ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕೆ ದಂಡ ವಿಧಿಸಿದ ಪೊಲೀಸರಿಗೆ ಥಳಿಸಿದ ಬಿಜೆಪಿ ನಾಯಕಿಯ ಸಂಬಂಧಿ!

Last Updated 24 ಏಪ್ರಿಲ್ 2017, 12:54 IST
ಅಕ್ಷರ ಗಾತ್ರ
ADVERTISEMENT

ಗುನಾ (ಮಧ್ಯಪ್ರದೇಶ): ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಯುವತಿಯರಿಗೆ ದಂಡ ವಿಧಿಸಿದ್ದಕ್ಕೆ ಬಿಜೆಪಿ ನೇತಾರನ ಸಂಬಂಧಿಗಳು  ಪೊಲೀಸರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಏಪ್ರಿಲ್ 21ರಂದು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಇಬ್ಬರು ಯುವತಿಯರಿಗೆ ಪೊಲೀಸರು ದಂಡ ವಿಧಿಸಿದ್ದರು. ಈ ಯುವತಿಯರು ಬಿಜೆಪಿ ಜನಪದ್ (ಬ್ಲಾಕ್) ಅಧ್ಯಕ್ಷೆ  ಶೋಭಾ ರಘುವಂಶಿ ಅವರ ಸಂಬಂಧಿಕರಾಗಿದ್ದಾರೆ. ದಂಡ ವಿಧಿಸಿದ ವಿಷಯವನ್ನು ತಿಳಿದ ಕೂಡಲೇ ಶೋಭಾ ಅವರ ಪತಿ ರಾಜೀವ್ ಮತ್ತು ಇತರರು ಸೇರಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

ಪೊಲೀಸ್ ಪೇದೆ ಅಶುತೋಶ್ ತಿವಾರಿ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರಿಗೆ ತೀವ್ರ ಗಾಯಗಳಾಗಿವೆ ಎಂದು  ಗುನಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ವಿವೇಕ್ ಅಸ್ತಾನಾ ಹೇಳಿದ್ದಾರೆ.

ರಾಜೀವ್ ಮತ್ತು ಅವರ ಸಂಬಂಧಿಕರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಲಾಗಿದ್ದು, ಆ ವಿಡಿಯೊ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಹಲ್ಲೆ ನಡೆಸಿದ ಗುಂಪಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಇನ್ನು ಕೆಲವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT