ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಗರೋಡಿಗಳ ಅಭಿವೃದ್ಧಿಗೆ ಅನುದಾನ

Last Updated 24 ಏಪ್ರಿಲ್ 2017, 7:01 IST
ಅಕ್ಷರ ಗಾತ್ರ

ಉಡುಪಿ: ‘ಪಹಣಿ ಸಮಸ್ಯೆ ಇರುವ ಗರೋಡಿಗಳು ತಹಶೀಲ್ದಾರ್‌ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಮೂರು ತಿಂಗಳ ಅವಧಿಯೊಳಗೆ ಪರಿಹರಿಸಲಾಗುವುದು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು.

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲಾ ವ್ಯಾಪ್ತಿಯ ಗರೋಡಿ ಗುರಿಕಾರರ ಸನ್ಮಾನ ಮತ್ತು ಪ್ರಮುಖರ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಗರೋಡಿಗಳ ಜೀರ್ಣೋದ್ಧಾರ ಹಾಗೂ ಹೊಸ ಗರೋಡಿಗಳ ನಿರ್ಮಾ ಣಕ್ಕೆ ಮುಜರಾಯಿ ಇಲಾಖೆ ಮೂಲಕ ಅನುದಾನ ನೀಡಲು ಅವಕಾಶವಿದೆ. ಆದರೆ, ಇಲಾಖೆಗೆ ಸೇರದ ದೈವಸ್ಥಾನ, ದೇವಸ್ಥಾನಗಳಿಗೆ ಕಡಿಮೆ ಅನುದಾನ ವನ್ನು ಮೀಸಲಿಡಲಾಗುತ್ತದೆ. ಹಾಗಾಗಿ ಹೆಚ್ಚು ಅನುದಾನ ಸಿಗುವುದಿಲ್ಲ. ಜೀರ್ಣೋದ್ಧಾರ ಕ್ರಿಯಾ ಯೋಜನೆ  ಸಿದ್ಧಪಡಿಸಿ ತಹಶೀಲ್ದಾರ್‌ ಮೂಲಕ ಪ್ರಸ್ತಾವನೆ ಸಲ್ಲಿಸಿದಲ್ಲಿ, ಸರ್ಕಾರದಿಂದ ಎಷ್ಟು ಅನುದಾನ ಮಂಜೂರು ಮಾಡಲು ಸಾಧ್ಯವಿದೆಯೋ, ಅದನ್ನು ಕೊಡಿಸಲು ಪ್ರಯತ್ನಿಸಲಾಗುವುದು. ಈ ವರ್ಷ 10 ಗರೋಡಿಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಲು ಪ್ರಯತ್ನಿಸುತ್ತೇವೆ’ ಎಂದರು.

‘ಮೂಲ ಗೇಣಿದಾರರಿಗೆ ಶೇ 100ರಷ್ಟು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಿದ್ದೇವೆ. ಯಾವುದೇ ದಾಖಲೆಯನ್ನು ಕೇಳದೆ, ಅರ್ಜಿ ಸಲ್ಲಿಸಿದ ವರಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ’ ಎಂದರು.

‘ಸಮಾಜದಲ್ಲಿರುವ ಮೇಲು ಕೀಳನ್ನು ಕಿತ್ತು ಹಾಕಬೇಕು. ಅದು ಸಮಾಜದ ಮುಂದಿರುವ ದೊಡ್ಡ ಸವಾಲು. ಇದು ಬದಲಾವಣೆಯ ಯುಗ. ಈ ಬದಲಾವಣೆಗೆ ಎಲ್ಲರೂ ಒಗ್ಗಿ ಕೊಂಡು, ಸಮಾಜವನ್ನು ಪರಿವರ್ತನೆಯ ಕಡೆಗೆ ಕೊಂಡೊಯ್ಯಬೇಕು. ಆ ಮೂಲಕ ಬಿಲ್ಲವ ಸಮಾಜದ ಗರೋಡಿ ಗುರಿಕಾರರ ಸಮಾವೇಶ ಹೊಸ ಮಾರ್ಗವನ್ನು ತೋರಿಸಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ‘ಗರೋಡಿಗಳನ್ನು ನಿಯಮ ಬದ್ಧವಾ ಗಿಯೇ ಕಟ್ಟಬೇಕು. ದುಡ್ಡು ಇದೆ ಅಂತಾ ದೊಡ್ಡದಾಗಿ ಕಟ್ಟಲು ಸಾಧ್ಯವಿಲ್ಲ. ಹಾಗಂತ ಸಣ್ಣದಾಗಿ ನಿರ್ಮಿಸುವಂತಿಲ್ಲ. ಗರೋಡಿಗಳಲ್ಲಿ ಜಾತಿ ಸಾಮರಸ್ಯವನ್ನು ಕಾಣಬಹುದು. ಎಲ್ಲ ಜಾತಿಯವರೂ ಅಲ್ಲಿಗೆ ಹೋಗುತ್ತಾರೆ. ಆದರೆ, ಗರೋಡಿ ಯಲ್ಲಿ ಕೆಲಸ ಮಾಡುವವರು ಮಾತ್ರ ಯಜಮಾನಿಕೆ ತೋರಿಸುವವರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ಯಶ್‌ಪಾಲ್‌ ಸುವರ್ಣ, ಯಶ್‌ಪಾಲ್‌ ಸುವರ್ಣ, ಕೆ. ಉದಯಕುಮಾರ್‌ ಶೆಟ್ಟಿ, ಕಿರಣ್‌ ಕುಮಾರ್‌ ಬೈಲೂರು ಇತರರು ಉಪಸ್ಥಿತರಿದ್ದರು.

**

ಗರೋಡಿಯಲ್ಲಿ ಕೆಲಸ ಮಾಡುವ ಅರ್ಚಕರಿಗೆ ಮಾಸಾಶನ ನೀಡುವ ಕುರಿತಂತೆ ಸಭೆ ಕರೆದು ಚರ್ಚೆ ಮಾಡುತ್ತೇವೆ.
-ಪ್ರಮೋದ್ ಮಧ್ವರಾಜ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT