ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಿಥೇಯ ಬಿದ್ದಾಟಂಡ ತಂಡಕ್ಕೆ ಟೈಬ್ರೇಕರ್‌ನಲ್ಲಿ ಸೋಲು

Last Updated 24 ಏಪ್ರಿಲ್ 2017, 6:18 IST
ಅಕ್ಷರ ಗಾತ್ರ

ನಾಪೋಕ್ಲು:  ಇಲ್ಲಿನ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ಟೂರ್ನಿಯ  ಭಾನುವಾರದ ಪಂದ್ಯಗಳಲ್ಲಿ 20 ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ.

ದಿನದ ಪಂದ್ಯದಲ್ಲಿ ನಾಯಕಂಡ, ಬಲ್ಲಂಡ, ಕುಲ್ಲೆಟಿರ, ಚಂದೂರ, ಪೆಮ್ಮಂಡ, ಮಣವಟ್ಟೀರ, ಹಂಚೇಟ್ಟಿರ, ಬೊಳ್ಳಚೇಟ್ಟೀರ, ಮುಲ್ಲಂಡ, ಅಲ್ಲಂಡ, ಮನಿಪಂಡ, ಬೆಪ್ಪುಡಿಯಂಡ, ಸಣ್ಣುವಂಡ, ಕೊಂಗಂಡ, ಪಟ್ರಪಂಡ, ಕುಂಡ್ಯೋಳಂಡ, ಶಾಂತೆಯಂಡ, ಐತಿಚಂಡ ಮುನ್ನಡೆ ಸಾಧಿಸಿದವು.

ಏಳನೇ ದಿನದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಕುಲ್ಲೇಟಿರ ತಂಡವು ಪಾಲೇಕಂಡ ತಂಡವನ್ನು 4-0 ಗೋಲುಗಳಿಂದ ಪರಾಭವಗೊಳಿಸಿತು, ಆರಂಭದಿಂದಲೇ ಬಿರುಸಿನ ಆಟವಾಡಿದ ಕುಲ್ಲೇಟಿರ ತಂಡದ ಸುಬಮ್ 1ಮತ್ತು 15 ನೇ ನಿಮಿಷದಲ್ಲಿ 2 ಗೋಲು ಹೊಡೆದರೆ ನಾಚಪ್ಪ 31ನೇ ಮತ್ತು 35ನೇ ನಿಮಿಷದಲ್ಲಿ 2 ಗೋಲು ಹೊಡೆದು ತಂಡಕ್ಕೆ ಗೆಲುವು ತಂದು ಕೊಟ್ಟರು. ನಂತರದ ಪಂದ್ಯದಲ್ಲಿ ನಾಯಕಂಡ ತಂಡವು ಆತಿಥೇಯ ಬಿದ್ದಾಟಂದ ತಂಡವನ್ನು ಟೈಬ್ರೇಕರ್‌ನಲ್ಲಿ 6-5 ಗೋಲುಗಳಿಂದ ಸೋಲಿಸಿತು. ನಿಗದಿತ ಸಮಯದಲ್ಲಿ ಎರಡು ತಂಡಗಳು ಒಂದೊಂದು ಸಮಬಲ ಸಾಧಿಸಿದ್ದವು, ಬಿದ್ದಾಟಂಡ ಪರ ಅಚ್ಚಯ್ಯ ಗೋಲು ಬಾರಿಸಿದರೆ ನಾಯಕಂಡ ಪರ ಜೋಯಪ್ಪ ಗೋಲು ಬಾರಿಸಿದರು.

ಬೊಳ್ಳಚಟ್ಟೀರ ಮತ್ತು ಚೌರೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 17 ನೇ ನಿಮಿಷದಲ್ಲಿ ಪೂವಣ್ಣ ಹೊಡೆದ ಏಕೈಕ ಗೋಲಿನಿಂದ ಬೊಳ್ಳಚಟ್ಟೀರ ತಂಡವು ವಿಜಯ ಸಾಧಿಸಿತು.

ಬಲ್ಲಂಡ ಮತ್ತು ತೇಲಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಲ್ಲಂಡ ತಂಡವು 2-0 ಗೋಲುಗಳಿಂದ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು, ಬಲ್ಲಂಡ ಪರ ಮಂದಣ್ಣ, ಪೂಣಚ್ಚ ಗೋಲು ಹೊಡೆದರು.

ಮಣವಟ್ಟೀರ ತಂಡವು ಕಂಜೀತಂಡ ತಂಡವನ್ನು 3-0 ಗೋಲುಗಳಿಂದ ಮಣಿಸಿತು. ಮಣವಟ್ಟೀರ ಪರ ಅಯ್ಯಪ್ಪ, ಸೋಮಣ್ಣ, ಗಗನ್ ಕಾರ್ಯಪ್ಪ ಗೋಲು ಬಾರಿಸಿ ಗೆಲುವು ತಂದು ಕೊಟ್ಟರು.

ನಂತರ ಪಂದ್ಯದಲ್ಲಿ ಮಚ್ಚಮಾಡ ತಂಡ ನಾಗಂಡ ತಂಡವನ್ನು 1 ಗೋಲಿನಿಂದ ಸೋಲಿಸಿತು. ಮಚ್ಚಮಾಡ ಪರ 4ನೇ ನಿಮಿಷದಲ್ಲಿ ಪೊನ್ನಣ್ಣ ಗೋಲು ಹೊಡೆದು ಜಯ ತಂದು ಕೊಟ್ಟರು.

ಪೆಮ್ಮಂಡ ತಂವು ಕನ್ನಂಬಿರ ತಂಡವನ್ನು 5-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು,  ಪೆಮ್ಮಂಡ ಪರ ಚರಣ್ 1, ಸೋಮಣ್ಣ 3, ಬೋಪಣ್ಣ 1 ಗೋಲು ಹೊಡೆದರು.

ಚಂದೂರ ತಂಡವು ಪೊನ್ನಚಂಡ ತಂಡವನ್ನು 6-1 ಗೋಲುಗಳಿಂದ ಮಣಿಸಿತು, ಈ ಪಂದ್ಯದಲ್ಲಿ ಶ್ಯಾಮ್ ಮುತ್ತಣ್ಣ 1, ರಾಜ 1, ಪೊನ್ನಣ್ಣ 2, ದೇವಯ್ಯ 2, ಗೋಲು ಬಾರಿಸಿದರೆ ಪೊನ್ನಚಂಡ ಪರ ವಿಶಾಲ್ ತಿಮ್ಮಯ್ಯ ಏಕೈಕ ಗೋಲು ಬಾರಿಸಿದರು. ನಂತರದ ಪಂದ್ಯದಲ್ಲಿ ಮನಿಪಂಡ ತಂಡವು ಮುಕ್ಕಾಟೀರ( ಮಾದಪುರ) ತಂಡವನ್ನು 2-1 ಗೋಲುಗಳಿಂದ ಸೋಲಿಸಿತು, ಮನಿಪಂಡ ಪರ ಮಂದಣ್ಣ 26 ಮತ್ತು35 ನೇ ನಿಮಿಷದಲ್ಲಿ 2 ಗೋಲು ಬಾರಿಸಿದರೆ ಮುಕ್ಕಾಟೀರ ಪರ ಮಿಲನ್ ಗೋಲು ಬಾರಿಸಿದರು.

ಹಂಚ್ಚೇಟಿರ ತಂಡವು ಕಾಳಚಂಡ ತಂಡವನ್ನು 4-0 ಗೋಲುಗಳಿಂದ ಪರಾಭವಗೊಳಿಸಿತು. ಹಂಚ್ಚೇಟಿರ ಪರ ಅಂಕುಶ್ ಪೂವಯ್ಯ 2, ನವಿನ್ ನಂಜಪ್ಪ 1, ಮಹೇಶ್ 1 ಗೋಲು ಹೊಡೆದು ವಿಜಯ ಸಾಧಿಸಿದರು.

ಬೆಪ್ಪುಡಿಯಂಡ ಮತ್ತು ನಂಬುಡುಮಂಡ ನಡುವೆ ನಡೆದ ಪಂದ್ಯದಲ್ಲಿ ಬೆಪ್ಪುಡಿಯಂಡ, ನಂಬುಡುಮಂಡವನ್ನು 3-1 ಗೋಲುಗಳಿಂದ ಪರಾಭವಗೊಳಿಸಿತು. ತಂಡದ ಪರ ಸಂತು 2, ಸುಬ್ಬಯ್ಯ 1 ಗೋಲು ಹೊಡೆದರೆ ನಂಜಪ್ಪ 1 ಗೋಲು ಹೊಡೆದು ಅಂತರ ತಗ್ಗಿಸಿದರು.

ಸಣ್ಣುವಂಡ ತಂಡವು ಚಿಂಡಮಾಡ ತಂಡವನ್ನು 2-0 ಗೋಲುಗಳಿಂದ ಮಣಿಸಿತು, ತಂಡದ ಪರ ಭಾರತೀಯ ತಂಡದ ಆಟಗಾರ  ಒಲಿಂಪಿಯನ್ ಉತ್ತಪ್ಪ, ಮತ್ತು ಅಯ್ಯಪ್ಪ ಗೋಲು ಹೊಡೆದರು.

ಕೊಂಗಂಡ ತಂಡವು ಪುಟ್ಟಿಚಂಡ ತಂಡವನ್ನು ಟೈಬ್ರೇಕರ್‌ನಲ್ಲಿ 4-2 ಗೋಲುಗಳಿಂದ ಮಣಿಸಿತು. ನಿಗದಿತ ಸಮಯದಲ್ಲಿ ಎರಡು ತಂಡಗಳು 1-1 ಸಮಬಲ ಸಾಧಿಸಿದ್ದು ಪಟ್ರಪಂಡ  ತಂಡವು ಟೈಬ್ರೇಕರ್‌ನಲ್ಲಿ 5-4 ಗೋಲುಗಳಿಂದ ಚೇರಂಡ ತಂಡವನ್ನು ಪರಾಭವ ಗೊಳಿಸಿತು.

ಕುಂಡ್ಯೋಳಂಡ ತಂಡವು ಮರುವಂಡ ತಂಡವನ್ನು 3-0 ಗೋಲುಗಳಿಂದ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಕುಂಡ್ಯೋಳಂಡ ಪರ ಬಿಪಿನ್ ಬೆಳ್ಯಪ್ಪ 2, ಪ್ರಥ್ವಿ ಪಳಂಗಪ್ಪ 1 ಗೋಲು ಬಾರಿಸಿದರು.

ಶಾಂತೆಯಂಡ ಮತ್ತು ಜಮ್ಮಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಶಾಂತೆಯಂಡ ಜಮ್ಮಡವನ್ನು 2-1 ಗೋಲುಗಳಿಂದ ಸೋಲಿಸಿತು. ಶಾಂತೆಯಂಡ ಪರ ಲೂತನ್, ಸಾಹನ್ ಒಂದೊಂದು ಗೋಲು ಬಾರಿಸಿದರೆ ಜಮ್ಮಡ ಪರ ತರಣ್ ತಿಮ್ಮಯ್ಯ ಒಂದು ಗೋಲು ಹೊಡೆದರು.

ಗೌಡಂಡ ಮತ್ತು ಮಲ್ಲಂಡ ತಂಡಗಳು ವಾಕ್ ಓವರ್‌ನಲ್ಲಿ ಮುಂದಿನ ಸುತ್ತು ಪ್ರವೇಶಿಸಿದವು. ದಿನದ ಕೊನೆಯ ಪಂದ್ಯದಲ್ಲಿ ಐತಿಚಂಡ ತಂಡವು ಅಪ್ಪಚ್ಚೀರ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಐತಿಚಂಡ ಪರ ಪೂವಯ್ಯ 2 ಗೋಲು ಬಾರಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT