ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್‌ ದಾಳಿ ಐದು ಸಾವು

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಸೇನೆಯ ಬೆಂಗಾವಲು ಪಡೆಯನ್ನು ಗುರಿಯಾಗಿರಿಸಿ ನಡೆದ ಬಾಂಬ್‌ ದಾಳಿಯಲ್ಲಿ ಅರೆಸೇನಾ ಪಡೆಯ ನಾಲ್ಕು ಮಂದಿ ಯೋಧರು ಸೇರಿದಂತೆ ಐದು ಮಂದಿ ಸಾವಿಗೀಡಾಗಿದ್ದಾರೆ.

ಕೆಚ್‌ ಜಿಲ್ಲೆಯ ಮಂಡ್‌ ಪ್ರದೇಶದಲ್ಲಿ ಭಾನುವಾರ ಈ ದಾಳಿ ನಡೆದಿದ್ದು, ಸಾವನ್ನಪ್ಪಿದವರು ಫ್ರಾಂಟಿಯರ್‌ ಕ್ರಾಪ್ಸ್‌ಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಗ್ವಾದಾರ್‌ನಿಂದ ಮಂಡ್‌ ಪಟ್ಟಣಕ್ಕೆ ಸೇನಾ ಪಡೆ  ವಾಹನ ತೆರಳುತ್ತಿತ್ತು. ರಸ್ತೆ ಕೆಳಭಾಗದಲ್ಲಿ ಬಾಂಬ್‌ ಇಟ್ಟು, ರಿಮೋಟ್‌ ಕಂಟ್ರೋಲರ್‌ ಮುಖಾಂತರ ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಮಕ್ರಾನ್‌ ವಿಭಾಗದ ಪೊಲೀಸ್‌ ಕಮಿಷನರ್‌ ಬಶೀರ್‌ ಅಹ್ಮದ್‌ ತಿಳಿಸಿದ್ದಾರೆ. ದಾಳಿ ಹೊಣೆಯನ್ನು ಯಾವುದೇ ಸಂಘಟನೆ ಇದುವರೆಗೆ ಹೊತ್ತುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT