ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಚಾವಣಿಯಿಂದ ನೆಗೆದ ಅರಣ್ಯಾಧಿಕಾರಿ

Last Updated 24 ಏಪ್ರಿಲ್ 2017, 10:52 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ಚಿರತೆ ದಾಳಿಯಿಂದ ಪಾರಾಗಲು ಅರಣ್ಯಾಧಿಕಾರಿಯೊಬ್ಬರು ಚಾವಣಿಯಿಂದ ನೆಗದ ಆಂತಕಕಾರಿ ಸನ್ನಿವೇಶದ ವಿಡಿಯೊ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಒಡಿಶಾದ ಕಾಂತಬಂಜಿ ಅರಣ್ಯ ಪ್ರದೇಶದ ಕುರುಲಿ ಗ್ರಾಮದಲ್ಲಿ ಕಳೆದ ವಾರ ಈ ಘಟನೆ ನಡೆದಿದ್ದು, ಇದೀಗ ವಿಡಿಯೊ ಬಹಿರಂಗವಾಗಿದೆ.

ಗ್ರಾಮದಲ್ಲಿ ಬಾಲಕನೊಬ್ಬನ ಮೇಲೆ ಚಿರತೆ ದಾಳಿ ನಡೆದಿದ್ದು ರಕ್ಷಣೆಗಾಗಿ ಅರಣ್ಯಾಧಿಕಾರಿ ವಿಜಯಾನಂದ ಖುಂತಾ ಅವರಿಗೆ ಕರೆ ಕಳಹಿಸಲಾಗಿತ್ತು. ಚಿರತೆ ಸೆರೆ ಕಾರ್ಯಾಚರಣೆ ಸಂದರ್ಭ ಕಟ್ಟಡವೊಂದರ ಚಾವಣಿಯಲ್ಲಿದ್ದ ಅರಣ್ಯಾಧಿಕಾರಿ ಮೇಲೆ ಅದು ದಾಳಿ ನಡೆಸಿದೆ. ತಪ್ಪಿಸಿಕೊಳ್ಳುವ ಸಲುವಾಗಿ ಅವರು ತಕ್ಷಣವೇ ಕೆಳಕ್ಕೆ ನೆಗೆದಿದ್ದಾರೆ. ಈ ವೇಳೆ, ಸ್ಥಳದಲ್ಲಿ ಜಮಾಯಿಸಿದ್ದ ಜನರೂ ದಿಕ್ಕಾಪಾಲಾಗಿ ಓಡಿದ್ದಾರೆ.

12 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆಯನ್ನು ಸೆರೆಹಿಡಿಯಲಾಗಿದೆ. ಕಾರ್ಯಾಚರಣೆ ಸಂದರ್ಭ ಅರಣ್ಯಾಧಿಕಾರಿ ಸೇರಿ ಮೂವರು ಗಾಯಗೊಂಡಿದ್ದಾರೆ. ಚಿರತೆಯನ್ನು ಭುವನೇಶ್ವರದಲ್ಲಿರುವ ನಂದನ್‌ಕಾನನ್ ಮೃಗಾಯಲಯಕ್ಕೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT