ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಚೋಟಾ ರಾಜನ್‌ ಅಪರಾಧಿ

Last Updated 24 ಏಪ್ರಿಲ್ 2017, 11:21 IST
ಅಕ್ಷರ ಗಾತ್ರ

ನವದೆಹಲಿ: ಭೂಗತ ಪಾತಕಿ ರಾಜೇಂದ್ರ ಸಹದೇವ್‌ ನಿಖಲ್ಜೆ ಅಲಿಯಾಸ್‌ ಚೋಟಾ ರಾಜನ್‌ರನ್ನು ನಕಲಿ ಪಾಸ್‌ಪೋರ್ಟ್‌ ಪ್ರಕರಣದ ಅಪರಾಧಿ ಎಂದು ಇಲ್ಲಿನ ನ್ಯಾಯಾಲಯ ಪ್ರಕಟಿಸಿದೆ.

ರಾಜನ್‌ ಸೇರಿ ಒಟ್ಟು ನಾಲ್ವರನ್ನು ಅಪರಾಧಿಗಳು ಎಂದು ಕೇಂದ್ರೀಯ ತನಿಖಾ ದಳ(ಸಿಬಿಐ)ದ ವಿಶೇಷ ನ್ಯಾಯಮೂರ್ತಿ ವೀರೇಂದ್ರ ಕುಮಾರ್‌ ಗೋಯಲ್‌ ತಿಳಿಸಿದ್ದಾರೆ.

2016ರ ಜೂನ್‌ 8ರಂದು ಈ ಸಂಬಂಧ ಚೋಟಾರಾಜನ್‌, ಪಾಸ್‌ಪೋರ್ಟ್‌ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ ರಹಾಟೆ, ದೀಪಕ್‌ ನಟವರ್‌ಲಾಲ್‌ ಷಹಾ ಹಾಗೂ ಲಲಿತಾ ಲಕ್ಷ್ಮಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪಾಸ್‌ ಪೋರ್ಟ್‌ ಕಾಯಿದೆ ಅನ್ವಯ ಮೌಲ್ಯಯುತ ಭದ್ರತಾ ದಾಖಲೆಗಳ ನಕಲು, ಕ್ರಿಮಿನಲ್‌ ಪ್ರಕರಣ ಹಾಗೂ ಪಿತೂರಿ ಪ್ರಕರಣವೆಂದು ಪರಿಗಣಿಸಿ ಆರೋಪಿಸಲಾಗಿತ್ತು.

1998–99ರಲ್ಲಿ ಬೆಂಗಳೂರಿನಲ್ಲಿ ಚೋಟಾರಾಜನ್‌ಗೆ ಮೋಹನ್‌ಕುಮಾರ್‌ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್‌ ಒದಗಿಸಲಾಗಿತ್ತು ಎಂದು ಜಯಶ್ರೀ, ಷಹಾ ಹಾಗೂ ಲಕ್ಷ್ಮಣ್ ವಿರುದ್ಧ ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT