ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಮ್ಮನ ಜಾತ್ರೆ ಸಡಗರ

ಇಂದಿನಿಂದ ಹೊನ್ನಮ್ಮನ ಜಾತ್ರೆ
Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ದಂಡಿನಶಿವರ ಮಂಜುನಾಥ್
ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಇತಿಹಾಸ ಪ್ರಸಿದ್ಧ ಸ್ಥಳ. ಈ ಊರಿನ ಗ್ರಾಮದೇವತೆ ಹೊನ್ನಮ್ಮ ಸುತ್ತಮುತ್ತಲ ಹಳ್ಳಿಗಳ ಜನಮನದ ಶಕ್ತಿದೇವತೆ. ಈ ದೇವಿಯ ಪುರಾಣ ಪ್ರಸಿದ್ಧ ಜಾತ್ರೆಯು ಇಂದಿನಿಂದ ಆರಂಭಗೊಂಡಿದ್ದು 29ರವರೆಗೆ ನಡೆಯಲಿದೆ. 
 
ಇಂದು ನಡೆಯುವ ಮಡೆ ಉತ್ಸವ ಜಾತ್ರೆಯ ವಿಶೇಷ. ದೇವಿಗೆ ಅರ್ಪಿಸಲು  ಮಡೆ ಅನ್ನವನ್ನು ಅಕ್ಕಿ, ಸೊಪ್ಪು ಮತ್ತು ವಿವಿಧ ತರಕಾರಿಗಳಿಂದ ಸಿದ್ಧಪಡಿಸಲಾಗುತ್ತದೆ. ಒಲೆಯ ಮೇಲೆ ಒಂದರ ಮೇಲೊಂದರಂತೆ ಹೊಸ ಗಡಿಗೆಗಳನ್ನು ಇಟ್ಟು ಅನ್ನವನ್ನು ಬೇಯಿಸಲಾಗುತ್ತದೆ.
 
ನಂತರ ಹರಕೆ ಹೊತ್ತ ನೂರಾರು ಭಕ್ತರು ಮತ್ತು ನವ ವಧುವರರು ಮಡೆ ಅನ್ನವಿರುವ ಹೊಸ ಗಡಿಗೆಗಳನ್ನು ಹೊತ್ತು ದೇವಿಯ ಉತ್ಸವದ ಹಿಂದೆ ಸಾಲಾಗಿ ಮೆರವಣಿಗೆಯಲ್ಲಿ ಸಾಗುತ್ತಾರೆ.
 
ರಾತ್ರಿಯಿಡೀ ಮೆರವಣಿಗೆ ನಡೆದ ನಂತರ ಮಡೆ ಗಡಿಗೆಗಳನ್ನು ದೇವಾಲಯದ ಒಳಗಿಟ್ಟು ಬಾಗಿಲು ಹಾಕಿಕೊಂಡು ಬರಲಾಗುತ್ತದೆ. ಅಲ್ಲಿಟ್ಟು ಬಂದ ಮಡೆ ಅನ್ನವನ್ನು ಹೊನ್ನಾದೇವಿ ಮತ್ತು ಏಳು ಜನ ಸಹೋದರಿಯರು ಊಟ ಮಾಡುತ್ತಾರೆಂಬ ಪ್ರತೀತಿ ಇದೆ.
 
ಜಾತ್ರೆಯ ಇನ್ನೊಂದು ಸೊಗಸು ಎಂದರೆ  ಸೋಮನ ಕುಣಿತ. ಇಂದು ಮತ್ತು 29ರಂದು ಈ ಕುಣಿತ ಕಾಣಬಹುದು. ಇಲ್ಲಿರುವ ಸೋಮಗಳ ಮುಖವಾಡಗಳು ಬೇರೆಲ್ಲೂ ಕಂಡು ಬರುವುದಿಲ್ಲವೆಂದು ಹಿರಿಯರು ಹೇಳುತ್ತಾರೆ.  ರಾತ್ರಿಯಲ್ಲಿ ನಡೆಯುವ ಈ ಕುಣಿತ ಐದು ನಿಗದಿತ ಸ್ಥಳಗಳಲ್ಲಿ ಮಾತ್ರ ನಡೆಯುತ್ತದೆ.
 
ಎರಡು ಮುಖವಾಡಗಳನ್ನು ಒಬ್ಬರೇ ಒಂದಾದ ಮೇಲೊಂದರಂತೆ ಧರಿಸಿಕೊಂಡು ಸೊಗಸಾಗಿ ನರ್ತಿಸುತ್ತಾರೆ. ಈ ಕುಣಿತಕ್ಕೆ ಇಂಪಾದ ವಾದ್ಯಗಳ ಹಿನ್ನೆಲೆಯಿರುತ್ತದೆ. ಇನ್ನು ಜಾತ್ರಾ ದಿನಗಳಲ್ಲಿ ರಥೋತ್ಸವ, ಬಾಯಿ ಬೀಗ, ಹಗಲು ಪರಿಷೆ ಮುಂತಾದ ಆಚರಣೆಗಳೂ ನಡೆಯುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT