ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಸೇವೆಯ ಸಂಕಲ್ಪ; ಯುವಕರಿಗೆ ಕರೆ

Last Updated 24 ಏಪ್ರಿಲ್ 2017, 7:02 IST
ಅಕ್ಷರ ಗಾತ್ರ

ಹಾಸನ: ರಾಷ್ಟ್ರ ಪ್ರಗತಿಯಲ್ಲಿ ಯುವಕರ ಪಾತ್ರ ಹೆಚ್ಚಿದ್ದು, ಜಾತಿ, ಮತ, ಧರ್ಮ, ಮೌಢ್ಯದಿಂದ ಹೊರಬಂದು ದೇಶ ಸೇವೆಗೆ ಮುಂದಾಗಬೇಕು ಎಂದು ಸರ್ಕಾರಿ ಕಲಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ  ಹಂಪನಹಳ್ಳಿ ತಿಮ್ಮೇಗೌಡ ಕರೆ ನೀಡಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಖಿಲ ಭಾರತ ಅಂಚೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ  ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜಾತಿ ಹಾಗೂ ಧರ್ಮಕ್ಕೆ ಆದ್ಯತೆ ದೊರೆಯುತ್ತಿದೆ. ಪರಸ್ಪರ ದ್ವೇಷದ ಭಾವನೆ ಮೂಡುತ್ತಿದೆ. ಅಂಬೇಡ್ಕರ್‌ರ ಸಂದೇಶವನ್ನು ಎಲ್ಲರೂ ಪಾಲಿಸಬೇಕು. ಪುರೋಹಿತಶಾಹಿಗಳು ಅಸ್ಪೃಶ್ಯತೆಯನ್ನು ಮಾತ್ರ ಆಚರಿಸದೆ ಕುಡಿಯುವ ನೀರು, ಉಳುವ ಭೂಮಿ, ಶಿಕ್ಷಣ ಮುಂತಾದವುಗಳಿಗೆ ತೊಡ ಕಾದರು. ಆದರೆ ಈಗ ಅಂಥ ಕಠಿಣ ಸ್ಥಿತಿ ಇಲ್ಲ. ಸಂವಿಧಾನ ಎಲ್ಲ ನೀಡಿದ್ದು, ಅದರ ನೆರವಿಂದ ಜೀವನದಲ್ಲಿ ಉನ್ನತಿ ಸಾಧಿಸಬೇಕು ಎಂದರು.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್,  ಅಂಬೇಡ್ಕರ್ ಶ್ರೇಷ್ಠ ಆರ್ಥಿಕ ತಜ್ಞ, ವಕೀಲರಾಗಿದ್ದರು. ಅವರ ಜೀವನ ತತ್ವ ಪ್ರತಿಯೊಬ್ಬರಿಗೆ ೂ ಅನುಕರಣೀಯ. ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ ಮಹಾನಾಯಕನ ಸ್ಮರಣೆ ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದರು.

ಅರಸೀಕೆರೆ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಬಿ.ಎಂ. ಶಂಕರಪ್ಪ, ಹಾಸನ ವಿಭಾಗದ ಎಚ್.ಸಿ. ಚಿದಾನಂದ್, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೆ. ಪುಟ್ಟರಾಜು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗಂಗಾಧರ್ ಬಹುಜನ್, ಕೆ. ರೇಖಾ, ಎಚ್.ವಿ. ಗುಂಡಣ್ಣ, ಸಿ.ಕೆ. ವೀರಭದ್ರಪ್ಪ, ಎ.ಬಿ. ಕಾಂತರಾಜು, ಗಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT