ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಲಹೆಗೆ ಐಎಂಎ ವಿರೋಧ

Last Updated 24 ಏಪ್ರಿಲ್ 2017, 6:49 IST
ಅಕ್ಷರ ಗಾತ್ರ

ಮಂಗಳೂರು: ವೈದ್ಯರು ಔಷಧಿಗಳ ಬ್ರಾಂಡ್ ಹೆಸರು ಸೂಚಿಸುವ ಬದಲು ಜನರಿಕ್ ಹೆಸರನ್ನು ರೋಗಿಗಳಿಗೆ ಶಿಫಾ ರಸು ಮಾಡುವುದನ್ನು ಕಡ್ಡಾಯ ಮಾ ಡುವ  ಕಾಯ್ದೆ ಜಾರಿಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಂಗಳೂರು ಘಟಕ ವಿರೋಧಿಸಿದೆ.

ಶುಕ್ರವಾರ ರಾತ್ರಿ ನಡೆದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಐಎಂಎ ಅಧ್ಯಕ್ಷ ಎಂ. ರಾಘವೇಂದ್ರ ಭಟ್, ‘ಎಲ್ಲ ರೋಗಗಳಿಗೆ ಜನರಿಕ್ ಹೆಸರು ಶಿಫಾರಸು ಮಾಡಲು ಸಾಧ್ಯವಿಲ್ಲ. ಕೆಲ ಔಷಧಿ ಸಂಯೋಜ ನೆಯ ಬಗ್ಗೆ ವೈದ್ಯರಿಗೆ ದೃಢ ವಿಶ್ವಾಸವಿ ರುತ್ತದೆ. ಆದ್ದರಿಂದ ನಿರ್ದಿಷ್ಟ ಕಂಪೆನಿಗಳ ಸಂಯೋಜನೆಯೇ ಹೆಚ್ಚು ಸೂಕ್ತ’ ಎಂದರು.

‘ಭಾರತದ ವೈದ್ಯಪದ್ಧತಿಯಲ್ಲಿ ಹೆಚ್ಚು ಔಷಧಿಗಳನ್ನು ಶಿಫಾರಸು ಮಾಡುವ ರೂಢಿ ಇಲ್ಲ. ಹಲವು ರಾಸಾಯನಿಕ ಸಂಯೋಜನೆಗಳಿರುವ ಔಷಧವನ್ನು ಅಧ್ಯಯನ ಮಾಡಿ ನಿರ್ದಿಷ್ಟ ರೋಗಗಳಿಗೆ ಯಾವುದು ಸೂಕ್ತ ಎಂದು ನಿರ್ಧರಿಸಿ ಅದನ್ನು ಶಿಫಾರಸು ಮಾಡಲಾಗುತ್ತದೆ. ಭಾರತದ ವೈದ್ಯಕೀಯ ಸ್ಥಿತಿ ವಿದೇಶಗಳಿಗಿಂತ ಭಿನ್ನ ’ ಎಂದು ಭಟ್ ಪ್ರತಿಪಾದಿಸಿದರು.

ಕೆಎಂಸಿ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಎಲ್.ಕಾಮತ್ ಮಾತ ನಾಡಿ, ‘ರೋಗಿಗಳಿಗೆ ಯಾವ ಔಷಧ ಸೂಕ್ತ ಎನ್ನುವುದು ವೈದ್ಯರ ವಿವೇಚನೆಗೆ ಬಿಟ್ಟದ್ದು. ಏಕೆಂದರೆ ರೋಗಿಯ ದೇಹಪ್ರಕೃತಿ, ರೋಗಲಕ್ಷಣ ಎಲ್ಲವನ್ನೂ ವೈದ್ಯ ತಪಾಸಣೆ ಮಾಡಿರುತ್ತಾನೆ. ಇದರ ಬದಲಾಗಿ ಜನರಿಕ್ ಹೆಸರುಗಳನ್ನು ಶಿಫಾರಸು ಮಾಡಿದರೆ ಆ ಎಲ್ಲ ವಿವೇಚನಾ ಅಧಿಕಾರವನ್ನು ಕೆಮಿಸ್ಟ್‌ ಗಳಿಗೆ ನೀಡಿದಂತಾಗುತ್ತದೆ. ಇದರಿಂದ ರೋಗಿಗಳಿಗೂ ಅಪಾಯ’ ಎಂದು ಎಚ್ಚರಿಸಿದರು.

ಹೃದ್ರೋಗ ಮಾಹಿತಿ:  ನಿರಂತರ ವೈದ್ಯಕೀಯ ಶಿಕ್ಷಣ ಉಪನ್ಯಾಸದಲ್ಲಿ ಹೃದ್ರೋಗ ಚಿಕಿತ್ಸೆಗೆ ಲಭ್ಯವಿರುವ ಆಧುನಿಕ ಔಷಧಿಗಳು ಮತ್ತು ಸಾಧನ ಗಳು ಎಂಬ ವಿಷಯದ ಬಗ್ಗೆ ಡಾ.ಆರ್. ಎಲ್.ಕಾಮತ್, ಡಾ.ಪದ್ಮನಾಭ ಕಾಮತ್ ಹಾಗೂ ಡಾ.ಮನೀಶ್ ರೈ ಮಾತನಾಡಿದರು.

ಐಎಂಎ ಕಾರ್ಯದರ್ಶಿ ಕದ್ರಿ ಯೋಗೀಶ್ ಬಂಗೇರ ನಿರೂಪಿಸಿದರು. ಖಜಾಂಚಿ ಡಾ.ಜಿ.ಕೆ.ಭಟ್ ಸಂಕಬಿತ್ತಿಲು ವಂದಿಸಿದರು. ನಿಯೋಜಿತ ಅಧ್ಯಕ್ಷ ಡಾ.ಕೆ.ಆರ್. ಕಾಮತ್ ಅತಿಥಿಗಳನ್ನು ಪರಿಚಯಿ ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT