ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಮ್ಮನ್ನು ಬಿಟ್ಟು ಬಿಡಿ' ಎಂದು ಮಹಿಳೆಯರು ಅಂಗಲಾಚಿದರೂ ಅದನ್ನು ಲೆಕ್ಕಿಸದೆ ಹಲ್ಲೆ ನಡೆಸಿದ ಗೋರಕ್ಷಕರು!

Last Updated 24 ಏಪ್ರಿಲ್ 2017, 8:43 IST
ಅಕ್ಷರ ಗಾತ್ರ
ADVERTISEMENT

ಜಮ್ಮು: ಜಾನುವಾರು ಸಾಗಿಸುತ್ತಿದ್ದವರ ಮೇಲೆ ಜಮ್ಮು ಮತ್ತು ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಶುಕ್ರವಾರ ಗೋರಕ್ಷಕರು ಹಲ್ಲೆ ನಡೆಸಿದ್ದಕ್ಕೆ ಸಂಬಂಧಿಸಿದ ಆಘಾತಕಾರಿ ವಿಡಿಯೊ ಬಹಿರಂಗವಾಗಿದೆ.

ಹಲ್ಲೆ ನಡೆಸುತ್ತಿರುವ ಗೋರಕ್ಷಕರ ಜತೆ ‘ನಮ್ಮನ್ನು ಬಿಟ್ಟುಬಿಡಿ’ ಎಂದು ಮಹಿಳೆಯೊಬ್ಬರು ಅಂಗಲಾಚುವ ದೃಶ್ಯ ವಿಡಿಯೊದಲ್ಲಿ ಕಂಡುಬಂದಿದೆ. ಆ ಸಂದರ್ಭ, ಸ್ಥಳದಲ್ಲಿದ್ದ ಪೊಲೀಸರೂ ಅಸಹಾಯಕರಾಗಿ ನಿಂತಿರುವ ದೃಶ್ಯ ವಿಡಿಯೊದಲ್ಲಿದೆ.

ಶುಕ್ರವಾರ ರಾತ್ರಿಯ ಹಲ್ಲೆಯಲ್ಲಿ 9 ವರ್ಷ ವಯಸ್ಸಿನ ಬಾಲಕಿಯೂ ಸೇರಿ ಒಂದೇ ಕುಟುಂಬದ ಐದು ಮಂದಿ ಗಾಯಗೊಂಡಿದ್ದರು.

ನಡೆದಿದ್ದೇನು?: ಗೋರಕ್ಷಕರು ಹಲ್ಲೆ ನಡೆಸಿದಾಗ ಜಾನುವಾರುಗಳ ಜತೆ ತೆರಳುತ್ತಿದ್ದ ತಂಡದಲ್ಲಿದ್ದ ಹಿರಿಯ ವ್ಯಕ್ತಿ ಕುಸಿದುಬಿದ್ದಿದ್ದಾರೆ. ಆಗ ಅವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ರಕ್ಷಣೆಗೆ ಧಾವಿಸಿದ ಮಹಿಳೆ ಮೇಲೂ ಗೋರಕ್ಷಕರು ಹಲ್ಲೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಕುಟುಂಬದವರ ಮೇಲೂ ಪ್ರಕರಣ ದಾಖಲಿಸಲಾಗಿದೆ.

‘ಅನುಮತಿ ಇಲ್ಲದೆ ರಾತ್ರಿ ವೇಳೆ ಜಾನುವಾರುಗಳನ್ನು ಸಾಗಿಸಬೇಡಿ. ಹಗಲಿನ ವೇಳೆ ಮಾತ್ರ ಜಾನುವಾರುಗಳ ಸಾಗಾಟ ಮಾಡಿ ಎಂದು ಆ ಕುಟುಂಬದವರಿಗೆ ಸೂಚಿಸಲಾಗಿತ್ತು. ಇದನ್ನು ಅವರು ಧಿಕ್ಕರಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಆರೋಪಿಗಳೆಲ್ಲ 18ರಿಂದ 50 ವರ್ಷ ವಯಸ್ಸಿನ ಒಳಗಿನವರಾಗಿದ್ದು, ಅಪರಾಧ ಹಿನ್ನೆಲೆಯುಳ್ಳವರು ಎಂದೂ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT