ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಕೊನೆಗೂ ಬಂತು ಬೈಪಾಸ್‌ ರಸ್ತೆ

Last Updated 24 ಏಪ್ರಿಲ್ 2017, 6:14 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಹೊರವಲಯದಲ್ಲಿ ಬೈಪಾಸ್‌ ರಸ್ತೆ ಕಾಮಗಾರಿ ಭರದಿಂದ ಸಾಗಿದೆ. ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣ ಮುಗಿಯಬಹುದು ಎಂಬುದು ಜನರ ನಿರೀಕ್ಷೆ.

ಜಿಲ್ಲಾಧಿಕಾರಿ ಕಚೇರಿಯಿಂದ ಹೊರವಲಯದಲ್ಲಿ ಆರಂಭ ವಾಗುವ ರಸ್ತೆ ಹಲಗೇರಿ– ದದೇಗಲ್‌ ಮಧ್ಯೆ ಕೊನೆಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ – 63ಕ್ಕೆ ಸಂಪರ್ಕ ಕಲ್ಪಿಸಲಿದೆ.

ವಿಪರೀತ ಸಂಚಾರ ದಟ್ಟಣೆ, ಬಹುಚಕ್ರಗಳ ಟ್ರಕ್‌, ಟ್ರಾಲಿ ಹೊಂದಿದ ವಾಹನಗಳು ನಗರದ ಮುಖ್ಯರಸ್ತೆಯಲ್ಲೇ ಹಾದುಹೋಗುತ್ತಿವೆ. ಬೈಪಾಸ್‌ ರಸ್ತೆಯಿಂದಾಗಿ ಈ ವಾಹನಗಳು ನಗರದ ಹೊರವಲಯದಲ್ಲಿ ಸಂಚರಿಸಲಿವೆ. ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ ಎಂಬುದು ನಾಗರಿಕರ ನಿರೀಕ್ಷೆ.

ಕೈಗಾರಿಕೆಗಳಿಗೆ ಅನುಕೂಲ: ನರೇಗಲ್‌ ಮಾರ್ಗದ ಬಳಿ ರೈಲ್ವೆ ಗೂಡ್ಸ್‌ ಷೆಡ್‌ ನಿರ್ಮಾಣವಾಗುತ್ತಿದೆ. ಬೈಪಾಸ್‌ ರಸ್ತೆಗೆ ಇದು ಸಮೀಪವಾಗುತ್ತದೆ. ರೈಲಿಗೆ ಸರಕು ತುಂಬುವುದು ಮತ್ತು ಇಳಿಸುವುದು, ಇಲ್ಲಿಂದಲೇ ಕೈಗಾರಿಕಾ ಕೇಂದ್ರಗಳಿಗೆ ಸಾಗಿಸುವುದು ಸುಲಭವಾಗಲಿದೆ. ಹೊಸ ರಸ್ತೆ ಉಕ್ಕು ಕಾರ್ಖಾನೆಗಳ ಬದಿಯಲ್ಲಿಯೇ ಹಾದುಹೋಗುತ್ತದೆ. ಕೈಗಾರಿಕೆಗಳಿಗೆ ಬರುವ ಲಾರಿಗಳು ನೇರವಾಗಿ ಆಯಾ ಘಟಕ ತಲುಪುತ್ತವೆ. ನಾಲ್ಕು ಪಥಗಳ ರಸ್ತೆ ಆಗಿರುವುದರಿಂದ ಸಂಚಾರ ದಟ್ಟಣೆಯ ತೊಂದರೆ ಇಲ್ಲ. ಇಂಧನವೂ ಉಳಿತಾಯವಾಗಲಿದೆ ಎನ್ನುತ್ತಾರೆ ಇಲ್ಲಿನ ಲಾರಿ ಚಾಲಕರು.

ಕಾಮಗಾರಿ ಹೇಗೆ ಸಾಗಿದೆ?: ಬೃಹತ್‌ ಯಂತ್ರಗಳ ಮೂಲಕ ಈಗಾಗಲೇ ಜಮೀನು ಸಮತಟ್ಟುಗೊಳಿಸಲಾಗಿದೆ. ಅಗತ್ಯ ಬಿದ್ದ ಲ್ಲೆಲ್ಲಾ ಮಣ್ಣು ತುಂಬಿ ಎತ್ತರಗೊಳಿಸಲಾಗಿದೆ. ಹಿರೇಹಳ್ಳಕ್ಕೆ ತಾತ್ಕಾಲಿ ಕ ತೂಬುಗಳನ್ನು ಹಾಕಿ ಯಂತ್ರಗಳ ಓಡಾಟಕ್ಕೆ ಸೇತುವೆ ನಿರ್ಮಿಸ ಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಹಿಂಭಾಗ ಭೂಮಿ ಸಮತಟ್ಟು ಮಾಡುವ ಕಾಮಗಾರಿ ಬಾಕಿ ಇದೆ. ಏಕೆಂದರೆ ಇಲ್ಲಿ ಬೆಳೆದ ರೈತರ ಬೆಳೆ ತೆರವಾಗಬೇಕು. ಭೂಮಿ ಕಳೆದುಕೊಂಡ ರೈತರಿಗೆ ಸಾಕಷ್ಟು ಪರಿಹಾರ ನೀಡಲಾಗಿದೆ. ಹೀಗಾಗಿ ಕಾಮಗಾರಿಗೆ ಯಾವುದೇ ಆತಂಕ ಇಲ್ಲ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.

**

ರಸ್ತೆಯ ವಿಶೇಷತೆಗಳು

ಕೊಪ್ಪಳ ನಗರಕ್ಕೆ ರಿಂಗ್‌ರಸ್ತೆಯಂತೆಯೂ ಬಳಸ ಬಹುದು. ಜನ, ವಾಹನ ಸಂಚಾರಕ್ಕೆ ಅನು ಕೂಲವಾಗುವಂತೆ ಅಲ್ಲಲ್ಲಿ ಮೂರು ಅಂಡರ್‌ಪಾಸ್‌, ಒಂದು ಸೇತುವೆ ನಿರ್ಮಿಸಲಾಗುತ್ತದೆ ಎಂದು ಯೋಜನಾ ವರದಿ ಹೇಳಿದೆ. ಹುಬ್ಬಳ್ಳಿ– ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ –63ನ್ನು ಚತುಷ್ಪಥಗೊಳಿಸುವ ಕಾಮಗಾರಿಯ ಭಾಗವಾಗಿ ಬೈಪಾಸ್‌ ರಸ್ತೆ ನಿರ್ಮಾಣಗೊಳ್ಳುತ್ತಿದೆ.

**

ಚತುಷ್ಪಥ ರಸ್ತೆ ನಿರ್ಮಿಸಿ

ನಿತಿನ್‌ ಗಡ್ಕರಿ ಅವರು ನಗರದ ಮುಖ್ಯರಸ್ತೆ ಯನ್ನು ಚತುಷ್ಪಥವಾಗಿಸುವುದಾಗಿ ಭರವಸೆ ನೀಡಿದ್ದರು. ಆ ಕೆಲಸ  ಬೇಗನೇ ಆರಂಭವಾಗಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

**

ಸೆಸ್‌ ಶುಲ್ಕ ಪಾವತಿ

‘ರಸ್ತೆ ತೆರಿಗೆಯಲ್ಲಿ ಸಂಗ್ರಹವಾದ ಸೆಸ್‌ ಶುಲ್ಕವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಲಾಗಿದೆ. ಅದರ ಒಟ್ಟಾರೆ ಮೊತ್ತದಲ್ಲಿ ರಾಜ್ಯದ ಪಾಲನ್ನು ಬೈಪಾಸ್‌ ರಸ್ತೆ ಅಭಿವೃದ್ಧಿಗೆ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT