ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಭಿವೃದ್ಧಿಗೆ ಮುಂದಾಗಿ

Last Updated 24 ಏಪ್ರಿಲ್ 2017, 5:23 IST
ಅಕ್ಷರ ಗಾತ್ರ

ಗದಗ: ‘ದೇಶದ ಅಭಿವೃದ್ಧಿಯಲ್ಲಿ ಯುವ ಕರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ’ ಎಂದು ಮದ್ರಾಸ್‌ ಐಐಟಿ ಪ್ರಾಧ್ಯಾಪಕ ಡಾ.ಜಿ.ಆರ್.ದೊಡ್ಡಗೌಡರ ಹೇಳಿದರು.ನಗರದ ತೋಂಟದಾರ್ಯ ಎಂಜಿನಿ ಯರಿಂಗ್‌ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ‘ಕ್ಷಿತಿಜ್–2017’ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಸಾಧಿಸುವ ಮನೋ ಭಾವ ಹೊಂದಬೇಕು. ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಮಾತ್ರ ನಿಗದಿತ ಗುರಿಮುಟ್ಟಲು ಸಾಧ್ಯವಾಗುತ್ತದೆ. ತಾವು ಬೆಳೆದ ಪರಿಸರವನ್ನು ಎಂದಿಗೂ ಮರೆ ಯದೇ, ಸಮಾಜದ ಋಣ ತೀರಿಸಬೇಕು. ಸಮಯದ ಮಹತ್ವ ಅರಿತುಕೊಳ್ಳಬೇಕು. ಮೊಬೈಲ್‌ನಲ್ಲೇ  ಹೆಚ್ಚು ಕಾಲಹರಣ ಮಾಡ ಬಾರದು. ದುಶ್ಚಟಗಳಿಗೆ ಬಲಿಯಾಗದೇ, ಸತತ ಅಧ್ಯಯನದಲ್ಲಿ ತೊಡಗಿಸಿಕೊಳ್ಳ ಬೇಕು’ ಎಂದು ಸಲಹೆ ನೀಡಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಡಗಿ ರುವ ಪ್ರತಿಭೆಯನ್ನು ಅನಾವರಣಗೊಳಿ ಸಲು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕೆ.ಅನಂತಗೌಡ ತಿಳಿಸಿದರು.‘ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ಪಾಲಕರ ಆಶೋತ್ತರಗಳನ್ನು ಪೂರೈಸಿ, ದೇಶಕ್ಕೆ ಕೀರ್ತಿ ತರಬೇಕು’ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಎಂ.ಎಂ.ಅವಟಿ ಮಹಾವಿದ್ಯಾಲಯದ ವರದಿ ಓದಿದರು.2016–17ನೇ ಶೈಕ್ಷಣಿಕ ವರ್ಷದ ಅತ್ಯುತ್ತಮ ವಿದ್ಯಾರ್ಥಿಯಾಗಿ 8ನೇ ಸೆಮಿಸ್ಟರ್ ಎಲೆಕ್ಟ್ರಿಕಲ್ ವಿಭಾಗದ ಕಿರಣ ಜವಳಿ ಹಾಗೂ ಅತ್ಯುತ್ತಮ ವಿದ್ಯಾರ್ಥಿ ನಿಯಾಗಿ 8ನೇ ಸೆಮಿಸ್ಟರ್ ಎಲೆಕ್ಟ್ರಾನಿಕ್ ಆ್ಯಂಡ್‌ ಕಮ್ಯುನಿಕೇಷನ್‌ ವಿಭಾಗದ ರುಚಿಕಾ ಜೈನ್ ಆಯ್ಕೆಯಾದರು.
ಪ್ರೊ.ಎಸ್.ಎಸ್.ಪಟ್ಟಣಶೆಟ್ಟಿ, ಪ್ರೊ.ವಿಜಯಕುಮಾರ ಮಾಲಗಿತ್ತಿ, ಅರುಣ ಶಿವಸಿಂಪಿ, ರಮೇಶ ಬಡಿಗೇರ, ಶಿವಯೋಗಿ ಪಾಟೀಲ, ಚಂಬಮ್ಮ ಕೊಟಿ, ಪುಟ್ಟರಾಜ ಶಿರೋಳಮಠ, ಸುಜಾತಾ ಭಾವಿಕಟ್ಟಿ, ಪ್ರೊ.ಎಸ್.ಟಿ.ಪಾಟೀಲ, ಡಾ.ಶೈಲಜಾ ಬಾತಾಕಣಿ,  ವಿದ್ಯಾರ್ಥಿ ಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT