ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಚ್ಐವಿ ಸೋಂಕಿತರಿಗೆ ಉದ್ಯೋಗ ನಿರಾಕರಿಸುವಂತಿಲ್ಲ’

Last Updated 24 ಏಪ್ರಿಲ್ 2017, 20:00 IST
ಅಕ್ಷರ ಗಾತ್ರ

ನವದೆಹಲಿ: ಎಚ್‌ಐವಿ/ಏಡ್ಸ್‌ ಸೋಂಕಿತರಿಗೆ ಆ ಕಾರಣಕ್ಕಾಗಿ ಉದ್ಯೋಗ ನಿರಾಕರಿಸುವಂತಿಲ್ಲ ಹಾಗೂ ಕೆಲಸದಿಂದ ತೆಗೆದುಹಾಕುವಂತೆಯೂ ಇಲ್ಲ. ಅಷ್ಟೆ ಅಲ್ಲದೆ ಎಚ್‌ಐವಿ/ಏಡ್ಸ್‌ಗೆ ತುತ್ತಾದವರ ವಿರುದ್ಧ ದ್ವೇಷ ಭಾವನೆ ಹರಡುವುದು ಕಂಡುಬಂದರೆ ಕನಿಷ್ಠ ಮೂರು ತಿಂಗಳಿನಿಂದ ಎರಡು ವರ್ಷದವರೆಗೆ ಜೈಲುಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ.

ಮಾರಕ ಸೋಂಕು ಪೀಡಿತರ ಮೇಲಿನ ತಾರತಮ್ಯಗಳ ನಿವಾರಣೆಗೆ ಹೊಸ ಕಾನೂನು ಜಾರಿಗೆ ಬಂದಿದೆ. ಎಚ್‌ಐವಿ ಮತ್ತು ಏಡ್ಸ್‌ ತಡೆ ಹಾಗೂ ನಿಯಂತ್ರಣ ಕಾಯ್ದೆ, 2017ಕ್ಕೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸಹಿ ಹಾಕಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಸಂಬಂಧದ ಮಸೂದೆಗೆ ಏಪ್ರಿಲ್‌ 11ರಂದು ಲೋಕಸಭೆಯಲ್ಲಿ ಅನುಮೋದನೆ ದೊರಕಿತ್ತು. ಮಾರ್ಚ್‌ 21ರಂದು ರಾಜ್ಯಸಭೆಯೂ ಒಪ್ಪಿಗೆ ನೀಡಿತ್ತು. ಎಚ್‌ಐವಿ ಪಾಸಿಟಿವ್‌ ಹೊಂದಿರುವ ವ್ಯಕ್ತಿಗಳ ಆಸ್ತಿ ಮತ್ತು ಹಕ್ಕುಗಳನ್ನು ಈ ಕಾನೂನು ರಕ್ಷಿಸಲಿದೆ. ಅದಕ್ಕೆ ಚ್ಯುತಿ ತರುವುದು ಶಿಕ್ಷಾರ್ಹ ಅಪರಾಧವಾಗಲಿದೆ.

ಎಚ್‌ಐವಿ ಅಥವಾ ಏಡ್ಸ್‌ಗೆ ತುತ್ತಾಗಿರುವವರ ವಿರುದ್ಧ ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸುವಲ್ಲಿ ಯಾವುದೇ ತಾರತಮ್ಯ ಎಸಗುವುದನ್ನು ಕಾನೂನು ನಿಷೇಧಿಸುತ್ತದೆ.

ಸೋಂಕಿತ ವ್ಯಕ್ತಿಯ ಒಪ್ಪಿಗೆ ಇಲ್ಲದೆ ಪರೀಕ್ಷೆ, ವೈದ್ಯಕೀಯ ಚಿಕಿತ್ಸೆ ಅಥವಾ ಸಂಶೋಧನೆ ನಡೆಸುವಂತಿಲ್ಲ. ನ್ಯಾಯ ಪ್ರಕ್ರಿಯೆಗೆ ಅಗತ್ಯವಾದ ಸಂದರ್ಭದಲ್ಲಿ ನ್ಯಾಯಾಲಯದ ಆದೇಶದ ಹೊರತಾಗಿ ಅವರ ಎಚ್‌ಐವಿ ಸ್ಥಿತಿಗತಿಯ ಮಾಹಿತಿಬಹಿರಂಗಪಡಿಸುವಂತಿಲ್ಲ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT