ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಸ್‌ ಖಾನ್‌ 10 ಸಾವಿರ ರನ್

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕಿಂಗ್ಸ್‌ಟನ್‌, ಜಮೈಕಾ: ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ವೈಫಲ್ಯ ಕಂಡರೂ ನಂತರ ಬಾಬರ್‌ ಅಜಮ್‌ ಮತ್ತು ಯೂನಿಸ್‌ ಖಾನ್‌ ಅವರು ಅರ್ಧಶತಕಗಳನ್ನು ಗಳಿಸಿ ಆಸರೆಯಾದರು. ಇದರಿಂದ ಪಾಕಿಸ್ತಾನ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಸಾಗಿದೆ.

ಅರ್ಧಶತಕ: ಆರಂಭಿಕ ಬ್ಯಾಟ್ಸ್‌ಮನ್‌ ಗಳಾದ ಅಜರ್‌ ಅಲಿ ಹಾಗೂ ಅಹ್ಮದ್ ಶೆಹ್ಜಾದ್ ಬೇಗನೆ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ಅಜಮ್‌ 201 ಎಸೆತಗಳನ್ನು ಎದುರಿಸಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 72 ರನ್ ಗಳಿಸಿದರು.

ಯೂನಿಸ್‌ 138 ಎಸೆತ ಗಳನ್ನು ಆಡಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 58 ರನ್ ಬಾರಿಸಿದರು. ಈ ಪಂದ್ಯಕ್ಕೂ ಮೊದಲು ಯೂನಿಸ್‌  ಒಟ್ಟು 9977 ರನ್ ಗಳಿಸಿದ್ದರು.

ಇಲ್ಲಿ 23 ರನ್ ಕಲೆ ಹಾಕಿದ್ದಾಗ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹತ್ತು ಸಾವಿರ ರನ್ ಗಳಿಸಿದ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ ಮನ್‌ ಎನ್ನುವ ದಾಖಲೆಗೆ ಪಾತ್ರರಾದರು. 

ಸಂಕ್ಷಿಪ್ತ ಸ್ಕೋರು: ವೆಸ್ಟ್‌ ಇಂಡೀಸ್‌ 95 ಓವರ್‌ಗಳಲ್ಲಿ 286. ಪಾಕಿಸ್ತಾನ ಮೊದಲ ಇನಿಂಗ್ಸ್‌ 78.2 ಓವರ್‌ಗಳಲ್ಲಿ 4 ವಿಕೆಟ್‌ಗೆ 201 ( ಅಹ್ಮದ್ ಶೆಹ್ಜಾದ್ 31, ಬಾಬರ್‌ ಅಜಮ್‌ 72, ಯೂನಿಸ್ ಖಾನ್‌ 58; ಶನಾನ್‌ ಗ್ಯಾಬ್ರಿಯೆಲ್‌ 37ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT