ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತಕ್ಕೆ ಕೊನೆ ಎಂದು?

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕೊಳವೆಬಾವಿ ದುರಂತ ಮರುಕಳಿಸಿದೆ. ಮುಗ್ಧ ಮಕ್ಕಳು ಇಂಥ ಬಾವಿಗಳಿಗೆ ಬಲಿಯಾಗುತ್ತಿರುವುದು ಶೋಚನೀಯ. ದುರಂತ ಸಂಭವಿಸಿದಾಗ ಈ ವಿಚಾರ ದೊಡ್ಡ ಸುದ್ದಿಯಾಗುತ್ತದೆ. ಮಾಧ್ಯಮಗಳಲ್ಲಿ ಚರ್ಚೆ, ಅಲ್ಲಲ್ಲಿ ವಿಶೇಷ ಪ್ರಾರ್ಥನೆಗಳು... ಎಲ್ಲವೂ ನಡೆಯುತ್ತವೆ. ನಿಧಾನಕ್ಕೆ ಸರ್ಕಾರ  ಮಾತ್ರವಲ್ಲ ಜನರೂ ದುರಂತವನ್ನು ಮರೆಯುತ್ತಾರೆ.

ಆದರೆ  ಕೊಳವೆಬಾವಿ ತೆಗೆಸಿ ಯಾವುದೋ ಕಾರಣಕ್ಕೆ ಅದು ಬೇಡವೆನಿಸಿ ಅದನ್ನು ಮುಚ್ಚದೆ ಬಿಟ್ಟವರ ಜವಾಬ್ದಾರಿ ಏನು ಎಂಬ ಬಗ್ಗೆ ಯೋಚಿಸಬೇಕಾಗಿದೆ.  ಅದನ್ನು ಮುಚ್ಚಿಸದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಇಂತಹ ಅನಾಹುತಗಳು ರಸ್ತೆ ಅಪಘಾತಗಳಂತೆ ದೈನಂದಿನ ದುರಂತಗಳಾಗುತ್ತವೆ. ಕೊಳವೆಬಾವಿ ಮಾಲೀಕರು ಮತ್ತು ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ.
-ಪ್ರೊ. ಡಿ.ಎಸ್. ಮಂಜುನಾಥ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT