ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ಗೆ ಜನ್ಮದಿನದ ಸಂಭ್ರಮ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್ ಅವರು ಸೋಮವಾರ 44ನೇ ವಸಂತಕ್ಕೆ ಕಾಲಿಟ್ಟರು. ಈ ವೇಳೆ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪುಣೆ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್‌ ಪಂದ್ಯದ ವೇಳೆ ಸಚಿನ್‌ ಕೇಕ್‌ ಕತ್ತರಿಸಿದರು. ಇದಕ್ಕೂ ಮೊದಲು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಅವರು ಕುಟುಂಬ ಸದಸ್ಯರ ಜೊತೆ ಕೇಕ್‌ ಕತ್ತರಿಸಿದರು. ಪತ್ನಿ ಅಂಜಲಿ ಅವರು ಸಚಿನ್‌ಗೆ ಕೇಕ್‌ ತಿನ್ನಿಸಿದರು. ಪುತ್ರಿ ಸಾರಾ, ಪುತ್ರ ಅರ್ಜುನ್‌, ತಾಯಿ ರಜನಿ ಸೇರಿದಂತೆ ಇತರರು ಇದ್ದರು.

‘ಜನ್ಮ ದಿನದ ಶುಭಾಶಯಗಳು ಪಾಜಿ. ದೇವರು ನಿಮಗೆ ಒಳ್ಳೆಯದು ಮಾಡಲಿ. ನನ್ನ ಪಾಲಿಗೆ ಯಾವಾಗಲೂ ನೀವೇ ಕ್ರಿಕೆಟ್ ಹೀರೊ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

ಕ್ರಿಕೆಟಿಗರಾದ ರವಿಚಂದ್ರನ್‌ ಅಶ್ವಿನ್‌,  ಭಾರತ ತಂಡದ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ, ಗೌತಮ್ ಗಂಭೀರ್, ಹರಭಜನ್‌ ಸಿಂಗ್, ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ.

‘ವಿಶೇಷ ದಿನ, ವಿಶೇಷ ವ್ಯಕ್ತಿ ಮತ್ತು  ವಿಶೇಷ ಆಚರಣೆ. ನಿಮ್ಮ ಎಲ್ಲಾ ಕನಸು ಗಳು ನನಸಾಗಲಿ’ ಎಂದು ಬೌಲರ್ ಉಮೇಶ್‌ ಯಾದವ್ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT