ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲುವರಾಯಸ್ವಾಮಿ ವಿರುದ್ಧ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ

Last Updated 24 ಏಪ್ರಿಲ್ 2017, 5:43 IST
ಅಕ್ಷರ ಗಾತ್ರ

ನಾಗಮಂಗಲ: ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಗಳಿಗೆ ತೆರಳಿ ಸ್ವಾಂತನ ಹೇಳಿದ್ದೇನೆ. ಆಗ ಸ್ವಂತ ಮಕ್ಕಳು ಎಂದು ಹೇಳಿಕೊಳ್ಳು ತ್ತಿರುವ ಶಾಸಕ ಎನ್‌. ಚಲುವರಾಯ ಸ್ವಾಮಿ ಎಲ್ಲಿದ್ದರು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ತಾಲ್ಲೂಕಿನ ಬೆಳ್ಳೂರಿನಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅಭಿಮಾನಿ ಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ‘ಕರುನಾಡಿನ ಏಳ್ಗೆಗೆ ಕುಮಾರಣ್ಣ ನಡಿಗೆ’ ಹೆಸರಿನಲ್ಲಿ ಏರ್ಪಡಿಸಿದ್ದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಜನ ನನಗೆ ಹಾಗೂ ನನ್ನ ತಂದೆಗೆ ಹಾಲು ಕುಡಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಶಕ್ತಿ ತುಂಬಿ ದ್ದಾರೆ, ನಮ್ಮನ್ನು ಸ್ವಂತ ಮಕ್ಕಳ ಹಾಗೆ ಕಂಡಿದ್ದಾರೆ. ನಾನೂ ಇಲ್ಲಿಯ ಮಗನೆಂದುಕೊಂಡೇ ಸ್ಪಂದಿಸಿದ್ದೇನೆ ಎಂದರು.

‘ಹಳೆಯ ಸ್ನೇಹಿತರು ದ್ರೋಹ ಮಾಡಿದ್ದೇನೆ ಎಂದು ಆರೋಪಿಸುತ್ತಿ ದ್ದಾರೆ. ದ್ರೋಹ ಮಾಡಿದ್ದರೆ ಅವರು ಸಚಿವರಾಗುತ್ತಿರಲಿಲ್ಲ. ವಿಜಯಲಕ್ಷ್ಮೀ ಬಂಡಿಸಿದ್ದೇಗೌಡರನ್ನು ಸಚಿವರನ್ನು ಮಾಡಬೇಕೆಂದಿತ್ತು. ನಾನು ಅವರನ್ನು ಬಿಟ್ಟು ಚಲುವರಾಯಸ್ವಾಮಿ ಅವರನ್ನು ಸಚಿವರನ್ನಾಗಿದಿದ್ದಕ್ಕೆ ಪ್ರಾಯಶ್ಚಿತ್ತ ಪಡುತ್ತಿದ್ದೇನೆ ಎಂದು ಹೇಳಿದರು.

‘ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಮಕೃಷ್ಣ ಅವರಿಗೆ ಟಿಕೆಟ್‌ ಕೊಡುವಂತೆ ಒತ್ತಾಯಿಸುತ್ತಿದ್ದ ಅವರಿಗೆ ಆಗ ಪ್ರಭಾವತಿ ಜಯರಾಂ ಅವರು ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ ಅವರು, 2013ರ ಚುನಾವಣೆ ಯಲ್ಲಿ ಅವರನ್ನು ಸೋಲಿಸಲು ನಾನು ಪ್ರಯತ್ನ ಪಟ್ಟಿದ್ದರೆ ಕಾಲಭೈರವನ ಸನ್ನಿಧಿಯಲ್ಲಿರುವ ನನ್ನ ರಾಜಕೀಯ ಜೀವನ ಸರ್ವನಾಶವಾಗಲಿ’ ಎಂದರು.

ಹಿರಿಯ ನಾಯಕ ಮಿರಾಜುದ್ದೀನ್‌ ಪಟೇಲ್‌ರನ್ನು ಕೈಬಿಟ್ಟು ಜಮೀರ್‌ ಅಹಮ್ಮದ್‌ ಅವರು ಮಂತ್ರಿ ಮಾಡಿದ್ದಕ್ಕೆ ನನಗೆ ಮುಸ್ಲಿಂ ವಿರೋಧಿ ಪಟ್ಟ ಸಿಕ್ಕಿತು. ಮುಖ್ಯಮಂತ್ರಿ ಆಗ ಮೂರೇ ತಿಂಗಳಲ್ಲಿ ಯಡಿಯೂರಪ್ಪ ಅವರೊಂದಿಗೆ ಸೇರಿ ನನ್ನನ್ನು ಕೆಳಗಿಳಿಸಿ ಉಪಮುಖ್ಯಮಂತ್ರಿ ಆಗಲು ಹೊರಟಿದ್ದವರು ಯಾರು ಎಂದು ಜಗತ್ತಿಗೆ ಗೊತ್ತಿದೆ ಎಂದು ಟೀಕಿಸಿದರು.

‘ನನ್ನ ಕುರಿತ ನಗ್ನ ಸತ್ಯವನ್ನು ಹೇಳುತ್ತೇನೆ ಎಂದು ಹೇಳುತ್ತಿದ್ದಾರೆ. ನನ್ನದು ತೆರೆದ ಪುಸ್ತಕವಿದ್ದಂತೆ. ಏನೂ ಬೇಕಾದರೂ ಹೇಳಲಿ. ಇವರಿಗೆ ಹೆದರಿ ರಾಜಕಾರಣ ಮಾಡುವ ಹೇಡಿಯಲ್ಲ ಎಂದು ಸವಾಲು ಹಾಕಿದರು.

ಬಿಜೆಪಿ ಹಾಗೂ ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದರೆ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಜೆಡಿಎಸ್‌ ಸರ್ಕಾರ ಬಂದರೆ 24 ಗಂಟೆಯಲ್ಲಿಯೇ ಸಾಲ ಮನ್ನಾ ಮಾಡಲಿದೆ. ಸ್ವತಂತ್ರ ಸರ್ಕಾರ ರಚನೆಗೆ ಅಧಿಕಾರ ನೀಡಿ ಎಂದು ಕೋರಿದರು.

2018ರ ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷದ ಪರವಾದ ಮೊದಲ ಫಲಿತಾಂಶ ನಾಗಮಂಗಲ ದಿಂದಲೇ ಪ್ರಾರಂಭ ವಾಗಲಿ.  ನಾಯಕರಾದ ಎಲ್.ಆರ್.ಶಿವರಾಮೇಗೌಡ, ಕೆ. ಸುರೇಶ್‌ಗೌಡ ಒಗ್ಗಟ್ಟಾಗಿ ಕೆಲಸ ಮಾಡಿದರೆ ಗೆಲುವು ಸುಲಭವಾಗಲಿದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದರು.

ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಎಲ್.ಆರ್. ಶಿವರಾಮೇ ಗೌಡ, ಸುರೇಶ್‌ಗೌಡ, ಅನ್ನದಾನಿ, ಮುಖಂಡ ಬಿ.ಎಂ ಫಾರುಖ್  ಮಾತನಾ ಡಿದರು. ಲಕ್ಷ್ಮೀ ಅಶ್ವಿನ್‌ಗೌಡ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT