ಲಯನ್ಸ್ ವಿರುದ್ಧ ‘ಪ್ರೀತಿ’ಯ ತಂಡಕ್ಕೆ 26 ರನ್‌ ಗೆಲುವು
Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡ ಐಪಿಎಲ್‌ ಹತ್ತನೇ ಆವೃತ್ತಿಯಲ್ಲಿ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ನಾಯಕ ತ್ವದ ಪಂಜಾಬ್ ತಂಡ ಮೊದಲು ಬ್ಯಾಟ್‌ ಮಾಡಿ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 188 ರನ್ ಗಳಿಸಿತ್ತು. ಗುಜರಾತ್‌ ಲಯನ್ಸ್ ನಿಗದಿತ ಓವರ್‌ ಗಳು ಮುಗಿದಾಗ 162 ರನ್ ಮಾತ್ರ ಕಲೆ ಹಾಕಿತು.

ಪಂಜಾಬ್ ತಂಡ ಟೂರ್ನಿಯ ಆರಂಭದಲ್ಲಿ ಪುಣೆ ರೈಸಿಂಗ್‌ ಮತ್ತು ಆರ್‌ಸಿಬಿ ಎದುರು  ಗೆಲುವು ಪಡೆದಿತ್ತು. ನಂತರದ ಪಂದ್ಯಗಳಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌,ಡೇರ್‌ಡೆವಿಲ್ಸ್‌, ಸನ್‌ ರೈಸರ್ಸ್‌, ಮುಂಬೈ ಇಂಡಿಯನ್ಸ್‌ ಎದುರು ಸೋಲು  ಕಂಡಿತ್ತು. ಆದ್ದರಿಂದ ಪ್ಲೇ ಆಫ್‌ ಪ್ರವೇ ಶದ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ತಂಡಕ್ಕೆ ಗೆಲುವು ಅಗತ್ಯವಾಗಿತ್ತು.

ಮುಂದುವರಿದ ಆಮ್ಲಾ ಅಬ್ಬರ: ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯ ದಲ್ಲಿ ಶತಕ ಬಾರಿಸಿದ್ದ  ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಹಾಶಿಮ್‌ ಆಮ್ಲಾ ಅವರ ಅಬ್ಬರ ಇಲ್ಲಿಯೂ ಮುಂದುವರಿಯಿತು.

40 ಎಸೆತಗಳನ್ನು ಎದುರಿಸಿದ ಆಮ್ಲಾ ಒಂಬತ್ತು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದಂತೆ 65 ರನ್ ಗಳಿಸಿದರು. ಶಾನ್ ಮಾರ್ಷ್‌ 30 ರನ್‌ ಕಲೆ ಹಾಕಿದರು. ಇವರ ನಡುವಣ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 70 ರನ್‌ಗಳು ಬಂದವು. ಮೂರನೇ ವಿಕೆಟ್‌ಗೆ ಆಮ್ಲಾ ಮತ್ತು ಮ್ಯಾಕ್ಸ್‌ವೆಲ್‌ 47 ರನ್ ಸೇರಿಸಿದರು. ಇದರಿಂದ ಪಂಜಾಬ್ ತಂಡಕ್ಕೆ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

ಪಂಜಾಬ್ ತಂಡ ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಿದ್ದಾಗ 88 ರನ್ ಗಳಿಸಿತ್ತು. ಕೊನೆಯ 60 ಎಸೆತಗ ಳಲ್ಲಿ  ನೂರು ರನ್‌ಗಳನ್ನು ಕಲೆ ಹಾಕಿದ್ದು ತಂಡದ ಅಬ್ಬರದ ಬ್ಯಾಟಿಂಗ್‌ಗೆ ಸಾಕ್ಷಿ.

ಕೊನೆಯ ಎರಡು ಓವರ್‌ಗಳ ಲ್ಲಂತೂ ಲಯನ್ಸ್ ಬೌಲರ್‌ಗಳು ಬಸವ ಳಿದು ಹೋದರು. ಡ್ವೇನ್‌ ಸ್ಮಿತ್‌  ಮಾಡಿದ 19ನೇ ಓವರ್‌ನಲ್ಲಿ 18 ರನ್‌ ಗಳು ಬಂದವು. ಅಕ್ಷರ್‌ ಪಟೇಲ್‌ ಮೊದಲ ಮೂರು ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ ದರು. ಒಟ್ಟು 17 ಎಸೆತಗಳನ್ನು ಎದುರಿ ಸಿದ ಅಕ್ಷರ್‌ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ 34 ರನ್ ಗಳಿಸಿ ಕೊನೆಯಲ್ಲಿ ತಂಡದ ಮೊತ್ತ ಹೆಚ್ಚಿಸಿದರು.

ಚುರುಕಿನ ಬೌಲಿಂಗ್: ಹಿಂದಿನ ಪಂದ್ಯ ದಲ್ಲಿ ನೈಟ್‌ ರೈಡರ್ಸ್‌ ಎದುರು ಗೆಲುವು ಪಡೆದಿದ್ದ ಸುರೇಶ್ ರೈನಾ ನಾಯಕತ್ವದ ಲಯನ್ಸ್ ತಂಡ ಇಲ್ಲಿ ಗುರಿ ಮುಟ್ಟುವಲ್ಲಿ ವಿಫಲವಾಯಿತು.

ಸ್ಪೋಟಕ ಆಟಕ್ಕೆ ಹೆಸರಾಗಿರುವ ಬ್ರೆಂಡನ್‌ ಮೆಕ್ಲಮ್‌ (6), ಆ್ಯರನ್‌ ಫಿಂಚ್‌ (13), ರವೀಂದ್ರ ಜಡೇಜ (9) ಬೇಗನೆ ವಿಕೆಟ್‌ ಒಪ್ಪಿಸಿದರು. ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ ರೈನಾ (32, 24 ಎಸೆತ, 4 ಬೌಂಡರಿ), ದಿನೇಶ್ ಕಾರ್ತಿಕ್‌  (ಔಟಾಗದೆ 58, 44 ಎಸೆತ, 6 ಬೌಂಡರಿ) ತಂಡಕ್ಕೆ ಗೆಲುವು ತಂದುಕೊ ಡಲು ಮಾಡಿದ ಹೋರಾಟ ಸಾಕಾಗಲಿಲ್ಲ.

ಲಯನ್ಸ್ ತಂಡ ಕೊನೆಯ ಹತ್ತು ಓವರ್‌ಗಳಲ್ಲಿ 107 ರನ್ ಗಳಿಸಬೇಕಿತ್ತು.  ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ವೈಫಲ್ಯ ಕಂಡ ಕಾರಣ ಗೆಲುವಿನ ಅವಕಾಶ ದೂರವಾಗುತ್ತಲೇ ಹೋಯಿತು. ಪಂಜಾಬ್ ತಂಡದ ಚುರು ಕಿನ ಬೌಲಿಂಗ್ ಇದಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT