ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌: ಚಿನ್ನ ಗೆದ್ದ ಮನಪ್ರೀತ್ ಕೌರ್‌

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಜೆನ್‌ ಹುವಾ, ಚೀನಾ:  ಭಾರತದ ಮನಪ್ರೀತ್ ಕೌರ್ ಇಲ್ಲಿ ನಡೆದ ಏಷ್ಯನ್ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಕ್ರೀಡಾ ಕೂಟದ ಮೊದಲ ಲೆಗ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಕೊಂಡರು.

ಮನಪ್ರೀತ್‌ 18.86 ಮೀಟರ್ಸ್‌ ದೂರ ಎಸೆದು ಈ ಸಾಧನೆ ಮಾಡಿದರು. 2015ರಲ್ಲಿ ತಮ್ಮದೇ ಹೆಸರಿನಲ್ಲಿದ್ದ (17.96 ಮೀ.) ದಾಖಲೆಯನ್ನು ಉತ್ತಮ ಪಡಿಸಿಕೊಂಡು ಇದೇ ವರ್ಷದ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ಆಯೋಜನೆ ಯಾಗಿರುವ ಐಎಎಫ್‌ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡರು.

ಈ ಕ್ರೀಡಾಕೂಟದಲ್ಲಿ ಮೊದಲ ದಿನ ಭಾರತ ಒಟ್ಟು ಏಳು ಪದಕಗಳನ್ನು ಜಯಿ ಸಿತು. ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಬಂದವು.

ಪುರುಷರ ಜಾವಲಿನ್‌ ಎಸೆತದಲ್ಲಿ ನೀರಜ್ ಚೋಪ್ರಾ (ದೂರ: 82.11ಮೀ.), ಮಹಿಳೆಯರ 800 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಟಿಂಟು ಲೂಕಾ (2:03.50ಸೆ.), ಮಹಿಳೆಯರ ಲಾಂಗ್ ಜಂಪ್‌ನಲ್ಲಿ ವಿ. ನೀನಾ (ಎತ್ತರ: 6.46 ಮೀ.) ಮತ್ತು ಪುರುಷರ 800 ಮೀಟರ್ಸ್ ಓಟದ ವಿಭಾಗದಲ್ಲಿ ಜಿನ್ಸನ್‌
ಜಾನ್ಸನ್‌ (ಕಾಲ: 1:50.71ಸೆ.) ಬೆಳ್ಳಿ ಪದಕ ಜಯಿಸಿದರು.

ಮಹಿಳೆಯರ 100 ಮೀಟರ್ಸ್ ಓಟದಲ್ಲಿ ದ್ಯುತಿ ಚಾಂದ್‌ (ಕಾಲ: 11.59ಸೆ.)  ಮತ್ತು ಪುರುಷರ ಶಾಟ್‌ಪಟ್‌ನಲ್ಲಿ ಓಂ ಪ್ರಕಾಶ್‌ ಖರಾನ (ದೂರ: 18.41 ಮೀ.) ಕಂಚು ತಮ್ಮದಾಗಿಸಿಕೊಂಡರು.

ಭಾರತದ ಇತರ ಅಥ್ಲೀಟ್‌ಗಳಾದ ವಿದ್ಯಾಸಾಗರ್ (100 ಮೀ.) ಅನರ್ಹಗೊಂಡರು. ಟ್ರಿಪಲ್‌ಜಂಪ್‌ನಲ್ಲಿ  ರಾಕೇಶ್ ಬಾಬು ನಾಲ್ಕನೇ ಸ್ಥಾನ, ಜಾವಲಿನ್ ಎಸೆತದಲ್ಲಿ ರವೀಂದರ್ ಸಿಂಗ್ ಆರನೇ ಸ್ಥಾನ, ಮಹಿಳಾ ವಿಭಾಗದಲ್ಲಿ ರೀನಾ ಜಾರ್ಜ್‌ (100ಮೀ.) ಒಂಬತ್ತನೇ ಸ್ಥಾನ ಮತ್ತು ಹೈಜಂಪ್‌ನಲ್ಲಿ ಜಿನು ಮರಿಯಾ ಒಂಬತ್ತನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT