ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿ ನೀರಿಗಾಗಿ ಒಂದಾಗಿ

Last Updated 24 ಏಪ್ರಿಲ್ 2017, 5:24 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿ ಯೋಜನೆ ಹಿರಿಯರು ಕಂಡ ಕನಸು, ಜೊತೆಗೆ ಅಗ ತ್ಯವೂ ಹೌದು. ಅದು ಸಾಕಾರಗೊಳ್ಳಲು ಈ ಹೋರಾಟ ನಡೆಯುತ್ತಿದೆ. ಜನಪ್ರತಿ ನಿಧಿಗಳು ಮನಸ್ಸು ಮಾಡಿದರೆ ಒಂದು ತಿಂಗಳೂ ಇದಕ್ಕೆ ಬೇಕಾಗಿಲ್ಲ.  ಇದಕ್ಕಾಗಿ ಪಕ್ಷ ಭೇದ ಮರೆತು  ನೀರು ತರಬೇಕಿದೆ. ಆದ್ದರಿಂದ ಉತ್ತರ ಕರ್ನಾಟಕದ ಶಾಸ ಕರು, ಸಂಸದರು, ಉಳಿದ ಸಂಘಟನೆಗಳ ಸದಸ್ಯರು ಮಹಾದಾಯಿ ನೀರಿಗಾಗಿ  ಒಂದಾಗಿ  ರೈತರ ಕನಸನ್ನು ನನಸು ಮಾಡುವಂತೆ ವಿಜಯಪುರ ಜಿಲ್ಲೆ ಇಂಚ ಟಗೇರಿ ಮಠದ ಸೇವಕ ಮಹದೇವಪ್ಪ ತಲ್ಲೂರು ಸಲಹೆ ಮಾಡಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 647ನೇ ದಿನ ಶನಿವಾರ  ಮಾತನಾಡಿದರು.ನಿರಂತರ ಎರಡು ವರ್ಷದ ಹೋರಾ ಟವನ್ನು ಕಂಡ ಇಂಚಟಗೇರಿ ಮಠದ ಶ್ರೀಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಗಳ ಧೋರಣೆಗೆ ಅಸಮಾ ಧಾನ ಹೊಂದಿದ್ದಾರೆ. ಅವರು ಹೋರಾ ಟಕ್ಕೆ  ಬೆಂಬಲ ಸೂಚಿಸಿದ್ದು, ಶೀಘ್ರ ಧರಣಿಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ರೈತರು ಎದೆಗುಂದದೆ ಬದುಕಿನ  ಹೋರಾಟ ವನ್ನು ಮುಂದುವರೆಸಿಕೊಂಡು ಹೋಗ ಬೇಕಿದೆ. ಸವೆಸಿದ ದಾರಿ ಬಹಳವಾಗಿದೆ. ಇನ್ನು ಸವೆಸಿ ನೀರು ತರಲು ಮುಂದಾಗ ಬೇಕು. ಎಲ್ಲ ರೈತರು ಒಗ್ಗಟ್ಟಿನಿಂದ ಭಾಗ ವಹಿಸುವಂತೆ ಮನವಿ ಮಾಡಿದರು.

ವೀರಣ್ಣ ಸೊಪ್ಪಿನ ಮಾತನಾಡಿ, ಪ್ರಧಾನಿಗಳು ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಬೇಕು. ಮುಖ್ಯ ಕಾರಣವಾಗಿರುವ ಗೋವಾದ ಸಿಎಂಗೆ ಮನವರಿಕೆ ಮಾಡಿ ಕೊಟ್ಟು ನಮ್ಮ ಪಾಲಿನ ನೀರನ್ನು ನಮಗೆ ಕೊಡಿಸುವಂತೆ ಒತ್ತಾಯಿಸಿದರು.ಧರಣಿಯಲ್ಲಿ  ಚಂದ್ರಗೌಡ ಪಾಟೀಲ, ಕೆ.ಎಚ್‌.ಮೊರಬದ, ಎಸ್‌.ಕೆ.ಗಿರಿಯಣ್ಣ ವರ, ಹನಮಂತ ಪಡೆಸೂರ, ಯಲ್ಲಪ್ಪ ಗುಡದೇರಿ, ಗಂಗಮ್ಮ ಹಡಪದ,   ಎಲ್‌.ಬಿ.ಮುನೇನಕೊಪ್ಪ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್‌.ಬಿ.ಜೋಗಣ್ಣವರ, ಶ್ರೀಶೈಲ ಮೇಟಿ, ವಾಸು ಚವ್ಹಾಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT